ಬಡವರ ನಿವೇಶನ ಸಮಸ್ಯೆ ಬಗೆಹರಿಯಲಿದೆ

| Published : Feb 23 2025, 12:34 AM IST

ಸಾರಾಂಶ

ಇ-ಖಾತಾ ಅಭಿಯಾನದಿಂದ ಸಾವಿರಾರು ಬಡವರ ನಿವೇಶನಗಳ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಹಿರಿಯೂರು: ಇ-ಖಾತಾ ಅಭಿಯಾನದಿಂದ ಸಾವಿರಾರು ಬಡವರ ನಿವೇಶನಗಳ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಈ ಯೋಜನೆ ತಾಲೂಕು ಸೇರಿದಂತೆ ಜಿಲ್ಲೆಯ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ಉಪಯೋಗವಾಗಲಿದ್ದು ನಿಗದಿತ ಸಮಯದೊಳಗೆ ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದರು.

ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಇ -ಖಾತಾ, ಬಿ- ಖಾತಾ ಅಭಿಯಾನ ಆರಂಭಗೊಂಡಿದೆ. ಪ್ಲಾನಿಂಗ್ ಇಲ್ಲದ ಸ್ವತ್ತುಗಳನ್ನು ಇಷ್ಟು ದಿನ ಇ ಸ್ವತ್ತು ಮಾಡುತ್ತಿರಲಿಲ್ಲ. ಅಂತಹ ಸುಮಾರು 3-4 ಸಾವಿರ ಖಾತೆ ನಮ್ಮಲ್ಲಿವೆ. ಇದೀಗ ಅವುಗಳಿಗೆ ಬಿ ಖಾತಾ ಮಾಡಲಾಗುತ್ತದೆ. ಮೂರು ತಿಂಗಳು ಗಡುವು ಇದ್ದು ಅಷ್ಟರೊಳಗೆ ಅಧಿಕೃತ ದಾಖಲೆ ನೀಡಿ ಈ ಅಭಿಯಾನದ ಸೌಲಭ್ಯ ಪಡೆಯಿರಿ ಎಂದರು.

ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ , ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಎಸ್.ಶಿವರಂಜನಿ, ಚಿತ್ರಜಿತ್ ಯಾದವ್, ಪೌರಾಯುಕ್ತ ಎ ವಾಸೀಂ ಸೇರಿದಂತೆ ಹಲವರು ಹಾಜರಿದ್ದರು.