ಬಿಜೆಪಿ ಆಡಳಿತಾವಧಿಯಲ್ಲಿ ಮನೆ ಮನೆಗೆ ಯೋಜನೆಗಳು ತಲುಪಿವೆ

| Published : Sep 21 2024, 01:55 AM IST

ಸಾರಾಂಶ

ಅಭಿವೃದ್ಧಿಯೇ ಬಿಜೆಪಿ ಅಜೆಂಡಾ ಆಗಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಎಲ್ಲ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಮನೆ ತಲುಪಿಸುವಂತಹ ಕಾರ್ಯ ಆಗಿದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಶಿಗ್ಗಾಂವಿ: ಅಭಿವೃದ್ಧಿಯೇ ಬಿಜೆಪಿ ಅಜೆಂಡಾ ಆಗಿದ್ದು, ಬಿಜೆಪಿ ಆಡಳಿತಾವಧಿಯಲ್ಲಿ ಎಲ್ಲ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಮನೆ ತಲುಪಿಸುವಂತಹ ಕಾರ್ಯ ಆಗಿದೆ ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ತಾಲೂಕಿನ ಹೊಸೂರು, ಯತ್ನಳ್ಳಿ ತಾಂಡಾ ಹಾಗೂ ಮಸಳಿಕೊಪ್ಪ, ಅರಟಾಳ ಗ್ರಾಮಗಳಲ್ಲಿ ಶ್ರೀಕಾಂತ ದುಂಡಿಗೌಡ್ರ ನೇತೃತ್ವದಲ್ಲಿ ನಡೆದ “ನಮ್ಮ ನಡೆ ಕಾರ್ಯಕರ್ತರ ಕಡೆ” ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಬಡವರ ಪರವಾಗಿವೆ. ಆದ್ದರಿಂದ ಬಿಜೆಪಿಯ ಗೆಲುವು ನಿಜವಾದ ಅಭಿವೃದ್ಧಿಯ ಗೆಲುವು. ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.

ಆನಂತರ ವಿವಿಧ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಮುಖಂಡರು ಶ್ರೀಕಾಂತ ದುಂಡಿಗೌಡ್ರ ಅವರನ್ನು ಗೌರವಿಸಿದರು.

ಕೆಸಿಸಿ ನಿರ್ದೇಶಕ ಸಂಗಮೇಶ ಕಂಬಾಳಿಮಠ, ಮುಖಂಡರಾದ ಎಂ.ಎನ್. ವೆಂಕೋಜಿ, ತಿಪ್ಪಣ್ಣ ಸಾತಣ್ಣವರ, ಹನುಮರೆಡ್ಡಿ ನಡುವಿನಮನಿ, ಸಿ.ವಿ. ಮತ್ತಿಗಟ್ಟಿ, ಬಸವರಾಜ ನಾರಾಯಣಪುರ, ಸಂತೋಷ ಹುಣಶ್ಯಾಳ್, ನಾಗಪ್ಪ ಅದೃಶ್ಯಪ್ಪನವರ್, ರಮೇಶ್ ಸಾತಣ್ಣವರ್, ಗ್ರಾಮದ ಹಿರಿಯರಾದ ಶೇಖರಗೌಡ ಪಾಟೀಲ್, ಶಂಕ್ರಪ್ಪ ಲಕ್ಕಣ್ಣವರ್, ಆದಪ್ಪ ಚಬ್ಬಿ, ನೀಲಪ್ಪ ಬಾರಕೇರ, ವೀರನಗೌಡ ದೊಡ್ಡಗೌಡ್ರು, ಶಂಕರಗೌಡ ಪಾಟೀಲ್, ಸುಧೀರ್ ಛಬ್ಬಿ, ಮಂಜನಗೌಡ ಪಾಟೀಲ್, ಈರಪ್ಪ ಡವಗಿ, ಎಸ್.ಆರ್. ಅದರಗುಂಚಿ, ಚನ್ನಪ್ಪ ಬಿಂದ್ಲಿ, ನಾಗರಾಜ್ ಸೂರಗೊಂಡ, ಶಿವನಗೌಡ ಪಾಟೀಲ್, ಅರುಣ್ ಇಂದೂರ್, ಮಹಾದೇವ ದೇವತಿ, ನಿತ್ಯಾನಂದ ಬರದೂರ, ಅರ್ಜಪ್ಪ ಲಮಾಣಿ, ಮಾಂತೇಶ್ ಲಮಾಣಿ, ಕೃಷ್ಣ ಲಮಾಣಿ, ಧರಣೇಂದ್ರ ಪುಟ್ಟಣ್ಣವರ, ಬಾಹುಬಲಿ ಬಿಶೆಟ್ಟಿ, ಗದಿಗೆಪ್ಪ ಹೊನ್ನಳ್ಳಿ ಹಾಗೂ ಗ್ರಾಮದ ಮುಖಂಡರು, ಹಿರಿಯರು, ಯುವಕರು ಉಪಸ್ಥಿತರಿದ್ದರು.