ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಂಸ್ಥೆಯ ಮೂಲ ಕರ್ತವ್ಯ. ಈ ನಿಟ್ಟಿನಲ್ಲಿ ಗೋಕಲ್‌ದಾಸ್ ಎಕ್ಸ್‌ ಪೋರ್ಟ್‌ ನಂತಹ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ ಎಚ್.ಎಸ್. ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರುವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಂಸ್ಥೆಯ ಮೂಲ ಕರ್ತವ್ಯ. ಈ ನಿಟ್ಟಿನಲ್ಲಿ ಗೋಕಲ್‌ದಾಸ್ ಎಕ್ಸ್‌ ಪೋರ್ಟ್‌ ನಂತಹ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ ಎಚ್.ಎಸ್. ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ನೂತನ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ಬೆಂಗಳೂರಿನಗೋಕಲ್‌ದಾಸ್ ಎಕ್ಸ್‌ ಪೋರ್ಟ್‌ ಫೌಂಡೇಶನ್‌ನ ಸಿಎಸ್‌ಆರ್ ಅನುದಾನದಡಿ ಹಮ್ಮಿಕೊಂಡಿದ್ದ ಮಳೆನೀರು ಕೊಯ್ಲು ಮತ್ತು ಪುರಾತನಬಾವಿಯ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯಗಳು ದೊರೆತಾಗ ಅವರ ಶೈಕ್ಷಣಿಕ ಪ್ರಗತಿಯೂ ಸಹಜವಾಗಿ ಹೆಚ್ಚಾಗುತ್ತದೆ. ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಖಾಸಗಿ ಸಂಸ್ಥೆಗಳ ಸಹಕಾರ ಸಿಕ್ಕಾಗ ವಿಶ್ವವಿದ್ಯಾನಿಲಯವು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದರು. ಸಿಎಚ್‌ಆರ್‌ಒ ವಿಪಿ ಅಮಿತ್ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳ ಸುಸ್ಥಿರ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಬಹಳಷ್ಟಿದೆ. ನಮ್ಮ ಸಂಸ್ಥೆ ಸದಾ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸಲಿದೆ ಎಂದರು.

ತುಮಕೂರು ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಹಿರಿಯ ಡೀನ್ ಪ್ರೊ. ನಾಗಭೂಷಣ್ ಎಚ್., ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್, ಹಿರಿಯ ಪ್ರಾಧ್ಯಾಪಕ ಪ್ರೊ. ಶೇಟ್ ಪ್ರಕಾಶ್, ಗೋಕಲ್‌ದಾಸ್ ಎಕ್ಸ÷್ಪರ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಅಖಿಲ್ ಪಾಷಾ, ಮಹಾಂತೇಶ್ ಬಂಗಾರಿ, ಸಿದ್ದೇಶ್ವರ ಗೌಡ, ಗಿರೀಶ್ ಬಿ.ಆರ್., ರಾಜೇಂದ್ರ ಪ್ರಸಾದ್, ಸ್ಕೋಡವೆಸ್ ನ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ್, ನಾರಾಯಣ ಹೆಗಡೆ, ಕಲಾನಿಕಾಯದ ಡೀನ್ ಪ್ರೊ. ಕೆ.ಜಿ. ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಸಿರಿ ಕ್ಯಾಂಪಸ್‌ನ ನಿರ್ದೇಶಕ ಪ್ರೊ. ಸುರೇಶ್ ಡಿ. ವಂದಿಸಿದರು.