ಯತ್ನಾಳ ಗ್ರಾಮದ ಜೋಡೆತ್ತಿನ ರೈತರ ನಂದಿ ಯಾತ್ರೆ ಯಶಸ್ವಿ

| Published : Mar 08 2024, 01:53 AM IST

ಸಾರಾಂಶ

ವಿಜಯಪುರ: ನಾಶವಾಗುತ್ತಿರುವ ಎತ್ತುಗಳ ಸಂತತಿಯನ್ನು ಉಳಿಸಬೇಕಾದ ಸಂದೇಶ ಹೊತ್ತು ಯತ್ನಾಳ ಗ್ರಾಮದ ರೈತರು ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿಯ ನಂದಿ ರಥಯಾತ್ರೆ ಹಮ್ಮಿಕೊಂಡಿದ್ದು, ರಥ ಮರಳಿ ಗ್ರಾಮ ತಲುಪಿದೆ. ಸುಮಾರು 200 ಕಿ.ಮೀ 11 ಜೋಡೆತ್ತಿನ ಬಂಡೆಗಳೊಂದಿಗೆ 7 ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಾದ ತಾಂಬಾ, ಬಂಥನಾಳ, ಚಾಂದಕವಟಗಿ, ಸಿಂದಗಿ ಹಾಗೂ ಕನ್ನೊಳ್ಳಿ ಗ್ರಾಮಗಳಿಗೆ ತರಳಿ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿ ಮರಳಿ ಗ್ರಾಮಕ್ಕೆ ಆಗಮಿಸಿದೆ.

ವಿಜಯಪುರ: ನಾಶವಾಗುತ್ತಿರುವ ಎತ್ತುಗಳ ಸಂತತಿಯನ್ನು ಉಳಿಸಬೇಕಾದ ಸಂದೇಶ ಹೊತ್ತು ಯತ್ನಾಳ ಗ್ರಾಮದ ರೈತರು ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿಯ ನಂದಿ ರಥಯಾತ್ರೆ ಹಮ್ಮಿಕೊಂಡಿದ್ದು, ರಥ ಮರಳಿ ಗ್ರಾಮ ತಲುಪಿದೆ. ಸುಮಾರು 200 ಕಿ.ಮೀ 11 ಜೋಡೆತ್ತಿನ ಬಂಡೆಗಳೊಂದಿಗೆ 7 ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಾದ ತಾಂಬಾ, ಬಂಥನಾಳ, ಚಾಂದಕವಟಗಿ, ಸಿಂದಗಿ ಹಾಗೂ ಕನ್ನೊಳ್ಳಿ ಗ್ರಾಮಗಳಿಗೆ ತರಳಿ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿ ಮರಳಿ ಗ್ರಾಮಕ್ಕೆ ಆಗಮಿಸಿದೆ. ಈ ಸಮಯದಲ್ಲಿ ಯತ್ನಾಳ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ನಂದಿ ಯಾತ್ರಿಕರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಈ ಯಾತ್ರೆಯ ನೇತೃತ್ವ ವಹಿಸಿದ್ದ ಉದ್ಯಮಿ ಮಲ್ಲಿಕಾರ್ಜುನ ಕೋರಿ, ನಂದಿ ಯಾತ್ರಿಕರಿಗೆ ಸನ್ಮಾನ ಮಾಡಿ ಮಾತನಾಡಿದರು. ಅಭೀಃ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಮಾತನಾಡಿ, ಗ್ರಾಮಗಳಲ್ಲಿರುವ ನಂದಿ ಸಂಪತ್ತು ಉಳಿದರೆ ಮಾತ್ರ ಗ್ರಾಮಗಳಲ್ಲಿ ಅನ್ನ ಸಂಪತ್ತು ಉಳಿಯುವುದು ಎಂದರು. ಗ್ರಾಮದ ಮಲ್ಲಪ್ಪ ಕೋರಿ, ಭೀಮು ಬಿರಾದಾರ, ಅಪ್ಪಾಸಾಹೇಬ ಬಿರಾದಾರ, ಚನ್ನಪ್ಪ ಉಮರಾಣಿ‌ ಹಾಗೂ ಮನೋಹರ ಬಿರಾದಾರ, ಇತರರು ಭಾಗವಹಿಸಿದ್ದರು.