ಕೆಂಪೇಗೌಡರನ್ನು ಟೀಕಿಸಿದ ವ್ಯಕ್ತಿ ಕ್ಷಮೆ ಯಾಚಿಸಲಿ

| Published : May 05 2025, 12:46 AM IST

ಕೆಂಪೇಗೌಡರನ್ನು ಟೀಕಿಸಿದ ವ್ಯಕ್ತಿ ಕ್ಷಮೆ ಯಾಚಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಐನೂರು ವರ್ಷಗಳ ಹಿಂದೆ ಗುಡಿಬಂಡೆ ತಾಲೂಕನ್ನು ಆಳಿದ ಹಾವಳಿ ಬೈರೇಗೌಡ ರವರ ಪ್ರತಿಮೆ ಸ್ಥಾಪಿಸಲು ಅನುಮತಿಯ ನಿರೀಕ್ಷೆಯಲ್ಲಿದ್ದೇವೆ. ಆದರೆ ಏಪ್ರಿಲ್‌ 30 ರಂದು ಬಲಿಜ ಜನಾಂಗದ ಮುಖಂಡರುಗಳು ಅದೇ ಸ್ಥಳದಲ್ಲಿ ಕೈವಾರ ತಾತಯ್ಯನವರ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು. ಇದರಿಂದ ಎರಡು ಕೋಮಿನವರ ನಡುವೆ ಘರ್ಷಣೆ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕಿಡಿಗೇಡಿ ಒಬ್ಬ ನಾಡಪ್ರಭು ಕೆಂಪೇಗೌಡರ ವಿಚಾರದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಈ ವ್ಯಕ್ತಿ ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಯಲ್ಲಿ ಮಾತನಾಡಿ, ಐನೂರು ವರ್ಷಗಳ ಹಿಂದೆ ಗುಡಿಬಂಡೆ ತಾಲೂಕನ್ನು ಆಳಿದ ಹಾವಳಿ ಬೈರೇಗೌಡ ರವರ ಪ್ರತಿಮೆ ಸ್ಥಾಪಿಸಲು ಅನುಮತಿಯ ನಿರೀಕ್ಷೆಯಲ್ಲಿದ್ದೇವೆ. ಆದರೆ ಏಪ್ರಿಲ್‌ 30 ರಂದು ಬಲಿಜ ಜನಾಂಗದ ಮುಖಂಡರುಗಳು ಅದೇ ಸ್ಥಳದಲ್ಲಿ ಕೈವಾರ ತಾತಯ್ಯನವರ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು. ಇದರಿಂದ ಎರಡು ಕೋಮಿನವರ ನಡುವೆ ಘರ್ಷಣೆ ಉಂಟಾಗಿ ಪ್ರತಿಮೆಗೆ ನಿಗದಿಪಡಿಸಿದ ಸ್ಥಳದಲ್ಲಿ ಯಥಾ ಸ್ಥಿತಿಯಲ್ಲಿ ಇರುವಂತೆ ಇತ್ತೀಚೆಗೆ ಪೊಲೀಸರು ಸಂಧಾನ ನಡೆಸಿದ್ದರು ಎಂದರು. ಕ್ಷಮೆ ಕೇಳದಿದ್ದರೆ ಹೋರಾಟ

ಒಕ್ಕಲಿಗರ ಸಂಘದ ಖರೀಧಿ ವಿಭಾಗದ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕ ಉಮಾಪತಿ ಮಾತನಾಡಿ, ನಾಡ ಪ್ರಭು ಕೆಂಪೇಗೌಡರ ಬಗ್ಗೆ ಯಾವನೋ ಕಿಡಿಗೇಡಿ ಹಗುರವಾಗಿ ಮಾತನಾಡಿದ್ದಾನೆ. ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾವು ಕಾನೂನಿನ ಹೋರಾಟಮಾಡಿ, ಅವರಿಗೆ ತಕ್ಕ ಶಿಕ್ಷೆ ಸಿಗುವವರೆಗೂ ಬಿಡುವುದಿಲ್ಲಾ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಲವಹಳ್ಳಿ ಎನ್ ರಮೇಶ್, ಒಕ್ಕಲಿಗರ ಸಂಘದ ನಿರ್ದೇಶಕ ಡಾ. ರಮೇಶ್ ಗುಡಿಬಂಡೆ ತಾಲೂಕು ವಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್ ಗೌಡ, ಮುಖಂಡರಾದ ರಘುನಾಥರೆಡ್ಡಿ, ಚನ್ನಪ್ಪರೆಡ್ಡಿ,ಸೋಮಶೇಖರರೆಡ್ಡಿ ಮತ್ತಿತರರು ಇದ್ದರು.