ನೀರಾವರಿ ಯೋಜನೆ ಜಾರಿಗೆ ಶ್ರೀಗಳ ಸಂಕಲ್ಪವೇ ಕಾರಣ: ರಾಜೇಶ್‌ಗೌಡ

| Published : Feb 09 2024, 01:47 AM IST

ನೀರಾವರಿ ಯೋಜನೆ ಜಾರಿಗೆ ಶ್ರೀಗಳ ಸಂಕಲ್ಪವೇ ಕಾರಣ: ರಾಜೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿಗೆ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ನಂಜಾವಧೂತ ಶ್ರೀಗಳು ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶ ಮಾಡಿ ತಾಲೂಕಿಗೆ ನೀರಾವರಿ ಯೋಜನೆಗಳನ್ನು ತರಲೇಬೇಕೆಂದು ಒತ್ತಾಯಿಸಿದ ಪರಿಣಾಮವಾಗಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಿತು. ಅಪ್ಪರ್‌ ಭದ್ರ ಯೋಜನೆಯಲ್ಲಿ ತಾಲೂಕಿನ ೬೫ ಕೆರೆಗಳು ಸೇರ್ಪಡೆಯಾದವು ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿಗೆ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ನಂಜಾವಧೂತ ಶ್ರೀಗಳು ತಮ್ಮ ಹುಟ್ಟು ಹಬ್ಬವನ್ನು ನೀರಾವರಿ ಹಕ್ಕೊತ್ತಾಯ ಸಮಾವೇಶ ಮಾಡಿ ತಾಲೂಕಿಗೆ ನೀರಾವರಿ ಯೋಜನೆಗಳನ್ನು ತರಲೇಬೇಕೆಂದು ಒತ್ತಾಯಿಸಿದ ಪರಿಣಾಮವಾಗಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಯಿತು. ಅಪ್ಪರ್‌ ಭದ್ರ ಯೋಜನೆಯಲ್ಲಿ ತಾಲೂಕಿನ ೬೫ ಕೆರೆಗಳು ಸೇರ್ಪಡೆಯಾದವು ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 21ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಪ್ಪರ್‌ ಭದ್ರ ಯೋಜನೆಯಲ್ಲಿ ಸುಮಾರು ೬೫ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ನಡೆಯುತ್ತಿದೆ. ಶೇ. 90 ರಷ್ಟು ಕಾಮಗಾರಿ ಮುಗಿದಿದೆ ಶ್ರೀಘದಲ್ಲಿಯೇ ಕೆರೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ. ಬಯಲುಸೀಮೆ ಪ್ರದೇಶವಾದ ಶಿರಾ ತಾಲೂಕಿಗೆ ನೀರಾವರಿ ಯೋಜನೆಗಳನ್ನು ತರಬೇಕೆಂಬ ಸಂಕಲ್ಪ ಮಾಡಿ ಯಶಸ್ವಿಯಾಗಿರುವ ಶ್ರೀ ನಂಜಾವಧೂತ ಸ್ವಾಮೀಜಿಯವರ ದೂರದೃಷ್ಟಿ ಕಲ್ಪನೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜ ಮಾತನಾಡಿ, ಪಟ್ಟನಾಯಕನಹಳ್ಳಿ ಶ್ರೀ ಓಂಕಾರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರೈತರಿಗೆ ಅನುಕೂಲವಾಗಲಿ, ರೈತರಿಗೆ ಹೊಸತನದ ಕೃಷಿ ವಿಷಯ ತಿಳಿಯಲಿ ಎಂಬ ಉದ್ದೇಶದಿಂದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಏರ್ಪಡಿಸುತ್ತಾ ಬಂದಿದ್ದಾರೆ. ಸುಮಾರು ೨೧ ವರ್ಷಗಳಿಂದ ಉತ್ತಮವಾಗಿ ವಸ್ತುಪ್ರದರ್ಶನ ನಡೆದುಕೊಂಡು ಬಂದು ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಯಶಸ್ವಿಯಾಗಿದೆ. ಇದಕ್ಕೆ ನಂಜಾವಧೂತ ಶ್ರೀಗಳ ಸಂಕಲ್ಪವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಅಡಿಷನಲ್ ಎಸ್ಪಿ ಮರಿಯಪ್ಪ, ಡಿ.ವೈ.ಎಸ್.ಪಿ ಶೇಖರ್‌, ರಾಜರಾಜೇಶ್ವರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥ ಗೌಡ, ನಾದೂರು ಗ್ರಾಪಂ ಉಪಾಧ್ಯಕ್ಷೆ ತುಳಸಿ ಮಧುಸೂದನ್, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್‌ ರಾಘವೇಂದ್ರ, ಪಶು ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್‌, ವರಕೇರಪ್ಪ ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಉತ್ತಮ ರಾಸುಗಳಿಗೆ ನಗದು ಬಹುಮಾನ, ಉತ್ತಮ ಮಳಿಗೆ ಪ್ರಶಸ್ತಿ ಪತ್ರ, ಆರೋಗ್ಯವಂತ ಮಗುವಿಗೆ ಪ್ರಶಸ್ತಿ ಪತ್ರ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.Quote

ರೈತರು ಬದಲಾದ ಪರಿಸ್ಥಿತಿಯಲ್ಲಿ ಇಂದು ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಿದೆ. ಸರಕಾರಗಳು ಕೃಷಿಗೆ ಉತ್ತೇಜನ ಕೊಡುವ ಕೆಲಸ ಮಾಡಬೇಕು. ಕೇವಲ ಆಶ್ವಾಸನೆಗಳನ್ನು ನೀಡಿ ಸುಮ್ಮನಾಗಬಾರದು. ಸಣ್ಣಪುಟ್ಟ ಸಬ್ಸಿಡಿ ಆಸೆಗಳಿಂದ ರೈತರ ಜೀವನ ಸಧೃಡವಾಗುವುದಿಲ್ಲ. ದೂರದೃಷ್ಟಿ ಯೋಜನೆಗಳು ದೂರ ಉಳಿಯದೇ ರೈತಾಪಿ ವರ್ಗಕ್ಕೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಆಹಾರದ ಕೊರತೆಯಿಂದ ಉಂಟಾಗುವ ಹಾನಿಯನ್ನು ತಡೆಯಲು ಸಾಧ್ಯವಿಲ್ಲ.

ನಂಜಾವಧೂತ ಸ್ವಾಮೀಜಿ