ತೋಟಗಾರಿಕೆಯ ಪ್ರಾಮುಖ್ಯತೆ ತಿಳಿಸುವುದು ಶಿಬಿರದ ಉದ್ದೇಶ

| Published : Dec 21 2024, 01:16 AM IST

ಸಾರಾಂಶ

ಸಮೀಪದ ಮಾಯಗೊಂಡನಹಳ್ಳಿಯಲ್ಲಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ತೋಟಗಾರಿಕಾ ಕಾಲೇಜು ಮೂಡಿಗೆರೆಯ ಅಂತಿಮ ವರ್ಷದ ಬಿಎಸ್ಸಿ ತೋಟಗಾರಿಕೆ ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಚಟ್ಟಹಳ್ಳಿಯಲ್ಲಿ ೨ ತಿಂಗಳುಗಳ ಗ್ರಾಮೀಣ ತೋಟಗಾರಿಕೆ ಕೆಲಸದ ಅನುಭವ ಕಾರ್ಯಕ್ರಮ ಯಶಸ್ವಿಯಾಗಿ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಸಮೀಪದ ಮಾಯಗೊಂಡನಹಳ್ಳಿಯಲ್ಲಿ ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು.

ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ ಸಹಾಯಕ ಪ್ರಾಧ್ಯಾಪಕ ಭರತ್ ಕುಮಾರ್ ಟಿ. ಪಿಯವರು ಕಾರ್ಯಕ್ರಮದ ಉದ್ದೇಶದ ಕುರಿತು ಮಾತನಾಡಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಡಿ ತೋಟಗಾರಿಕಾ ಕಾಲೇಜು ಮೂಡಿಗೆರೆಯ ಅಂತಿಮ ವರ್ಷದ ಬಿಎಸ್ಸಿ ತೋಟಗಾರಿಕೆ ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಚಟ್ಟಹಳ್ಳಿಯಲ್ಲಿ ೨ ತಿಂಗಳುಗಳ ಗ್ರಾಮೀಣ ತೋಟಗಾರಿಕೆ ಕೆಲಸದ ಅನುಭವ ಕಾರ್ಯಕ್ರಮ ಯಶಸ್ವಿಯಾಗಿ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಕಿರಣ್ ಕುಮಾರ್(ಹಣ್ಣು ವಿಭಾಗ) ಶಿಬಿರದ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ತೋಟಗಾರಿಕೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವುದು, ಹೊಸ ತಂತ್ರಜ್ಞಾನ ಪರಿಚಯಿಸುವುದು ಮತ್ತು ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡುವುದು. ವಿದ್ಯಾರ್ಥಿಗಳು ತೋಟಗಾರಿಕೆ ಕುರಿತಂತೆ ನೇರವಾಗಿ ರೈತರು ಮತ್ತು ಗ್ರಾಮಸ್ಥರೊಂದಿಗೆ ಸಂಪರ್ಕ ಹೊಂದಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ಶಿಬಿರವು ರೈತರ ಮತ್ತು ವಿದ್ಯಾರ್ಥಿಗಳ ಮಧ್ಯೆ ಸಹಕಾರವನ್ನು ಬಲಪಡಿಸಲು ಮತ್ತು ತೋಟಗಾರಿಕೆಯಲ್ಲಿ ಹೊಸ ಮುನ್ನೋಟವನ್ನು ಮೂಡಿಸಲು ನೆರವಾಗುತ್ತಿದೆ ಎಂದು ತಿಳಿಸಿದರು.

ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆಯ ಡೀನ್ ಶ್ರೀನಿವಾಸ್ ವಿ. ಮುಖ್ಯಅತಿಥಿಗಳಾಗಿ ಆಗಮಿಸಿ, ಗ್ರಾಮೀಣ ಕೃಷಿ ಕಾರ್ಯನುಭವದ ಉದ್ದೇಶಗಳಲ್ಲಿ ತೋಟಗಾರಿಕೆಯ ಅನೇಕ ವಿಷಯಗಳನ್ನು ಅರಿಯುವ ಅವಕಾಶ ಈ ಶಿಬಿರದಲ್ಲಿ ಸಿಕ್ಕಿದೆ ಎಂದು ಹೇಳಿ, ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಮನವಿ ಮಾಡಿದರು.

ಗ್ರಾಮದ ಮುಖಂಡರಾದ ಎಂ.ಬಿ ವಿರೂಪಾಕ್ಷಪ್ಪ(ಅಧ್ಯಕ್ಷರು), ಎಂ. ಬಿ ಸದಾಶಿವ, ಚಂದ್ರಶೇಖರ್ ಎಂ. ಸಿ., ಡಿ. ನಂಜೇಗೌಡ್ರು, ಮಂಜುನಾಥ್, ಕೆನರಾ ಬ್ಯಾಂಕ್ ಮ್ಯಾನೇಜರ್ ಗಿರಿಧರ್, ಎಂ. ಎಚ್. ಮಹೇಶ್ವರಪ್ಪ ಹಾಗೂ ಎಂ. ಎಚ್ ನಾಗರಾಜ್ ಜ್ಯೋತಿ ಬೆಳಗುವುದರ ಮೂಲಕ ಸಭೆ ಉದ್ಘಾಟಿಸಿದರು.

ಸುಮಾರು ೧೧೦ ರೈತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತೀರ್ಥ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು , ಗ್ರಾಮದ ಮುಖಂಡ ಚಂದ್ರಶೇಖರ್ ಮತ್ತು ಎಲಕ್ಕಿಗೌಡ ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

----------