ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಾಡು ಬೆಳೆಯಲು ಸುಮಾರು 100 ವರ್ಷಗಳಾದರೂ ಬೇಕು. ಪ್ರಕೃತಿ ಪರಿಸರ, ಮೂಲಭೂತ ಅವಶ್ಯಕತೆ, ಭೌಗೋಳಿಕ ಹಿನ್ನೆಲೆ, ರಕ್ಷಣೆ ಇವೆಲ್ಲದರ ಹಿನ್ನಲೆ ಗಮನದಲ್ಲಿಟ್ಟುಕೊಂಡು ಕಾಡು ಬೆಳೆಸಲು ಪರಿಶ್ರಮದ ಅಗತ್ಯವಿದೆ. ಆದರೆ ಕೇವಲ 10 - 20 ವರ್ಷಗಳಲ್ಲಿ ಕಿರು ಅರಣ್ಯ ಬೆಳೆಸುವ ಜಪಾನ್‌ನ ಮಿಯಾವಾಕಿ ಮಾದರಿಯ ಕಿರು ಅರಣ್ಯ ಪದ್ಧತಿಯ ಅನುಷ್ಠಾನ ಪ್ರಕ್ರಿಯೆಗೆ ಕಳೆದ ವರ್ಷ ಚಾಲನೆ ನೀಡಿದ್ದೇವೆ ಎಂದು ಹಸಿರು ಸ್ವಯಂಸೇವಾ ಸಂಸ್ಥೆಯ ಮಾರ್ಗದರ್ಶಕ ಹಾಗೂ ಪಂಚಗಿರಿ ಭೋಧನಾ ಪ್ರೌಢಶಾಲೆಯ ಶಿಕ್ಷಕ ಮಹಾಂತೇಶ್ ತಿಳಿಸಿದರು.ಕಡಿಮೆ ಜಾಗದಲ್ಲಿ ಹೆಚ್ಚು ಗಿಡ
ತಾಲೂಕಿನ ಪುಟ್ಟತಿಮ್ಮನಹಳ್ಳಿಯ ಚಿಕ್ಕಬಳ್ಳಾಪುರ ನಗರಸಭೆಯ ಘನತ್ರಾಜ್ಯ ಶೇಕರಣಾ ಘಟಕದಲ್ಲಿ ಹಸಿರು ಸ್ವಯಂ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಸಸಿಗಳನ್ನು ನೆಟ್ಟ ನಂತರ ಮಾತನಾಡಿ, ಘನತ್ಯಾಜ್ಯ ಹಾಕುವ ಜಾಗದಲ್ಲಿ ಎರಡನೇ ಕಿರು ಅರಣ್ಯ ಪ್ರದೇಶ. ಇದು ನಮ್ಮ ಮೂರನೇ ಮಿಯವಾಕಿ ಆಗಿದೆ ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಹಾಕುವುದು ಇದರ ಉದ್ದೇಶವಾಗಿರುತ್ತದೆ ಎಂದರು.ಜಪಾನ್‌ನ ಮಿಯಾವಾಕಿ ಅವರ ಈ ಕಿರು ಅರಣ್ಯ ಪದ್ಧತಿಯ ಯಶಸ್ಸನ್ನು ಕಂಡು ಅದನ್ನು ಅನುಸರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಾದರಿ ಜನಪ್ರಿಯತೆ ಪಡೆದು ಅನೇಕ ದೇಶಗಳಲ್ಲಿ ಮಿಯಾವಾಕಿ ಮಾದರಿ ಅರಣ್ಯ ಬೆಳೆಸುವ ಕಾರ್ಯ ನಡೆಯುತ್ತಿದೆ. ಸಾಂಪ್ರದಾಯಿಕ ಅರಣ್ಯಕ್ಕಿಂತ 30 ಪಟ್ಟು ವೇಗವಾಗಿ ಮಿಯಾವಾಕಿ ಪದ್ಧತಿಯಲ್ಲಿ ಕಾಡು ಬೆಳೆಯುತ್ತದೆ. ಮಣ್ಣಿನ ಫಲವತ್ತತೆ, ಪರಿಸರ ಕೂಡ ಬೆಳವಣಿಗೆಗೆ ಮುಖ್ಯ. ಪೋಷಕಾಂಶದ ಕೊರತೆ ಇದ್ದಲ್ಲಿ ಅದನ್ನು ಒದಗಿಸಬೇಕು ಎಂದರು.
ಮರ ಉರುಳುವ ಸಾಧ್ಯತೆ ಕಡಿಮೆ1 ಚ. ಮೀ. ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಬಹುದಾಗಿದೆ. ಹತ್ತಿರ ಹತ್ತಿರ ಗಿಡ ಬೆಳೆದು ಮರವಾಗುವುದರಿಂದ ಗಾಳಿ ಮಳೆಗೆ ನೆಲಕ್ಕೆ ಉರುಳುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಪ್ರಕೃತಿ ಪರಿಸರ ಪೂರಕ ವಾತಾವರಣ, ಸಸ್ಯ ಕುಲದ ಸಂವರ್ಧನೆ, ಶುದ್ಧ ಗಾಳಿ, ಒತ್ತಡ ಮುಕ್ತ ಜೀವನಕ್ಕೆ ಈ ಕಿರು ಅರಣ್ಯ ಮಾದರಿ ಉಪಯುಕ್ತ'''''''' ಎಂದು ತಿಳಿಸಿದರು.ಈ ವೇಳೆ ಹಸಿರು ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಮಧು, ಶಮಂತ್, ಪ್ರದೀಪ್, ಪ್ರಣವ್, ಹರ್ಷ, ಆಕಾಶ್, ಅಜಯ್, ಶ್ರೀನಿವಾಸ್, ಯಸ್ಮಿತ್, ಕಾರ್ತಿಕ್, ಮತ್ತಿತರರು ಇದ್ದರು.