ಸಾರಾಂಶ
ಬೀದರ್ ನಗರದ ನೌಬಾದ ಹತ್ತಿರದ ಶಾರದಾ ರೂಡಸೆಟ್‌ನಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸಾಮಾನ್ಯ ಸಭೆ ಜರುಗಿತು.
ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ಜ್ಯಾಂತಿಕರ್ ಅಭಿಮತ
ಕನ್ನಡಪ್ರಭ ವಾರ್ತೆ ಬೀದರ್
ಸಹಕಾರ ಕಾಯ್ದೆ ಜಾರಿಗೆ ಬಂದ ನಂತರ ದೇಶದ ಎಲ್ಲಾ ಸರ್ಕಾರಗಳು ಮೇಲಿಂದ ಮೇಲೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಹಕಾರಿಗಳ ಸ್ವಾತಂತ್ರ್ಯಕಿತ್ತುಕೊಂಡಿವೆ ಎಂದು ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ನುಡಿದರು.ನಗರದ ನೌಬಾದ್ ಹತ್ತಿರದ ಶಾರದಾ ರೂಡಸೆಟ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ 13ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಎಲ್ಲಾ ಸಹಕಾರಿಗಳು ಒಗ್ಗಟಾಗಿ ಸರ್ಕಾರದ ನೀತಿಯ ವಿರುದ್ಧ ಹೊರಾಡಬೇಕಾಗಿದೆ ಎಂದು ಕರೆ ನೀಡಿದರು.ಸಹಕಾರಿಯ ವಾರ್ಷಿಕ ವರದಿಯನ್ನು ನಿರ್ದೇಶಕ ಬಸವರಾಜ ಹುಡಗೆ ಮಂಡಿಸಿದರು, ಒಕ್ಕೂಟ ಉಪಾಧ್ಯಕ್ಷರಾದ ಸಂಜೀವಕುಮಾರ ಪಾಟೀಲ್ 2023-24ನೇ ಸಾಲಿನ ಲೆಕ್ಕ ಪರಿಶೋಧನೆ ವರದಿ ಮಂಡಿಸಿದರು. ಹಿಂದಿನ ಸಾಲಿನ ಸಭಾ ನಡಾವಳಿ ಮತ್ತು ನಿರ್ಣಯವನ್ನು ಕಾಶೆಪ್ಪ ಕರಂಜೆ ಓದಿದರು, 2023-24ನೇ ಸಾಲಿಗೆ ಸದಸ್ಯತ್ವ ಪಡೆದ ಸದಸ್ಯತ್ವವನ್ನು ಶಿವಬಸಪ್ಪ ಚನ್ನಮಲ್ಲೆ ಮಂಡಿಸಿ ಅನುಮೊದನೆ ಪಡೆದುಕೊಂಡರು. ಸಹಕಾರಿಯ ಅಂದಾಜು ಆಯವ್ಯಯ ವನ್ನು ಸಂಜೀವಕುಮಾರ ಸಜ್ಜನ್ ಮಂಡಿಸಿದರೆ, ವಾರ್ಷಿಕ ಕ್ರಿಯಾ ಯೋಜನೆಯನ್ನು ಶ್ರೀಕಾಂತ ಸ್ವಾಮಿ ಸೋಲಪೂರ ವಾಚನ ಮಾಡಿದರು. 2024-25ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿಯ ಕುರಿತು ರಾಜಶೇಖರ ನಾಗಮೂರ್ತಿ ಅನುಮೋದನೆ ಪಡೆದರು.
ಇದೇ ವೇಳೆ ರೈತ ಉತ್ಪಾದಕ ಕಂಪನಿಯ ಮೂಲಕ ರೈತರಿಗೆ ನೀಡಿರುವ ಸೇವೆಯನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿಗೆ ಪುರಸ್ಕೃತರಾದ ಕಂಪನಿಯ ಮುಖ್ಯಸ್ಥ ಜಗನಾಥ ಕರಂಜೆ ಅವರಿಗೆ ಹಾಗೂ ಗೌರವ ಡಾಕ್ಟರೇಟ್ ಪಡೆದ ಡಾ.ಮಾರುತಿ ವಾಡೆಕರ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ಸಹಕಾರಿಗಳು ಇದ್ದರು.