ಸಾರಾಂಶ
ಕೇವಲ ಧಾರ್ಮಿಕ ಆಚರಣೆ ಅಲ್ಲದೇ ಸಮಾಜವನ್ನು ಒಟ್ಚುಗೂಡಿಸುವ ಮತ್ತು ಜಾಗೃತಿ ಮೂಡಿಸುವ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಬ್ಬವಾದ ಗಣೇಶೋತ್ಸವ ತಾಲೂಕಿನಲ್ಲಿ ಅತ್ಯಂತ ವೈಭವದಿಂದ ಆರಂಭಗೊಂಡಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ । ಜನರಿಂದ ದರ್ಶನಬಿ. ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಕೇವಲ ಧಾರ್ಮಿಕ ಆಚರಣೆ ಅಲ್ಲದೇ ಸಮಾಜವನ್ನು ಒಟ್ಚುಗೂಡಿಸುವ ಮತ್ತು ಜಾಗೃತಿ ಮೂಡಿಸುವ ರಾಷ್ಟ್ರೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಬ್ಬವಾದ ಗಣೇಶೋತ್ಸವ ತಾಲೂಕಿನಲ್ಲಿ ಅತ್ಯಂತ ವೈಭವದಿಂದ ಆರಂಭಗೊಂಡಿದೆ.
ವಿವಿಧ ಕಥಾ ಪ್ರಸಂಗ ಹೊಂದಿರುವ ಬಹುರೂಪಿ ಗಣಪ ಮೂರ್ತಿಗಳು ಅನೇಕ ಕಡೆಗಳಲ್ಲಿ ರಾರಾಜಿಸುತ್ತಿವೆ, ಗಣೇಶ ಸಮಿತಿಗಳು ಗಣೇಶ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿವೆ.ಹಿಂದೂ ಮಹಾಗಣೇಶ:
ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಆಯೋಜಿಸಿರುವ ಹಿಂದೂ ಮಹಾಗಣೇಶ 12 ಅಡಿ ಎತ್ತರ ಇದ್ದು, ಗಂಗಾಮಾತೆಯಲ್ಲಿ ಗಣಪ ವಿರಾಜಮಾನವಾಗಿದ್ದಾನೆ. ಮಹಿಷಾಸುರ ಸಂಹಾರ ಮಾಡಿದ ಕಥಾ ಪ್ರಸಂಗ ಹೊಂದಿದೆ. ಸಂಜೆ ನೃತ್ಯ, ಸಂಗೀತ, ರಸಮಂಜರಿ ಉಪನ್ಯಾಸ ಹೀಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.ಶಿವಮಂದಿರ ಮಹಾರಾಜ ಗಣಪತಿ:
ಇಲ್ಲಿಯ 8ನೇ ವಾರ್ಡ್‌ನ ಮುಖ್ಯ ಅಂಚೆ ಕಚೇರಿ ಬಳಿ ಈಶ್ವರ ವಿನಾಯಕ ಸಮಿತಿ ಸ್ಥಾಪಿಸಿರುವ ಗಣೇಶ ಮೂರ್ತಿ 14 ಅಡಿ ಎತ್ತರವಿದ್ದು, ಭಕ್ತ ಸಿರಿಯಾಳ ಕಥಾ ಪ್ರಸಂಗ ಹೊಂದಿದೆ, ಸಂಜೆ ಮೂರ್ತಿಗಳು ಚಲನೆ ಮೂಲಕ ಕಥೆ ಪ್ರಸ್ಥುತ ಪಡಿಸಲಾಗುತ್ತದೆ.ಯಡಿಯೂರು ಸಿದ್ದಲಿಂಗೇಶ್ವರ ಕಥಾ ಪ್ರದರ್ಶನ:
ಪಟ್ಟಣದ ಮೇಗಳಪೇಟೆಯ ಕೆಂಪೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪೇಶ್ವರ ಯುವಕ ಸಮಿತಿ ಸ್ಥಾಪಿಸಿರುವ ಗಣೇಶ ಮೂರ್ತಿ ಬಳಿ ಯಡಿಯೂರು ಸಿದ್ದಲಿಂಗೇಶ್ವರ ಕಥಾ ಪ್ರದರ್ಶನ ಪ್ರತಿ ದಿನ ಸಂಜೆ ಇದ್ದು, ಜನರು ನೋಡಲು ಮುಗಿ ಬೀಳುತ್ತಿದ್ದಾರೆ.ಗೋಕರ್ಣೇಶ್ವರ ದೇವಸ್ಥಾನದ ಬಳಿ ಸಂಸ್ಕೃತ ಸಭಾಭವನದಿಂದ ಸ್ಥಾಪಿಸಿರುವ ಗಣೇಶ ಸುಂದರವಾಗಿದ್ದು, ಇವರು ರಕ್ತದಾನ ಶಿಬಿರ, ಸಸಿಗಳ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಿದರು.
ದೇವರ ತಿಮಲಾಪುರದಲ್ಲಿ 12 ಅಡಿಯ ತಲೆ ಮೇಲೆ ಈಶ್ವರ ಹೊತ್ತಿರುವ ಸುಂದರ ಗಣೇಶ ಮೂರ್ತಿ ಭಕ್ತರನ್ನು ಸೆಳೆಯುತ್ತಲಿದೆ. ಬಣಗಾರ ಪೇಟೆ, ಪ್ರವಾಸಿ ಮಂದಿರ ವೃತ್ತ, ಜೋಷಿಸರ ಓಣಿ, ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಮುಂತಾದ ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನ ಸೇರಿದಂತೆ ಅನೇಕ ಕಾರ್ಯಕ್ರಮ ಪ್ರಗತಿಯಲ್ಲಿವೆ. ಒಟ್ಟಿನಲ್ಲಿ ಹರಪನಹಳ್ಳಿ ತಾಲೂಕಿನಲ್ಲಿ ಗಣೇಶೋತ್ಸವ ಭಕ್ತಿ ಶ್ರದ್ಧೆ ಜತೆಗೆ ರಂಗು ರಂಗಿನಿಂದ ಕೂಡಿದೆ.