ಸಾರ್ವಜನಿಕರು ಪೊಲೀಸರ ಜತೆ ಮುಕ್ತವಾಗಿ ಬೆರೆಯಬೇಕು-ಅಶೋಕ ಕೊಂಡ್ಲಿ

| Published : May 26 2024, 01:35 AM IST

ಸಾರ್ವಜನಿಕರು ಪೊಲೀಸರ ಜತೆ ಮುಕ್ತವಾಗಿ ಬೆರೆಯಬೇಕು-ಅಶೋಕ ಕೊಂಡ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರ ಬಗ್ಗೆ ಭಯಬೇಡ ಸಾರ್ವಜನಿಕರು ಅವರೊಂದಿಗೆ ಮುಕ್ತವಾಗಿ ಬೆರೆತು, ಕಾನೂನನ್ನು ಕಾಪಾಡಬೇಕು ಎಂದು ರಟ್ಟಿಹಳ್ಳಿಯ ಪೊಲೀಸ್ ಠಾಣೆಯ ಎಎಸ್‌ಐ ಅಶೋಕ್ ಕೊಂಡ್ಲಿ ಹೇಳಿದರು.

ಹಿರೇಕೆರೂರ: ಪೊಲೀಸರ ಬಗ್ಗೆ ಭಯಬೇಡ ಸಾರ್ವಜನಿಕರು ಅವರೊಂದಿಗೆ ಮುಕ್ತವಾಗಿ ಬೆರೆತು, ಕಾನೂನನ್ನು ಕಾಪಾಡಬೇಕು ಎಂದು ರಟ್ಟಿಹಳ್ಳಿಯ ಪೊಲೀಸ್ ಠಾಣೆಯ ಎಎಸ್‌ಐ ಅಶೋಕ್ ಕೊಂಡ್ಲಿ ಹೇಳಿದರು. ತಾಲೂಕಿನ ಎತ್ತಿನಹಳ್ಳಿ ಎಂಕೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಅಪರಾದಗಳು ಕಂಡುಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ಎಂದರು. ಜನಪದರ ಬದುಕು ಮತ್ತು ಸಾಹಿತ್ಯ ಉಳಿಸಲು ಗ್ರಾಮೀಣ ಭಾಗದ ಜನರು ತಮ್ಮ ದೇಸಿ ಸಂಸ್ಕೃತಿಯನ್ನು ಕಾಪಾಡಬೇಕು ಎಂದರು. ಗಾಯಕರಾದ ಅಶೋಕ್ ಅವರು ಜನಪದ ಗೀತೆಗಳನ್ನು ಹಾಡುವ ಮೂಲಕ ಗ್ರಾಮಸ್ಥರನ್ನು ರಂಜಿಸಿದರು. ಉಪನ್ಯಾಸಕ ಶ್ರೀನಿವಾಸ ನಲವಾಗಿಲ ಅವರು ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಎಂಬ ವಿಷಯ ಕುರಿತು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವವನ್ನು ತಿಳಿಸಿದರು. ಸ್ಥಳೀಯ ವ್ಯಕ್ತಿಗಳಿಗೆ ಅನುಕೂಲವಾಗಲಿ ಎಂದು ಸ್ಪರ್ಧಾತ್ಮಕ ಕೇಂದ್ರ ನಡೆಸುವುದಾಗಿ ತಿಳಿಸಿದರು.ಗ್ರಾಮದ ಮುಖಂಡ ಶಿವಮೂರ್ತೆಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಪ್ಪ ಮುಚಡಿ , ಪರಮೇಶಪ್ಪ ತಳವಾರ, ಶಾಂತಪ್ಪ ಕೊರಚರ, ಈರಪ್ಪ ಮಳವಳ್ಳಿ, ನಾಗರಾಜ ನಂದಿಹಳ್ಳಿ, ಬಸವಣ್ಣೆಪ್ಪ ಹಿರೇಕೆರೂರು, ಗಣೇಶಗೌಡ ಪಾಟೀಲ್, ಷಣ್ಮುಖಪ್ಪ ಹಾಲಪ್ಪ ರಡ್ಡೇರ, ಪ್ರಾಚಾರ್ಯ ಡಾ|ಎಸ್.ಪಿ.ಗೌಡರ. ಕಾರ್ಯಕ್ರಮ ಅಧಿಕಾರಿಗಳಾದ ಹರೀಶ್ ಡಿ., ಗೀತಾ ಎಂ., ವಿ.ಜಿ. ಪಾಟೀಲ್, ಬಸನಗೌಡ ಗೌಡರ, ಸಹ ಶಿಬಿರಾಧಿಕಾರಿಗಳಾದ ಡಾ| ಕಾಂತೇಶ ರೆಡ್ಡಿ ಗೋಡಿಹಾಳ, ಬಸವರಾಜ ಮಾಗಳದ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳು ಇದ್ದರು.