ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈ ವರ್ಷವೂ ಕಾಲೇಜುಗಳ ಸಂಖ್ಯೆ ಮತ್ತೆ ಇಳಿಮುಖವಾಗಿದೆ. ಕಳೆದ ವರ್ಷ ಒಟ್ಟು 174 ಕಾಲೇಜುಗಳ ಪೈಕಿ 12 ಕಾಲೇಜುಗಳು ವಿವಿಯ ಸಂಯೋಜನೆಗೆ ಒಳಪಡಲು ಅರ್ಜಿ ಸಲ್ಲಿಸಿರಲಿಲ್ಲ. ಹಾಗಾಗಿ ಈ ಸಂಖ್ಯೆ 162ಕ್ಕೆ ಇಳಿದಿತ್ತು. ಈ ಬಾರಿ ಉಳಿದಿರುವ ಒಟ್ಟು ಕಾಲೇಜುಗಳ ಸಂಖ್ಯೆ 155ಕ್ಕೆ ಇಳಿಕೆಯಾಗಿದೆ.ಮಂಗಳೂರಿನ ಕೆನರಾ ವಿಕಾಸ್ ಪ್ರಥಮ ದರ್ಜೆ ಕಾಲೇಜು, ಕಾರ್ಮೆಲ್ ಕಾಲೇಜು ಮೊಡಂಕಾಪು, ಮೇಧಾ ಕಾಲೇಜು ಪುತ್ತೂರು, ಗುಣಶ್ರೀ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಹಾಗೂ ನಿಧಿ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಆರ್ಟ್ ಅಂಡ್ ಮೆನೇಜ್‌ಮೆಂಟ್ ಮಂಗಳೂರು ಈ ಐದು ಕಾಲೇಜುಗಳು ವಿವಿ ಜೊತೆ ಸಂಯೋಜನೆಗೆ ಈ ಬಾರಿ ಅರ್ಜಿ ಸಲ್ಲಿಸಿಲ್ಲ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಬುಧವಾರ ಕುಲಪತಿ ಡಾ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ತೃತೀಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.ಹೊಸ ಕೋರ್ಸ್‌ಗೆ ವಿವಿ ಒಪ್ಪಿಗೆ ಬೇಕು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಸ್ವಾಯತ್ತ ಕಾಲೇಜುಗಳು ವಿಶ್ವವಿದ್ಯಾಲಯದ ಗಮನಕ್ಕೆ ಬಾರದೆ ಹೊಸ ಕೋರ್ಸ್‌ಗಳನ್ನು ಶುರು ಮಾಡುವಂತಿಲ್ಲ. ಎಐಸಿಟಿಇ (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ) ನಿಯಮ ಪ್ರಕಾರ ಸ್ವಾಯತ್ತ ಕಾಲೇಜುಗಳು ಇದಕ್ಕೆ ಸಂಬಂಧಿತ ಹೊಸ ಕೋರ್ಸ್ ಆರಂಭಿಸಬೇಕಾದರೆ ಬೋರ್ಡ್ ಆಫ್ ಸ್ಟಡೀಸ್, ಆಡಳಿತ ಸಮಿತಿ ಹಾಗೂ ವಿವಿ ಅನುಮೋದನೆ ಪಡೆಯಲೇ ಬೇಕು ಎಂದಿದೆ. ಇದನ್ನು ಮೀರಿ ಹೊಸ ಕೋರ್ಸ್ ಆರಂಭಿಸುವಂತಿಲ್ಲ. ಇದೇ ವೇಳೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಸಿಎ ಎರಡು ಪ್ರತ್ಯೇಕ ಕೋರ್ಸ್‌ಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ವಿದ್ಯಾರ್ಥಿಗಳ ಪ್ರವೇಶಾತಿಗೆ ಒತ್ತು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಟಿ) ಜಾರಿಗೊಂಡ ಬಳಿಕ ಬದಲಾದ ಪಠ್ಯಕ್ರಮಕ್ಕೆ ಹೊಂದಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ವಿದ್ಯಾರ್ಥಿಗಳನ್ನು ದಾಖಲಾತಿಗೆ ಸೆಳೆದುಕೊಳ್ಳುವಲ್ಲಿ ಪ್ರತಿ ವಿಭಾಗವೂ ಹೆಚ್ಚಿನ ಶ್ರಮ ವಹಿಸಬೇಕು ಎಂದು ಪ್ರೊ.ಪಿ.ಎಲ್.ಧರ್ಮ ಸೂಚಿಸಿದರು.ಪತ್ರಿಕೋದ್ಯಮ ವಿಭಾಗ ಪುನಶ್ಚೇತನ:
ಮಂಗಳೂರು ವಿವಿಯ ಪತ್ರಿಕೋದ್ಯಮ ವಿಭಾಗದ ಹೆಸರನ್ನು ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ಎಂದು ಬದಲಾಯಿಸುವ ಮೂಲಕ ಈ ವಿಭಾಗಕ್ಕೆ ಪುನಶ್ಚೇತನ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ. ಈ ವಿಭಾಗವನ್ನು ಹಿಂದಿನಂತೆ ಸಹಜ ಸ್ಥಿತಿಗೆ ತರಲು ಪಠ್ಯಕ್ರಮಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಪ್ರೊ.ಪಿ.ಎಲ್.ಧರ್ಮ ಹೇಳಿದರು.ಸ್ನಾತಕೋತ್ತರ ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ವಿಭಾಗಗಳ ಪಠ್ಯಕ್ರಮಗಳಿಗೆ ಅನುಮೋದನೆ ಪಡೆಯಲಾಯಿತು. ಸಂತ ಆನ್ಸ್ ಸ್ವಾಯತ್ತ ಸಂಸ್ಥೆಯಲ್ಲಿ ಸ್ನಾತಕ ಪದವಿಯಲ್ಲಿ ಕೋ-ಎಜುಕೇಶನ್ ಸಿಸ್ಟಮ್ ಅನುಮೋದನೆ ನೀಡಲಾಯಿತು. ಸ್ನಾತಕೋತ್ತರ ಕಾರ್ಯಕ್ರಮಗಳ ಪಠ್ಯಕ್ರಮಗಳಲ್ಲಿ ಉದ್ಯೋಗಾವಕಾಶ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ವಿಷಯಾಧಾರಿತ ಕೋರ್ಸ್‌ಗಳ ಪಟ್ಟಿಯನ್ನು ಅನುಮೋದಿಸಲಾಯಿತು. ನ್ಯಾಕ್‌ನಿಂದ ನವೀಕರಣಗೊಳಿಸದ ಕಾಲೇಜುಗಳಿಗೆ ಷರತ್ತಿನ ಮೇರೆಗೆ ಸಂಯೋಜನೆ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಮಂಗಳೂರು ವಿವಿಯಲ್ಲಿ ತುಳು ವಿಭಾಗ ಸ್ಥಾಪನೆ ಹಾಗೂ ಹುದ್ದೆಗಳನ್ನು ಸೃಜಿಸುವ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಯಿತು.ಆಡಳಿತ ವಿಭಾಗದ ರಿಜಿಸ್ಟ್ರಾರ್ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗದ ಅಧಿಕಾರಿ ಸಂಗಪ್ಪ ಇದ್ದರು.
ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶಮಂಗಳೂರು ವಿವಿ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಕಾರ್ಯಕ್ರಮಗಳಿಗೆ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಮುಂದುವರಿಸಲು ನಿರ್ಧರಿಸಲಾಗಿದೆ. ಇಲ್ಲಿನ ಮಾದರಿಯಲ್ಲೇ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಇದರ ಹೊರತು ಅವರಿಗೆ ಹೆಚ್ಚಿನ ವಿಶೇಷ ಸವಲತ್ತುಗಳು ಇರುವುದಿಲ್ಲ ಎಂದು ಪ್ರೊ.ಪಿಎ.ಲ್.ಧರ್ಮ ಹೇಳಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬೋಧಕರು!
ವಿವಿಯ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧಿಸುತ್ತಿದ್ದಾರೆ.ಕಳೆದ ಎರಡು ಸೆಮಿಸ್ಟರ್‌ಗಳಿಂದ ಈ ವಿನೂತನ ಪ್ರಯತ್ನವನ್ನು ನಡೆಸಲಾಗುತ್ತಿದ್ದು, ಇದು ಯಶಸ್ವಿಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಬೋಧನಾ ವೃತ್ತಿಯಲ್ಲಿ ತೊಡಗಿಸುವ ಆಸಕ್ತಿ ಹೊಂದಿರುವುದರಿಂದ ವಿದ್ಯಾರ್ಜನೆ ಅವಧಿಯಲ್ಲೇ ಬೋಧನೆಗೆ ಅವಕಾಶ ನೀಡಿದರೆ, ಭವಿಷ್ಯ