ಆನ್‌ಲೈನ್‌ ಗೇಮ್ ನಿಷೇಧಕ್ಕೆ ಕಾಯ್ದೆ ತಂದಿರುವುದು ಸ್ವಾಗತ

| Published : Aug 23 2025, 02:00 AM IST

ಸಾರಾಂಶ

ಕೇಂದ್ರ ಸರ್ಕಾರ ನಮ್ಮ ಬಹುದಿನದ ಆಗ್ರಹವಾದ ಆನ್‌ಲೈನ್‌ ರಮ್ಮಿ ಗೇಮ್ ನಿಷೇಧ ಮಾಡಲು ಕಾಯ್ದೆ ತಂದಿರುವುದು ಸಂತೋಷವಾಗಿದ್ದು, ಅದೇ ರೀತಿ ರಾಜ್ಯ ಸರ್ಕಾರ ಕಬಿನಿ ಬಲದಂಡೆ ನಾಲೆ ಅಭಿವೃದ್ದಿಪಡಿಸಲು ಸರ್ವೇಗೆ ೧೨೦ ಕೋಟಿ ರು. ಅನುದಾನ ನೀಡಿರುವುದಕ್ಕೆ ಅಭಿನಂದಿಸುವುದಾಗಿ ರಾಜ್ಯ ರೈತ ಸಂಘದ ಖಾಯಂ ಸದಸ್ಯ ಹೆಗ್ಗವಾಡಿಪುರ ಎಚ್.ಸಿ. ಮಹೇಶ್‌ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಂದ್ರ ಸರ್ಕಾರ ನಮ್ಮ ಬಹುದಿನದ ಆಗ್ರಹವಾದ ಆನ್‌ಲೈನ್‌ ರಮ್ಮಿ ಗೇಮ್ ನಿಷೇಧ ಮಾಡಲು ಕಾಯ್ದೆ ತಂದಿರುವುದು ಸಂತೋಷವಾಗಿದ್ದು, ಅದೇ ರೀತಿ ರಾಜ್ಯ ಸರ್ಕಾರ ಕಬಿನಿ ಬಲದಂಡೆ ನಾಲೆ ಅಭಿವೃದ್ದಿಪಡಿಸಲು ಸರ್ವೇಗೆ ೧೨೦ ಕೋಟಿ ರು. ಅನುದಾನ ನೀಡಿರುವುದಕ್ಕೆ ಅಭಿನಂದಿಸುವುದಾಗಿ ರಾಜ್ಯ ರೈತ ಸಂಘದ ಖಾಯಂ ಸದಸ್ಯ ಹೆಗ್ಗವಾಡಿಪುರ ಎಚ್.ಸಿ. ಮಹೇಶ್‌ಕುಮಾರ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು ಆನ್‌ಲೈನ್‌ ಗೇಮಿನಿಂದ ೨ ಲಕ್ಷ ಕೋಟಿ ರು. ಜಿಎಸ್‌ಟಿ ಬರುತ್ತಿದ್ದರು. ಅದನ್ನು ಲೆಕ್ಕಿಸದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆನ್‌ಲೈನ್‌ ಗೇಮ್ ನಿಷೇಧ ೨೦೨೫ ಕಾಯ್ದೆ ಜಾರಿಗೆ ತಂದಿರುವುದು ಅತ್ಯಂತ ಸಂತೋಷವಾಗಿದೆ ಎಂದರು.

ದೇಶಾದ್ಯಂತ ಸುಮಾರು ೫೦ ಕೋಟಿಗೂ ಹೆಚ್ಚು ಜನ ಇಂತಹ ಆನ್‌ಲೈನ್‌ ಹಣ ಇಟ್ಟು ಆಡುವ ಗೇಮ್ ಗಳಿಗೆ ಬಲಿ ಆಗಿದ್ದು, ಇದರ ಒಟ್ಟು ವ್ಯವಹಾರ ಸುಮಾರು ೨೫ ರಿಂದ ೩೦ ಸಾವಿರ ಕೋಟಿ ರು.ಗೂ ಮೀರಿದೆ. ಈ ದುಶ್ಚಟಕ್ಕೆ ಬಲಿಯಾಗಿ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿ ಹಣ ಆಸ್ತಿಯನ್ನು ಕಳೆದುಕೊಂಡು ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರು.ಇದರ ಬಗ್ಗೆ ರೈತ ಸಂಘ ಹಾಗೂ ಹಸಿರುಸೇನೆ ಹೋರಾಟ ಮಾಡುತ್ತಲೇ ಬಂದಿತ್ತು, ಕೇಂದ್ರ ಇದರ ಬಗ್ಗೆ ಅರಿತು ಆನ್‌ಲೈನ್‌ ಗೇಮ್ ನಿಷೇಧ ೨೦೨೫ ಜಾರಿ ಮಾಡಿರುವುದು ಅತ್ಯಂತ ಸ್ವಾಗತಾರ್ಹ, ರಾಜ್ಯ ಸರ್ಕಾರ ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ನಮ್ಮ ಬಹುದಿನದ ಬೇಡಿಕೆಯಾದ ಕಬಿನಿ ೨ನೇ ಹಂತದ ಜಾರಿಗೆ ಮೂರು ಪಕ್ಷದ ಸರ್ಕಾರಗಳು ಮನಸ್ಸು ಮಾಡಿರಲಿಲ್ಲ, ಈಗ ರಾಜ್ಯ ಸರ್ಕಾರ ಕಬಿನಿ ಬಲದಂಡೆ ನಾಲೆ ಅಭಿವೃದ್ದಿ ೫೦೦ ಕೋಟಿ ರು. ಅಂದಾಜಿಸಿ ಸರ್ವೇಗೆ ೧೨೦ ಕೋಟಿ ರು. ಬಿಡುಗಡೆ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿರುವುದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದಕ್ಕಾಗಿ ಸದನದಲ್ಲಿ ವಿಚಾರ ಪ್ರಸ್ತಾಪಿಸಿ ಗಮನ ಸೆಳೆದು ಮನವರಿಕೆ ಮಾಡಿಕೊಟ್ಟ ಶಾಸಕ ಎ.ಆರ್. ಕೃಷ್ಣಮೂರ್ತಿಯವರನ್ನು ಅಭಿನಂದಿಸುವುದಾಗಿ ಹೇಳಿದರು.

ಸರ್ಕಾರ ಕೂಡಲೇ ಕಬ್ಬಿನ ಬಾಕಿ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ವಿಧಾನಸೌಧದ ಖಜಾನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಬ್ಬಸೂರು ಬಸವಣ್ಣ, ಹನೂರು ಅಮ್ಜದ್‌ಖಾನ್, ಕೂಡ್ಲೂರು ವೆಂಕಟೇಶ್, ಶಾಂತಿ, ಅನಿಯಮ್ಮ, ಮಣಿ ಇದ್ದರು.