ಕನ್ನಡಪ್ರಭ ವಾರ್ತೆ ಬೈಲಹೊಂಗಲ ರಾಜಕಾರಣ ಎನ್ನುವುದು ಜನಸೇವೆಯ ಒಂದು ಮಾರ್ಗ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದೇವೆ. ಅಧಿಕಾರ ಇದ್ದಾಗ ಮಾತ್ರವಲ್ಲ, ಅಧಿಕಾರ ಇಲ್ಲದಿದ್ದರೂ ಜನರ ವಿಶ್ವಾಸ, ಪ್ರೀತಿ ನಮ್ಮ ಕುಟುಂಬದ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಬಿಜೆಪಿ ಮುಖಂಡ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ಉದ್ಯಮಿ ವಿಜಯ ಮೆಟಗುಡ್ಡ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಜಕಾರಣ ಎನ್ನುವುದು ಜನಸೇವೆಯ ಒಂದು ಮಾರ್ಗ. ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದೇವೆ. ಅಧಿಕಾರ ಇದ್ದಾಗ ಮಾತ್ರವಲ್ಲ, ಅಧಿಕಾರ ಇಲ್ಲದಿದ್ದರೂ ಜನರ ವಿಶ್ವಾಸ, ಪ್ರೀತಿ ನಮ್ಮ ಕುಟುಂಬದ ಮೇಲೆ ವಿಶ್ವಾಸ ಇಟ್ಟಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಬಿಜೆಪಿ ಮುಖಂಡ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ, ಉದ್ಯಮಿ ವಿಜಯ ಮೆಟಗುಡ್ಡ ಹೇಳಿದರು.ಪಟ್ಟಣದ ಬೈಪಾಸ್ ರಸ್ತೆಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಉದ್ಯಮಿ ವಿಜಯ ಮೆಟಗುಡ್ಡ ಅವರ 49 ನೇ ಹುಟ್ಟುಹಬ್ಬ ಅಂಗವಾಗಿ ತಾಯಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ಘಾಟಿಸಿ, ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿ, ಅಧಿಕಾರ, ಆಸ್ತಿ-ಸಂಪತ್ತು ಹಾಗೂ ಸ್ಥಾನಮಾನಗಳು ಜೀವನದಲ್ಲಿ ಶಾಶ್ವತವಲ್ಲ. ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ಬದುಕಿನ ನಿಜವಾದ ಸಂಪತ್ತಾಗಿದ್ದು, ಪರೋಪಕಾರವೇ ಪ್ರತಿ ಮನುಷ್ಯನ ಧ್ಯೇಯವಾಗಬೇಕು ಎಂದರು.ಮೆಟಗುಡ್ಡ ಕುಟುಂಬದ ಹಿರಿಯರು ತೋರಿದ ಆದರ್ಶದ ಹಾದಿಯಲ್ಲಿ ನಡೆಯುವುದು ನನ್ನ ಸಂಕಲ್ಪವಾಗಿದೆ. ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕೆಲಸಗಳಿಗೆ ಸದಾ ಬದ್ಧನಾಗಿರುವುದಾಗಿ ಭರವಸೆ ನೀಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ಮುಖಂಡ ಸಂಕಲ್ಪ ಶೆಟ್ಟರ ಮಾತನಾಡಿ, ಉದ್ಯಮಿ ವಿಜಯ ಮೆಟಗುಡ್ಡ ಅವರು ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಿರುವುದು ಶ್ಲಾಘನೀಯ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅವರ ಸೇವಾ ಮನೋಭಾವ ಸಮಾಜದಲ್ಲಿ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಸ್ಥಾನಮಾನ ಸಿಗುವಂತಾಗಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಜಗದೀಶ ಮೆಟಗುಡ್ಡ, ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ. ಇಂತಹ ಕಾರ್ಯಗಳು ಸಮಾಜಕ್ಕೆ ಪ್ರೇರಣೆಯಾಗಿವೆ ಎಂದರು.
ಮೂರು ಸಾವಿರಮಠದ ಪ್ರಭುನೀಲಕಂಠ ಶ್ರೀಗಳು, ಇಂಚಲದ ಪೂರ್ಣಾನಂದ ಭಾರತಿ ಶ್ರೀಗಳು, ಬೇವಿನಕೊಪ್ಪದ ವಿಜಯಾನಂದ ಶ್ರೀ, ಮನಸೂರಿನ ಡಾ.ಬಸವ ದೇವರು, ರುದ್ರಾಕ್ಷಿಮಠದ ಬಸವಲಿಂಗ ಶ್ರೀಗಳು, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಹೂಲಿಮಠದ ಉಮೇಶ ಸ್ವಾಮೀಜಿ, ಯಕ್ಕುಂಡಿಯ ಪಂಚಾಕ್ಷರ ಸ್ವಾಮೀಜಿ, ಶಿವಾನಂದ ಮಠದ ಮಹಾದೇವ ಸ್ವಾಮಿಗಳು, ಏಣಗಿಯ ಬಂಗಾರಜ್ಜನವರು, ವೇದಮೂರ್ತಿ ಡಾ.ಮಹಾಂತೇಶ ಶಾಸ್ತ್ರೀಗಳು ಆರಾದ್ರಿಮಠ, ಬಗಳಾಂಬ ದೇವಸ್ಥಾನದ ಡಾ.ವೀರಯ್ಯ ಮಹಾಸ್ವಾಮಿಗಳು, ಸಂಜು ತೆಗ್ಗಿನಮಠ ಶಾಸ್ತ್ರಿಗಳು ಸಾನಿಧ್ಯವಹಿಸಿದ್ದರು.ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕೆಎಲ್‌ಇ ಮಾಜಿ ನಿರ್ದೇಶಕ ಎಸ್.ಸಿ.ಮೆಟಗುಡ್ಡ, ಕಸಾಪ ಜಿಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಅರ್ಬನ ಬ್ಯಾಂಕ್ ಅಧ್ಯಕ್ಷ ಬಿ.ಎಚ್.ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ನಿಂಗಪ್ಪ ಚೌಡನ್ನವರ, ಪ್ರಫುಲ್ ಪಾಟೀಲ, ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಶಿವಾನಂದ ಬಡ್ಡಿಮನಿ, ಸಚಿನ ಕಡಿ, ಸಂತೋಷ ಹಡಪದ, ಸುಭಾಸ ತುರಮರಿ ಸೇರಿದಂತೆ ಮತಕ್ಷೇತ್ರದ ಹಿರಿಯರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 252 ಜನರು ರಕ್ತದಾನ ಮಾಡಿದರು. ನೇತ್ರ ತಪಾಸಣೆಯಲ್ಲಿ 365 ಜನರು ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ 600 ಜನರು ಪ್ರಯೋಜನ ಪಡೆದರು. ಯುವಕರಿಗೆ 1,800 ಉಚಿತ ಕಲಿಕಾ ಚಾಲನಾ ಪರವಾನಗಿಗಳನ್ನು ವಿತರಿಸಲಾಯಿತು. ವಿಶೇಷಚೇತನರಿಗೆ ಸ್ಕೂಟಿ ಹಾಗೂ ತ್ರಿಚಕ್ರ ಸೈಕಲ್ ವಿತರಿಸಲಾಯಿತು. ನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.------
ಕೋಟ್ಕಳೆದ ಐದಿನೈದು ವರ್ಷಗಳಿಂದ ನಮ್ಮ ಕುಟುಂಬಕ್ಕೆ ಅಧಿಕಾರ ಇಲ್ಲದಿದ್ದರು ಅಧಿಕಾರವಿದ್ದ ಸಮಯದಲ್ಲಿ ಸೇರಿದ ಅಭಿಮಾನಿಗಳು ಅಧಿಕಾರ ಇಲ್ಲದಿದ್ದ ಸಮಯದಲ್ಲಿಯೂ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ನಮಗೆ ಅಶೀರ್ವದಿಸಿದ್ದಾರೆ. ಕ್ಷೇತ್ರದ ಜನತೆ, ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿದ್ದೇನೆ. ವಿಜಯ ಮೆಟಗುಡ್ಡ, ಬಿಜೆಪಿ ಮುಖಂಡರು, ಕೆಎಲ್‌ಇ ನಿರ್ದೇಶಕರು ಬೆಳಗಾವಿ