ನವದಂಪತಿ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು- ಡಾ. ಅನ್ನದಾನೀಶ್ವರ ಶ್ರೀ

| Published : Feb 23 2024, 01:47 AM IST

ನವದಂಪತಿ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು- ಡಾ. ಅನ್ನದಾನೀಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ನಮ್ಮ ಪರಿಸರ ಸಂರಕ್ಷಣೆಯಾಗಬೇಕಾದರೆ ನವದಂಪತಿಗಳು ಗಿಡಗಳನ್ನು ಹಚ್ಚಿ ಅರಣ್ಯ ಸಂಪತ್ತನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಮುಂಡರಗಿ: ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ನಮ್ಮ ಪರಿಸರ ಸಂರಕ್ಷಣೆಯಾಗಬೇಕಾದರೆ ನವದಂಪತಿಗಳು ಗಿಡಗಳನ್ನು ಹಚ್ಚಿ ಅರಣ್ಯ ಸಂಪತ್ತನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.ಅವರು ಗುರುವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ 154ನೇ ಯಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ 15 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ನವ ದಂಪತಿಗಳು ಗಂಡು-ಹೆಣ್ಣು ಎಂಬ ಭೇದಭಾವ ಮಾಡದೆ ಹೆತ್ತ ಮಕ್ಕಳನ್ನು ಪ್ರೀತಿಯಿಂದ ಸಾಕಿ-ಸಲುಹಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಅವರಿಗೆ ಶಿಕ್ಷಣದ ಜೊತೆಗೆ ಅವರಿಗೆ ನೀತಿಶಿಕ್ಷಣ ಕಲಿಸಿ ಅವರ ಜೀವನ ಪರಿಪೂರ್ಣವಾಗುವಂತೆ ಎಚ್ಚರವಹಿಸಬೇಕು. ರಾಜ್ಯದಲ್ಲಿ ಶೇ. 33ರಷ್ಟು ಇರುವ ಅರಣ್ಯ ಸಂಪತ್ತು ಕಡಿಮೆಯಾಗುತ್ತಾ ಹೊರಟಿದೆ. ನವ ದಂಪತಿಗಳು ನಿಮ್ಮ ಬಾಳಿನುದ್ದಕ್ಕೂ ಕುಟುಂಬದಲ್ಲಿ ನೆರೆಹೊರೆಯಲ್ಲಿ ನಡೆಯುವ ಒಂದೊಂದು ವಿಶೇಷ ಕಾರ್ಯಕ್ರಮಕ್ಕೂ ಒಂದೊಂದು ಗಿಡ ನೆಡುವ ಕಾರ್ಯವನ್ನು ಮಾಡಬೇಕು ಎಂದರು.

ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸಾರ ಸಸಾರವಾದಾಗ ಮಾತ್ರ ದಂಪತಿಗಳ ಬದುಕು ಪಾವನವಾಗುತ್ತದೆ. ನವದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸವನ್ನು ಬೆಳೆಸಿಕೊಂಡು ಶಾಂತಿಯುತವಾಗಿ ಬಾಳಬೇಕು. ಭಾರತ ದೇಶ ಪರಂಪರೆ ಮತ್ತು ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಬಾಳಿನಲ್ಲಿ ಸುಖ ಮತ್ತು ದುಃಖಗಳು ಬರುತ್ತವೆ, ಹೋಗುತ್ತವೆ. ಅವುಗಳಿಗೆ ತಲೆಕೊಡದೆ ಎದುರಿಸಿ ಬದುಕುವುದನ್ನು ಕಲಿಯಬೇಕು ಎಂದರು. ಪ್ರವಚನಕಾರ ಬಳೂಟಗಿಯ ಶಿವಕುಮಾರ ದೇವರು ಮಾತನಾಡಿ, ಈ ನಾಡಿನಲ್ಲಿ ಅನ್ನ, ಅಕ್ಷರ ಹಾಗೂ ಅರಿವು ತುಂಬುತ್ತಿರುವ ಮಠಗಳಲ್ಲಿ ಮುಂಡರಗಿ ಅನ್ನದಾನೀಶ್ವರ ಮಠ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕನಕಗಿರಿಯ ಡಾ. ಚೆನ್ನಮಲ್ಲ ಮಹಾಸ್ವಾಮೀಜಿ, ಕಪ್ಪತಗುಡ್ಡದ ಚಿದಾನಂದ ಸ್ವಾಮೀಜಿ, ಕುಕನೂರು ಅನ್ನದಾನೀಶ್ವರ ಶಾಖಾ ಮಠದ ಡಾ. ಮಹಾದೇವ ಮಹಾಸ್ವಾಮೀಜಿ, ವೆಂಕಟಗಿರಿಯ ಹಾಲಸ್ವಾಮೀಜಿ, ಪದ್ಮಶ್ರೀ ಪ್ರಶಸ್ತಿ ಪುರಷ್ಕೃತ ರಾಣಿ ಮಾಚಮ್ಮ, ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಡಾ.ಬಿ.ಜಿ. ಜವಳಿ, ಎನ್.ಎಫ್. ಅಕ್ಕೂರ, ದೇವಪ್ಪ ರಾಮೇನಹಳ್ಳಿ, ಅನುಪಕುಮಾರ ಹಂಚಿನಾಳ, ಅಜ್ಜಪ್ಪ ಲಿಂಬಿಕಾಯಿ, ಮಂಜುನಾಥ ಶಿವಶೆಟ್ಟರ, ರವಿ ಕುಂಬಾರ, ರವೀಂದ್ರಗೌಡ ಪಾಟೀಲ, ಪವನ್ ಮೇಟಿ, ಪ್ರದೀಪಗೌಡ ಗುಡದಪ್ಪನವರ, ಕೈಲಾಸ ಹಿರೇಮಠ, ವೀರೇಶ ಸಜ್ಜನರ, ನಾಗರಾಜ ಗುಡಿಮನಿ, ದೇವು ಹಡಪದ, ವಿಶ್ವನಾಥ ಗಡ್ಡದ, ಮಂಜುನಾಥ ಕಾಲವಾಡ, ರಾಘು ಪಟಗೆ, ಕುಮಾರ ಬನ್ನಿಕೊಪ್ಪ, ಮಂಜುನಾಥ ಇಟಗಿ, ರಂಗಪ್ಪ ಕೋಳಿ, ಸಿದ್ದು ದೇಸಾಯಿ, ವೆಂಕಟೇಶ ದೇಸಾಯಿ ಇದ್ದರು.

ಎಸ್.ಎಸ್. ಇನಾಮತಿ ಮತ್ತು ಮಠದ ನಿರೂಪಿಸಿ, ವಂದಿಸಿದರು.