ಬಿಸಿಯೂಟಕ್ಕೂ ತಟ್ಟಿದ ತರಕಾರಿ ಬೆಲೆ ಏರಿಕೆ ಬಿಸಿ

| N/A | Published : Jul 03 2025, 11:49 PM IST / Updated: Jul 04 2025, 11:58 AM IST

ಬಿಸಿಯೂಟಕ್ಕೂ ತಟ್ಟಿದ ತರಕಾರಿ ಬೆಲೆ ಏರಿಕೆ ಬಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತರಕಾರಿ ಬೆಲೆಯು ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನದಲ್ಲಿ ತರಕಾರಿ ಖರೀದಿ ಸಲು ಸಾಧ್ಯವಾಗದೆ ತಮ್ಮ ಜೇಬಿನಿಂದ ಹಣ ವೆಚ್ಚ ಮಾಡಿ ಶಿಕ್ಷಕರು ತರಕಾರಿ ಖರೀದಿಸುತ್ತಿದ್ದಾರೆ. ಸರ್ಕಾರ, ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ.  

 ಚಿಕ್ಕಬಳ್ಳಾಪುರ :  ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿರುವ ಅಕ್ಷರ ದಾಸೋಹ ಯೋಜನೆಯ ಪ್ರತಿದಿನ ಆಹಾರದಲ್ಲಿ ಬಳಕೆಯಾಗಲೇಬೇಕಾಗಿರುವ ಧಾನ್ಯ ಹಾಗೂ ತರಕಾರಿಗಳ ಬೆಲೆ ಸರ್ಕಾರ ನಿಗದಿಪಡಿಸಿದ ಅನುದಾನದಲ್ಲಿ ಈ ಪದಾರ್ಥಗಳನ್ನು ಹೊಂದಿಸುವುದು ಕಷ್ಟ. ಹೀಗಾಗಿ ಅಕ್ಷರ ದಾಸೋಹ ಯೋಜನೆಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಬಿಸಿಯೂಟ ನೀಡಲಾಗುತ್ತಿದೆ. ಸರ್ಕಾರ ಪ್ರತಿ ವಿಧ್ಯಾರ್ಥಿಗೆ 1ರಿಂದ 5 ನೆ ತರಗತಿಯವರೆಗೆ 5.45ರೂ,6 ರಿಂದ 10 ನೇತರಗತಿಯವರೆಗೆ ರೂ 8.17 ಪ್ರತಿದಿನ ಖರ್ಚು ಮಾಡುತ್ತಿದೆ. ಇದರಲ್ಲಿ ತರಕಾರಿಗೆ ಎಂದು 1ರಿಂದ 5 ನೆ ತರಗತಿಯವರೆಗೆ 1.49 ರೂ,6 ರಿಂದ 10 ನೇತರಗತಿಯವರೆಗೆ ರೂ 2.24 ವ್ಯಯ ಮಾಡುತ್ತಿದೆ. ಆದರೆ ಆಹಾರಧಾನ್ಯಗಳ, ತರಕಾರಿಗಳ ಬೆಲೆ ಗಗನಕೇರಿದ್ದರಿಂದ ಶಾಲೆಗಳಿಗೆ ಬಿಸಿ ಊಟದ ತರಕಾರಿ ಅಡುಗೆ ಅನಿಲ ಸೇರಿ ಬಿಸಿಯೂಟ ನೌಕರರು ಹಾಗೂ ಶಿಕ್ಷಕರು ಕೈಯಿಂದ ಹಣ ಹಾಕಿ ಖರೀದಿಸಿ ತರುತ್ತಿದ್ದಾರೆ.

ಶಿಕ್ಷಕರಿಗೆ ಸವಾಲು:

ಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮೊಟ್ಟೆ ಬೆಲೆ ಗಗನಕ್ಕೇರಿದ್ದು, ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಒಬ್ಬ ವಿದ್ಯಾರ್ಥಿ ರೂ 6 ಸಹಾಯಧನ ನಿಗದಿ ಪಡಿಸಲಾಗಿದೆ. ಆದರೆ, ಅಂಗಡಿ ಯಲ್ಲಿ ಒಂದು ಮೊಟ್ಟೆ ರೂ 6.80 ರಿಂದ 7 ಕ್ಕೆ ಮಾರಾಟವಾಗುತ್ತಿದೆ. ಹಾಗಾಗಿ ಬಿಸಿಯೂಟ ಮಾಡಿಸುತ್ತಿರುವ ಶಿಕ್ಷಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಜಿಲ್ಲೆಯಲ್ಲಿ 1632 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಟ್ಟು 90 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. 1ರಿಂದ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ ವಿದ್ಯಾರ್ಥಿಗೆ ಸಾಂಬಾರು ಪದಾರ್ಥ, ಉಪ್ಪು, ಬೇಳೆ,ಎಣ್ಣೆ, ಇಂಧನ ಮತ್ತು ಇತರೆ ವೆಚ್ಚ ಖರೀದಿಗಾಗಿ ರೂ3.96 , 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರೂ 5.92 ಸರ್ಕಾರ ನೀಡುತ್ತಿದೆ.

ಶಿಕ್ಷಕರ ಜೇಬಿಗೆ ಕತ್ತರಿ

ತರಕಾರಿ ಬೆಲೆಯು ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನದಲ್ಲಿ ತರಕಾರಿ ಖರೀದಿ ಸಲು ಸಾಧ್ಯವಾಗದೆ ತಮ್ಮ ಜೇಬಿನಿಂದ ಹಣ ವೆಚ್ಚ ಮಾಡಿ ಶಿಕ್ಷಕರು ತರಕಾರಿ ಖರೀದಿಸುತ್ತಿದ್ದಾರೆ. ಸರ್ಕಾರ, ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆ ಯವರೇ ಖರೀದಿಸಬೇಕಾಗಿದೆ. ಈಗಿನ ಬೆಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಸರಾಸರಿ 13 ರೂ ಖರ್ಚಾಗುತ್ತಿದ್ದು, ಹೆಚ್ಚುವರಿ 4.83 ರು.ಗಳು ಶಿಕ್ಷಕರಿಗೆ ಹೊರೆಯಾಗುತ್ತಿದೆ. ಸರ್ಕಾರ ಮಕ್ಕಳಿಗೆ ಬಿಸಿಯೂಟ ಕೊಡುತ್ತಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನ ಏರಿಕೆಯಾಗದೆ ಶಿಕ್ಷಕರು ಯಾವ ರೀತಿ ನಿಭಾಯಿಸುತ್ತಾರೆ. ಅವರ ಜೇಬಿಂದ ಎಷ್ಟು ದಿನ ಖರ್ಚು ಮಾಡಲು ಸಾಧ್ಯ. ಹಾಗಾಗಿ ಅನುದಾನ ಹೆಚ್ಚಳ ಮಾಡಬೇಕೆಂಬುದು ಪೋಷಕರ ಒತ್ತಾಯವಾಗಿದೆ. ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಕಾರಿ ಒದಗಿಸಲಾಗುತ್ತಿಲ್ಲ. ಇರುವುದರಲ್ಲೇ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರೊಬ್ಬರು ತಿಳಿಸಿದರು.

ಬಿಸಿಯೂಟ ದರ ಪರಿಷ್ಕರಣೆಪ್ರಸ್ತುತ ಸರ್ಕಾರದಿಂದ ನಮಗೆ ಬಿಡುಗಡೆಯಾಗುವ ಅನುದಾನವನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬಿಸಿಯೂಟಕ್ಕೆ ನೀಡುವ ದರವೂ ಹೊಸದಾಗಿ ಪರಿಷ್ಕರಣೆಯಾಗಿದೆ. ಈ ವರ್ಷದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಪೂರ್ಣ ಅಂಕಿ ಅಂಶಗಳ ಚಿತ್ರಣ ದೊರೆತರೆ ಉತ್ತಮ ಪರಿಹಾರ ಕಂಡುಕೊಳ್ಳಲು ಸಾಧ್ಯ. ಎಂದು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Read more Articles on