ಸಮಾಜದ ಡೊಂಕು ತಿದ್ದಿದ ವಚನಕಾರರು: ಅಶೋಕ ದಾಸರ

| Published : Mar 05 2025, 12:35 AM IST

ಸಮಾಜದ ಡೊಂಕು ತಿದ್ದಿದ ವಚನಕಾರರು: ಅಶೋಕ ದಾಸರ
Share this Article
  • FB
  • TW
  • Linkdin
  • Email

ಸಾರಾಂಶ

ಆಸೆ ಆಮಿಷಗಳಿಗೆ ಒಳಗಾಗದ ನಿರ್ಮಲ ಮನಸ್ಸಿನ ಅವರ ಆಲೋಚನೆಗಳು ಸಾರ್ವಕಾಲಿಕ ಸತ್ಯಗಳಾಗಿವೆ.

ಹಾನಗಲ್ಲ: ಶರಣರ ಅನುಭವ ಮಂಟಪದ ಚಿಂತನೆಗಳು ನಮ್ಮ ಸಂವಿಧಾನದ ಎಲ್ಲ ಅಂಶಗಳನ್ನೊಳಗೊಂಡ ಸರ್ವರಿಗೂ ಸಮ ಬಾಳು ಸಮ ಪಾಲು ಸಂದೇಶದೊಂದಿಗೆ ನುಡಿದಂತೆ ನಡೆದ ಸತ್ಯ ಸತ್ವಗಳು ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಉಪಾಧ್ಯಕ್ಷ ಅಶೋಕ ದಾಸರ ತಿಳಿಸಿದರು.ಹಾನಗಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಹಾಗೂ ದಿ. ಫಕ್ಕೀರಪ್ಪ ಮಹಾರಾಜಪೇಟ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ವಚನಕಾರರಿಗೆ ಸಮಸಮಾಜ ನಿರ್ಮಾಣದ ಕನಸಿತ್ತು. ಡಾಂಭಿಕ ಭಕ್ತಿಯನ್ನು ಎಂದೂ ಒಪ್ಪಲಿಲ್ಲ. ನಿಜವಾದ ಮನುಷ್ಯರ ನಿರ್ಮಾಣವೇ ಅವರ ಮುಖ್ಯ ಉದ್ದೇಶವಾಗಿತ್ತು ಎಂದರು.

ಆಸೆ ಆಮಿಷಗಳಿಗೆ ಒಳಗಾಗದ ನಿರ್ಮಲ ಮನಸ್ಸಿನ ಅವರ ಆಲೋಚನೆಗಳು ಸಾರ್ವಕಾಲಿಕ ಸತ್ಯಗಳಾಗಿವೆ. ಕಲ್ಯಾಣ ಕ್ರಾಂತಿ ಎಲ್ಲ ಕಾಲಕ್ಕೂ ನೆನಪಿಸುವ ಹಾಗೂ ಶರಣರ ಸತ್ಯದ ನೆಲೆಯ ಅಭಿವ್ಯಕ್ತಿಯಾಗಿತ್ತು. ಶರಣರು ಪುಸ್ತಕ ಪಂಡಿತರಾಗಿರಲಿಲ್ಲ, ಅನುಭಾವದ ದೊಡ್ಡ ಶಕ್ತಿಯಾಗಿದ್ದರು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯವಾದಿ ಎಂ.ಎಸ್. ಹುಲ್ಲೂರ, ಶರಣರ ಮಹಾಮನೆ ಯೋಚನೆಗೆ ಹೊಸ ಯೋಜನೆ ರೂಪಿಸಿ ಪ್ರತಿ ಮನೆಗಳು ಮಹಾಮನೆಯಾಗುವಂತೆ ಕಾರ್ಯಕ್ರಮಗಳನ್ನು ರೂಪಸಿಸಬೇಕಾಗಿದೆ. ಶರಣರಲ್ಲಿ ಯಾವುದೇ ಭೇದಕ್ಕೆ ಅವಕಾಶವಿರಲಿಲ್ಲ. ಜಗತ್ತಿಗೆ ಮೊದಲ ಸಂಸತ್ತಿನ ಯೋಚನೆ ಕೊಟ್ಟವರು 12ನೇ ಶತಮಾನದ ಬಸವಾದಿ ಶಿವಶರಣರು. ಇಂದಿನ ಕಾಲ ಘಟದಲ್ಲಿ ವಚನಗಳ ಪ್ರಚಾರ ಪ್ರಸಾರದ ಅಗತ್ಯವಿದೆ ಎಂದರು.ಆಶಯ ನುಡಿಗಳನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಅವರು, ಶರಣರ ನಡೆ ನುಡಿ ಒಂದಾದ ಭಕ್ತಿ ಸಂದೇಶ ಈಗ ಎಲ್ಲೆಡೆ ಪ್ರಚಾರದ ಅಗತ್ಯವಿದೆ. ಸಾಮಾಜಿಕ ಸಾಮರಸ್ಯದ ಮೊತ್ತವೇ ವಚನಗಳು. ಕೌಟುಂಬಿಕ ಸಾಮರಸ್ಯಕ್ಕಾಗಿ, ಆರ್ಥಿಕ, ವೈಜ್ಞಾನಿಕ ವಿಚಾರಗಳನ್ನು 12ನೇ ಶತಮಾನದಲ್ಲಿಯೇ ನೀಡಿದ ಹೆಗ್ಗಳಿಕೆ ಶರಣರದ್ದಾಗಿವೆ. ಆಯುರ್ವೇದ, ಕೃಷಿ ಕೃತ್ಯಗಳನ್ನೂ ಒಳಗೊಂಡಂತೆ ಸಮಾಜಕ್ಕೆ ಬೇಕಾಗುವ ಒಳಿತೆಲ್ಲವನ್ನೂ ತಮ್ಮ ವಚನಗಳಲ್ಲಿ ವಿವರವಾಗಿ ನೀಡಿದ್ದಾರೆ ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಯೋಜಕ ಬಿ.ಎನ್. ಸಂಗೂರ, ಸುಮಂಗಲಾ ಕಟ್ಟಿಮಠ, ಪ್ರವೀಣ ಬ್ಯಾತನಾಳ, ಸುವರ್ಣ ಹಿರೇಗೌಡ್ರ, ಲಕ್ಷ್ಮಿ ಓಂಕಾರ, ಎಂ.ಎಸ್. ಅಮರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಮಾನತೆಯ ಹಕ್ಕು ನೀಡಿದ ಅಂಬೇಡ್ಕರ್

ರಾಣಿಬೆನ್ನೂರು: ಡಾ. ಬಿ.ಅರ್. ಅಂಬೇಡ್ಕರ್ ಅವರು ಸಮಾಜದಲ್ಲಿರುವ ಪ್ರತಿಯೊಬ್ಬ ಮನುಷ್ಯನಿಗೂ ಜೀವಿಸುವ ಹಾಗೂ ಸಮಾನತೆಯ ಹಕ್ಕನ್ನು ನೀಡಿದ್ದಾರೆ ಎಂದು ವಸತಿ ನಿಲಯದ ಪಾಲಕ ವಿಜಯಕುಮಾರ ಹೊಸಂಗಡಿ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ನಂ. 2ರಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.ಶ್ರೀಶೈಲ ಸಿಂಧೆ, ಸುನೀಲ ಕಡೂರ, ಭೀಮರಾವ ಜಾಲಣ್ಣವರ, ಪ್ರಸನ್ನ ಅಂಗಡಿ, ಸೂರಜ ಲಮಾಣಿ, ನಾಗರಾಜ ಹಾಗೂ ಅಡುಗೆ ಸಿಬ್ಬಂದಿ ಇದ್ದರು.