ಸಾರಾಂಶ
ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದ ಅಂಗವಾಗಿ ಕಾವೇರಿ ಪ್ರತಿಮೆ ಇರುವ ಸ್ಥಳವನ್ನು ನವವಧುವಿನಂತೆ ಸಿಂಗರಿಸಲಾಗಿತ್ತು. ಹಸಿರು ತೋರಣ, ಹೂವುಗಳಿಂದ ಅಣೆಕಟ್ಟೆಯ ಮೇಲ್ಭಾಗವನ್ನು ಅಲಂಕರಿಸಲಾಗಿತ್ತು. ಅಣೆಕಟ್ಟೆಯುದ್ದಕ್ಕೂ ಕನ್ನಡದ ಬಾವುಟಗಳನ್ನು ಕಟ್ಟಿ ಕನ್ನಡಮಯಗೊಳಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದ ಅಂಗವಾಗಿ ಕಾವೇರಿ ಪ್ರತಿಮೆ ಇರುವ ಸ್ಥಳವನ್ನು ನವವಧುವಿನಂತೆ ಸಿಂಗರಿಸಲಾಗಿತ್ತು. ಹಸಿರು ತೋರಣ, ಹೂವುಗಳಿಂದ ಅಣೆಕಟ್ಟೆಯ ಮೇಲ್ಭಾಗವನ್ನು ಅಲಂಕರಿಸಲಾಗಿತ್ತು. ಅಣೆಕಟ್ಟೆಯುದ್ದಕ್ಕೂ ಕನ್ನಡದ ಬಾವುಟಗಳನ್ನು ಕಟ್ಟಿ ಕನ್ನಡಮಯಗೊಳಿಸಲಾಗಿತ್ತು.ಕಾವೇರಿ ಪ್ರತಿಮೆಗೆ ಮಲ್ಲಿಗೆ ಮೊಗ್ಗಿನ ಹಾರವನ್ನು ಹಾಕಲಾಗಿತ್ತು. ಕೆಳಭಾಗದಲ್ಲಿ ತೆಂಗಿನ ಗರಿಯಿಂದ ಹೆಣೆದ ಚಪ್ಪರವನ್ನು ನಿರ್ಮಿಸಿ ಒಂದೆಡೆ ಹಳದಿ ಮತ್ತು ಕೆಂಪು ವರ್ಣದ ಹೂವುಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು. ಅಣೆಕಟ್ಟೆಯ ಮೇಲ್ಭಾಗದಲ್ಲಿ ಭಾರೀ ಬಿಗಿಭದ್ರತೆ ಆಯೋಜಿಸಲಾಗಿತ್ತು.
ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 124.60 ಅಡಿ
ಒಳ ಹರಿವು – 52,277 ಕ್ಯುಸೆಕ್ಹೊರ ಹರಿವು – 68,202 ಕ್ಯುಸೆಕ್
ನೀರಿನ ಸಂಗ್ರಹ – 49.173 ಟಿಎಂಸಿ