ಜಾತಿಗಣತಿಯಿಂದ ಹಿಂದೂ ಸಮಾಜ ಛಿದ್ರ ಮಾಡುವ ಹುನ್ನಾರ

| Published : Sep 25 2025, 01:00 AM IST

ಜಾತಿಗಣತಿಯಿಂದ ಹಿಂದೂ ಸಮಾಜ ಛಿದ್ರ ಮಾಡುವ ಹುನ್ನಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಜಾತಿಗಣತಿ ಮೂಲಕ ಮಾದಿಗ ಜನಸಂಖ್ಯೆಯನ್ನು ನಂಬರ್‌ ಒನ್ ಸ್ಥಾನದಿಂದ ಕೆಳಗಿಳಿಸಿ ಹಾಗೂ ಹಿಂದೂ ಸಮಾಜವನ್ನು ಛಿದ್ರ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಜ್ಯ ಸರ್ಕಾರ ಜಾತಿಗಣತಿ ಮೂಲಕ ಮಾದಿಗ ಜನಸಂಖ್ಯೆಯನ್ನು ನಂಬರ್‌ ಒನ್ ಸ್ಥಾನದಿಂದ ಕೆಳಗಿಳಿಸಿ ಹಾಗೂ ಹಿಂದೂ ಸಮಾಜವನ್ನು ಛಿದ್ರ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಆರೋಪ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಶಿಷ್ಠ ಜಾತಿಯಲ್ಲಿ ಮಾದಿಗ ಸಮುದಾಯ ರಾಜ್ಯದ ಜನಸಂಖ್ಯೆಯಲ್ಲಿ ನಂಬರ್ ಒನ್ ಆಗಿದ್ದು, ಸದಾಶಿವ ಆಯೋಗ ಮತ್ತು ನಾಗಮೋಹನ್‌ ದಾಸ್‌ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ ಹೊಲೆಯರಿಗಿಂತ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ನಂಬರ್‌ ಒನ್‌ ಸ್ಥಾನವನ್ನು ಅಲುಗಾಡಿಸಲು ಜಾತಿಗಣತಿಯ ಮೂಲಕ ಹುನ್ನಾರ ಮಾಡುತ್ತಿದೆ ಎಂದರು.

2026ಕ್ಕೆ ರಾಷ್ಟ್ರೀಯ ಜನಗಣತಿ ಬರುತ್ತಿದೆ. ರಾಷ್ಟ್ರೀಯ ಜನಗಣತಿಯಲ್ಲಿ ಮಾದಿಗ ಸಮುದಾಯ ಕನಿಷ್ಠ 7 ಲಕ್ಷದಿಂದ 10 ಲಕ್ಷವಾಗಲಿದ್ದು, ಪರಿಶಿಷ್ಟ ಜಾತಿಯಲ್ಲಿ ಇತರ ಸಮುದಾಯಕ್ಕಿಂತ ಮಾದಿಗರ ಸಂಖ್ಯೆ ಮುಂದೆ ಬರುತ್ತದೆ. ಒಳಮೀಸಲಾತಿ ಜಾರಿ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ 25-8-2005 ರಂದು ಹೊರಡಿಸಿದ ಆದೇಶ ಮಾದಿಗ ಸಮುದಾಯಕ್ಕೆ ಮರಣಶಾಸನವಾಗಿದೆ ಎಂದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆ ದೊಡ್ಡ ಮಟ್ಟದ ಸಂಚು ದಲಿತ ಕ್ರಿಶ್ಚಯನ್ ಮಾಡಿ ಮೀಸಲಾತಿ ಕೊಡುವುದು ಅ ಮೂಲಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯ ಜನಸಂಖ್ಯೆಯನ್ನು ನಂಬರ್ ಒನ್ ಸ್ಥಾನದಿಂದ ಕೆಳಗಿಸುವ ಏಕೈಕ ಉದ್ದೇಶದಿಂದ ರಾಜ್ಯ ಸರ್ಕಾರ ನಿರಂತರವಾಗಿ ಮಾದಿಗ ಸಮುದಾಯದ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದರು.

ಜಾತಿಗಣತಿ ಸಮೀಕ್ಷೆ ಹಿಂದೂ ಸಮಾಜವನ್ನು ಛಿದ್ರ ಮಾಡುವ ಸಂಚಾಗಿದೆ ಸಂವಿಧಾನದಲ್ಲಿಲ್ಲದ ಮಾದಿಗ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಲಿಂಗಾಯಿತ ಕ್ರಿಶ್ಟಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಸೇರಿದಂತೆ ಇನ್ನು ಅನೇಕ ಪದಗಳನ್ನು ಸಮೀಕ್ಷೆಯಲ್ಲಿ ಸೇರಿಸಿರುವುದು ಹಿಂದೂ ಧರ್ಮವನ್ನು ಛಿದ್ರ ಮಾಡುವ ಹುನ್ನಾರವಾಗಿದೆ ಎಂದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಮಾದಿಗ ಸಂಬಂಧಿಸಿದ ಜಾತಿಗಳು ಜಾತಿಕಾಲಂನಲ್ಲಿ ಮಾದಿಗ, ಧರ್ಮಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು ಎಂದು ಮನವಿ ಮಾಡಿದರು.ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ರಾಜೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂದ್ರ ಬರೆಸಬಾರದು ಎಂದು ಮನವಿ ಮಾಡಿದರು

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಕಾರಕಾರಿಣಿ ಸಮಿತಿ ಸದಸ್ಯರಾದ ಎಂ.ಆರ್.ಸುರೇಂದ್ರಕುಮಾ‌ರ್, ಎಸ್.ಮಾಳಪ್ಪಕುರ್ಕಿ, ಮಲ್ಲು, ಮುತ್ತುರಾಜು, ಸಿದ್ದೇಶ್ ಹಾಜರಿದ್ದರು.