ಸಾರಾಂಶ
ರಾಮನಗರ: ಜೋಕಾಲಿಯ ಮಾಲೀಕನೊಬ್ಬ ಮೊಬೈಲ್ ಕದ್ದಿದ್ದಕ್ಕೆ ಬಾಲಕನನ್ನು ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿರುವ ಘಟನೆ ನಗರದ ಯಾರಬ್ ನಗರ ಬಡಾವಣೆಯಲ್ಲಿ ನಡೆದಿದೆ.
ರಾಮನಗರ: ಜೋಕಾಲಿಯ ಮಾಲೀಕನೊಬ್ಬ ಮೊಬೈಲ್ ಕದ್ದಿದ್ದಕ್ಕೆ ಬಾಲಕನನ್ನು ಕೂಡಿ ಹಾಕಿ, ಅನ್ನ ನೀರು ಕೊಡದೆ ಶಿಕ್ಷೆ ನೀಡಿರುವ ಘಟನೆ ನಗರದ ಯಾರಬ್ ನಗರ ಬಡಾವಣೆಯಲ್ಲಿ ನಡೆದಿದೆ.
ದರ್ಗಾ ಉರುಸು ಪ್ರಯುಕ್ತ ಮಕ್ಕಳಿಗೆ ಆಟವಾಡಲು ಜೋಕಾಲಿ ಹಾಕಲಾಗಿತ್ತು. ಬಾಲಕನೊಬ್ಬ ಜೋಕಾಲಿ ಆಡುತ್ತಲೇ ಮಾಲೀಕನ ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಮೊಬೈಲ್ ಹುಡುಕುತ್ತಿರುವಾಗ ಬಾಲಕನ ಜೇಬಿನಲ್ಲಿ ಮೊಬೈಲ್ ರಿಂಗ್ ಆಗಿದೆ. ಇದರಿಂದ ತನ್ನದೆ ಮೊಬೈಲ್ ಎಂದು ಗುರುತು ಹಿಡಿದ ಜೋಕಾಲಿ ಮಾಲೀಕ ಬಾಲಕನನ್ನು ಕೂಡಿ ಹಾಕಿದ್ದಾನೆ. ಮೊಬೈಲ್ ಕದ್ದ ಬಾಲಕನನ್ನು ಬಿಲ್ ಕೊಡುವ ಕೊಠಡಿಯಲ್ಲಿ ಕೂಡಿಹಾಕಿ ಸರಪಳಿಯಿಂದ ಲಾಕ್ಮಾಡಿ, ಅನ್ನ, ನೀರು ಕೊಡದೆ ಶಿಕ್ಷೆ ನೀಡಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ಬಾಲಕನ ತಪ್ಪಿಗೆ ಕ್ಷಮಿಸುವಂತೆ ಕೋರಿ ಬಿಟ್ಟು ಕಳುಹಿಸಲು ಮನವಿ ಮಾಡಿದ್ದಾರೆ. ಕೊನೆಗೆ ಸ್ಥಳೀಯರ ಮನವಿಯಂತೆ ಮಾಲೀಕ ಬಾಲಕನನ್ನು ಬಿಟ್ಟು ಕಳುಹಿಸಿದ್ದಾನೆ. ಬಾಲಕನಿಗೆ ಬುದ್ಧಿವಾದ ಹೇಳೋದು ಬಿಟ್ಟು ಕೂಡಿ ಹಾಕಿದ್ದು ಎಷ್ಟು ಸರಿ ಎಂಬ ಚರ್ಚೆ ಹುಟ್ಟುಕೊಂಡಿದೆ.