ಹಿಂಗಾರು-ಮುಂಗಾರು ಮಳೆ ಉತ್ತಮ

| Published : Jun 08 2024, 12:30 AM IST

ಸಾರಾಂಶ

ಹಿಂಗಾರು-ಮುಂಗಾರು ಮಳೆ ಉತ್ತಮ. ಹತ್ತಿ, ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಹಿಂಗಾರಿನಲ್ಲಿ ಜೋಳ ಮುಂದಾಗುತ್ತದೆ ಎಂದು ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವದಲ್ಲಿ ಪೂಜಾರಿಗಳು ಶಿವವಾಣಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಹಿಂಗಾರು-ಮುಂಗಾರು ಮಳೆ ಉತ್ತಮ. ಹತ್ತಿ, ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಹಿಂಗಾರಿನಲ್ಲಿ ಜೋಳ ಮುಂದಾಗುತ್ತದೆ ಎಂದು ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವದಲ್ಲಿ ಪೂಜಾರಿಗಳು ಶಿವವಾಣಿ ನುಡಿದರು.

ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಬುಧವಾರ ಆರಂಭಗೊಂಡಿದ್ದು, ಜಾತ್ರಾ ಆರಂಭದ ದಿನ ಬುಧವಾರ ಬೆಳಗ್ಗೆ ಸಕಲ ವಾದ್ಯ ವೈಭವದೊಂದಿಗೆ ಏಳು ಪಾಂಡವರ ಗಿಡಕ್ಕೆ ಹೋಗಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಯಿತು.

ಜಾತ್ರೆಯಂಗವಾಗಿ ರಾತ್ರಿ ೯ ಗಂಟೆಗೆ ರಾಯಭಾಗ ತಾಲೂಕಿನ ಹಾಲಶಿರಬೂರದ ಅಮೋಘಸಿದ್ದೇಶ್ವರ ಗಾಯನ ಸಂಘ ಹಾಗೂ ವಿಜಯಪುರ ತಾಲೂಕಿನ ಶಿವಣಗಿಯ ಮರಡಿ ಸಿದ್ದೇಶ್ವರ ಗಾಯನ ಸಂಘದಿಂದ ವಾದಿ-ಪ್ರತಿವಾದಿ ಡೊಳ್ಳಿನ ಪದಗಳು ಜರುಗಿದವು.

ಜಾತ್ರೆಯಂಗವಾಗಿ ಜೂ.೭ ರಂದು ಬೆಳಗ್ಗೆ ೯ ಗಂಟೆಗೆ ಭಾರ ಎತ್ತುವ ಸ್ಪರ್ಧೆ, ಗುಂಡು, ಸಂಗ್ರಾಣಿ ಕಲ್ಲು, ಚೀಲ ಎತ್ತುವ ಕಾರ್ಯಕ್ರಮ, ಮಧ್ಯಾನ್ಹ ೩ ಗಂಟೆಗೆ ಜಂಗೀ ಕುಸ್ತಿಗಳು, ರಾತ್ರಿ ೯ ಗಂಟೆಗೆ ಹಿರಿತನ ಹೆಣ್ಣು ನಾಟಕ ಪ್ರದರ್ಶನ, ಜೂ.೮ ರಂದು ಬೆಳಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಪ್ರಸಿದ್ಧ ಗೀಗೀ ಪದಗಳು, ರಾತ್ರಿ ೯ ಗಂಟೆಗೆ ಹಾಸ್ಯ ರಸಮಂಜರಿ ಕಾರ್ಯಕ್ರಮ, ಜೂ. ೯ ರಂದು ಬೆಳಗ್ಗೆ ೮ ಗಂಟೆಗೆ ಎತ್ತಿನಗಾಡಿ ರೇಸ್, ಮಧ್ಯಾಹ್ನ ೨ ಗಂಟೆಗೆ ತೇರ ಬಂಡಿ ಸ್ಪರ್ಧೆ, ರಾತ್ರಿ ೮ ಗಂಟೆಗೆ ಪುರಾಣ ಮಂಗಲ, ನಂತರ ೯ ಗಂಟೆಗೆ ಹಿರಿತನದ ಹೆಣ್ಣು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.