ಹಿರಿಯರ ಸ್ಮರಣೆ ನಮ್ಮ ಸಂಸ್ಕೃತಿ: ಭಾಸ್ಕರ ರೈ ಕುಕ್ಕುವಳ್ಳಿ

| Published : Sep 10 2025, 01:04 AM IST

ಹಿರಿಯರ ಸ್ಮರಣೆ ನಮ್ಮ ಸಂಸ್ಕೃತಿ: ಭಾಸ್ಕರ ರೈ ಕುಕ್ಕುವಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ ೫೦ನೇ ವರ್ಷದ ನಿಮಿತ್ತ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮ ಸಂಪನ್ನಗೊಂಡಿತು.

ಉಪ್ಪಿನಂಗಡಿ: ಕಲೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಹಿರಿಯರು ಮಾಡಿರುವ ಸಾಧನೆಗಳಿಂದ ನಾವು ಸಾಮಾಜಿಕವಾಗಿ ಒಗ್ಗೂಡುವಂತಾಗಿದೆ. ಹಿರಿಯರ ಸಂಸ್ಮರಣೆಯಿಂದ ಈ ವಿಚಾರಧಾರೆಯು ಮುಂದಿನ ಪೀಳಿಗೆಗೆ ಆದರ್ಶವಾಗಿ ದಾರಿದೀಪವಾಗುತ್ತದೆ ಎಂದು ಮಂಗಳೂರು ಯಕ್ಷಾಂಗಣದ ಅಧ್ಯಕ್ಷ, ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ ೫೦ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಂಬೋಟು ಮನೆತನದ ಹಿರಿಯರಾದ ದಿ.ಪದ್ಮನಾಭ ಮತ್ತು ದಿ. ನೀಲಾವತಿ ಸಂಸ್ಮರಣೆ ಮಾಡಿದ ಅರ್ಥದಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ನೀಲಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ, ಕಲಾವಿದ ಗಣರಾಜ ಕುಂಬ್ಳೆ ಅವರು ಕಲೆ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕ ಪಾತಾಳ ವೆಂಕಟರಮಣ ಭಟ್ ಮತ್ತು ವೈದ್ಯ ಕೆ. ಶೀನಪ್ಪ ಶೆಟ್ಟಿ ಅವರಿಗೆ ನುಡಿ ನಮನ ಅರ್ಪಿಸಿದರು.ಉಮೇಶ್ ಶೆಣೈ ರಾಮನಗರ, ಪಾತಾಳ ಅಂಬಾ ಪ್ರಸಾದ್, ಉಪ್ಪಿನಂಗಡಿ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ, ದೇವದಾಸ ಎಸ್ ಪಿ ಹರಿಹರ, ಡಾ ಸುರೇಶ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.

ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಕೈಲಾರ್ ರಾಜಗೋಪಾಲ ಭಟ್, ಯು ಜಿ ರಾಧಾ, ಜಯಂತ ಪುರೋಳಿ, ಸುರೇಶ ಪುತ್ತೂರಾಯ, ಸುಬ್ರಹ್ಮಣ್ಯ ರಾವ್. ಬಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜೀವ ಪಾರೆಂಕಿ, ಗಂಗಾಧರ ಟೈಲರ್ , ಸುರೇಶ್ ರಾವ್ ಬಿ, ಸುಧಾಕರ ಕೋಟೆ, ಶ್ರೀಧರ ಭಟ್ ಕೆ, ನೀರಜ್ ಕುಮಾರ್, ಹರೀಶ ಆಚಾರ್ಯ ಪುಳಿತ್ತಡಿ, ಆಶಾಲತಾ ಕಲ್ಲೂರಾಯ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಭಾರತಿ ಎಂ.ಎಲ್, ಪವಿತ್ರಾಕ್ಷಿ, ರವೀಂದ್ರ ದರ್ಬೆ, ಸತೀಶ ಶಿರ್ಲಾಲು, ಹರೀಶ್ ಆಚಾರ್ಯ ಮದ್ದಡ್ಕ, ರಾಜೇಶ ಪ್ರಭು, ಗೀತಾ ಕುದ್ದಣ್ಣಾಯ, ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತ ಆಳ್ವ, ಶೃತಿ ವಿಸ್ಮಿತ್ , ನಿತೀಶ್ ಮನೋಳಿತ್ತಾ ಯ, ಪ್ರಕಾಶ ಅಭ್ಯಂಕರ್, ಅರ್ಜುನ ಅಭ್ಯಂಕರ್, ದುಶ್ಯಂತ್ ಕೃಷ್ಣಾಪುರ ಮೊದಲಾದವರು ಭಾಗವಹಿಸಿದ್ದರು.ಕಾಳಿಕಾಂಬ ಟ್ರಸ್ಟಿನ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಇಳಂತಿಲ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾ ತಿಲಕ್ ವಂದಿಸಿದರು. ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ರೂಪಿಸಿದರು. ಬಳಿಕ ಅತಿಥಿ ಕಲಾವಿದರಿಂದ ‘ಭೀಷ್ಮ ಸೇನಾಧಿಪತ್ಯ’ ತಾಳಮದ್ದಳೆ ಜರುಗಿತು.