ಕೆಸರೆ ಉಸ್ಮಾನಿಯಾ ಬ್ಲಾಕ್ ನಿವಾಸಿ ನವಾಜ್ ಶರೀಫ್ (32) ಎಂಬಾತನೇ ಬಂಧಿತ ಆರೋಪಿ.
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀಗಂಧ ಮರ ಕಳವು ಮಾಡಿದ್ದ ಆರೋಪಿಯನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಬಂಧಿಸಿ, 30 ಕೆ.ಜಿ. ಶ್ರೀಗಂಧ ಮರದ ತುಂಡುಗಳು, ಬೈಕ್ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.ಕೆಸರೆ ಉಸ್ಮಾನಿಯಾ ಬ್ಲಾಕ್ ನಿವಾಸಿ ನವಾಜ್ ಶರೀಫ್ (32) ಎಂಬಾತನೇ ಬಂಧಿತ ಆರೋಪಿ. ಈತನು ಕೆಸರೆಯಲ್ಲಿ ಕಳವು ಮಾಡಿದ್ದ ಶ್ರೀಗಂಧದ ಮರದ ತುಂಡುಗಳನ್ನು ಬೈಕಿನಲ್ಲಿ ಸಾಗಿಸುತ್ತಿದ್ದಾಗ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಸಿಸಿಬಿ ಇನ್ಸ್ ಪೆಕ್ಟರ್ ಶಬ್ಬೀರ್ ಹುಸೇನ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ. ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.