ಸಾರಾಂಶ
ಕನ್ನಡಪ್ರಭ ವಾರ್ತೆ ತಿಕೋಟಾ
ಪಾಂಡಿಚೇರಿ ಮಹರ್ಷಿ ಅರವಿಂದರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡ ಧ್ಯಾನಯೋಗಿ, ತಪಸ್ವಿ ಬಸವಂತರಾಯ ಮಹಾರಾಜರ 101ನೇ ಜಯಂತ್ಯುತ್ಸವ ಸ್ಮರಣೆ ಶ್ಲಾಘನೀಯವಾದದ್ದು ಎಂದು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಬಸವಂತರಾಯ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 12 ಜ್ಯೋರ್ತಿಲಿಂಗಗಳಿಗೆ ಪಾದಯಾತ್ರೆಯ ಮೂಲಕ ದರ್ಶನ ಪಡೆದರು. ದೇಶದ ಉದ್ದಗಲಕ್ಕೂ ಆಶ್ರಮಗಳಿಗೆ ಭೇಟಿ ನೀಡಿದ ವಿಜಯಪುರ ಜಿಲ್ಲೆಯ ಪ್ರಥಮರು ಎಂದರು.
ವಿಶ್ರಾಂತ ಪ್ರಾಧ್ಯಾಪಕರು ಮತ್ತು ಸಾಹಿತಿ ಸಿದ್ದಣ್ಣ ಮಂಗೊಂಡ ಮಾತನಾಡಿ, ಪಾಂಡಿಚೇರಿ ಮಹರ್ಷಿ ಅರವಿಂದರ ತತ್ವ ಸಿದ್ಧಾಂತಗಳನ್ನು ಹೊನವಾಡ ಗ್ರಾಮದ ತಪಸ್ವಿಗಳಾದ ಬಸವಂತರಾಯ ಮಹಾರಾಜರು ತಮ್ಮಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದ ಮಹಾನುಭಾವರು. ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಸಾವಿರಾರು ಜನರ ಬಾಳು ಬೆಳಗಿದವರು. ಹೊನವಾಡ ಗ್ರಾಮದ ಬೆಳಕು ಬಸವಂತರಾಯ ಮಹಾರಾಜರು ಈ ಗ್ರಾಮದಲ್ಲಿದ್ದು, ನಮ್ಮೆಲ್ಲರನ್ನು ಆಧ್ಯಾತ್ಮಿಕ ಚಿಂತನೆಗೆ ಹಚ್ಚುವ ಶ್ರೇಷ್ಠ ಕಾರ್ಯ ಮಾಡಿದ್ದು, ಅತ್ಯಂತ ಸ್ತುತಾರ್ಹ ಎಂದರು.ಪುರುಷೋತ್ತಮ ಮಸಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಎ.ಹಿರೇಮಠ, ಬಿ.ಡಿ.ತೊದಲಬಾಗಿ, ಆರ್.ಎಸ್.ಪಾಟೀಲ, ಡಿ.ಬಿ.ಡೇಮ್ರಿ, ಎಂ.ಆರ್.ಬೆಳಗಲ್, ಆರ್.ಎಸ್.ಚಪ್ಪರ, ಎಂ.ಜಿ.ಕುಲಕರ್ಣಿ, ಆರ್.ಕೆ.ಹಿರೇಮಠ, ಅನ್ನಪೂರ್ಣ ದೇಸಾಯಿ, ರಮೇಶ ಖ್ಯಾಡಿ, ಸಿದರಾಯ ಮಸಳಿ, ಕೆಂಚಪ್ಪ ಪೂಜಾರಿ, ವಿಶ್ವನಾಥ ಉಪ್ಪನಗಿ, ಲಿಂಗರಾಜ ಪಾಟೀಲ, ಮಮತಾ ಹಿರೇಮಠ, ಭೀಮಣ್ಣ ಪಡತಾರೆ, ಶಿವಾನಂದ ಮಸಳಿ, ನಿವೇದಿತಾ ಹಿರೇಮಠ, ಮಂಜುನಾಥ ಪಾತ್ರೋಟ, ಆರ್.ಬಿ.ಶೇಡ್ಯಾಳ, ಎಸ್.ಆರ್.ವಾಲಿಕಾರ, ನವೀನ ಹಿರೇಮಠ, ಇಂದ್ರಾಬಾಯಿ ಪಾತ್ರೋಟ, ಪ್ರವೀಣ ಮಸಳಿ, ಶಿವಪ್ಪ ಮಾಲಗಾರ, ಹಣಮಂತ ಪಡಸಲಗಿ, ಸದು ಮಾಲಗಾರ, ದಯಾನಂದ ಮಸಳಿ, ಸಾವಿತ್ರಿ ಕೊಟ್ಯಾಳ ಮತ್ತು ತಂಡ ಪ್ರಾರ್ಥಿಸಿದರು. ಐ.ಕೆ.ನದಾಫ ಸ್ವಾಗತಿಸಿದರು. ಧರೆಪ್ಪ ಸಿದ್ದನಾಥ ಗೌರವಿಸಿ ಸನ್ಮಾನಿಸಿದರು. ಜಗದೀಶ ಹಿರೇಮಠ ನಿರೂಪಿಸಿದರು. ಎಸ್.ಆರ್.ಮುಂಜೆ ವಂದಿಸಿದರು.