ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವೇ ಲೋಕ್ ಅದಾಲತ್ ಉದ್ದೇಶ

| Published : Jun 20 2025, 12:34 AM IST / Updated: Jun 20 2025, 12:35 AM IST

ಸಾರಾಂಶ

ಶೃಂಗೇರಿಜನತಾ ನ್ಯಾಯಾಲಯಗಳಿರುವುದು ಜನಸಾಮಾನ್ಯರಿಗಾಗಿ ಈ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳದೇ ಬಾಕಿ ಉಳಿದ ಪ್ರಕರಣಗಳನ್ನು ರಾಜಿ ಸಂಧಾನಗಳ ಮೂಲಕ ಇತ್ಯರ್ಥಗೊಳಿಸಿ ಜನರಿಗೆ ನ್ಯಾಯಒದಗಿಸಿಕೊಡುವುದು ಲೋಕ್ ಅದಾಲತ್ ಕಾರ್ಯಕ್ರಮಗಳ ಉದ್ದೇಶ ಎಂದು ಶೃಂಗೇರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಶೃಂಗೇರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು

ಕನ್ನಡಪ್ರಭ ವಾರ್ತೆ, ಶೃಂಗೇರಿ

ಜನತಾ ನ್ಯಾಯಾಲಯಗಳಿರುವುದು ಜನಸಾಮಾನ್ಯರಿಗಾಗಿ ಈ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳದೇ ಬಾಕಿ ಉಳಿದ ಪ್ರಕರಣಗಳನ್ನು ರಾಜಿ ಸಂಧಾನಗಳ ಮೂಲಕ ಇತ್ಯರ್ಥಗೊಳಿಸಿ ಜನರಿಗೆ ನ್ಯಾಯಒದಗಿಸಿಕೊಡುವುದು ಲೋಕ್ ಅದಾಲತ್ ಕಾರ್ಯಕ್ರಮಗಳ ಉದ್ದೇಶ ಎಂದು ಶೃಂಗೇರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಜು.12 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್ಎಎಲ್ ಎಸ್ ಎ ವರ್ಷದಲ್ಲಿ 4 ಲೋಕ್ ಅದಾಲತ್ ಗಳನ್ನು ಆಯೋಜಿಸುತ್ತಿದ್ದು ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ , ರಾಜಿ ಸಂದಾನಗಳ ಮೂಲಕ ಪ್ರಕರಣಗಳ ಇತ್ಯರ್ಥಗೊಳಿಸಿ ಸಮಸ್ಯೆ ಬಗೆಹರಿಸಿ ನ್ಯಾಯದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಶಾಶ್ವತ ಲೋಕ್ ಅದಾಲತ್, ರಾಷ್ಟ್ರೀಯ ಲೋಕ್ ಅದಾಲತ್, ಮೆಗಾ ಲೋಕ್ ಅದಾಲತ್, ಸಂಚಾರಿ ಲೋಕ್ ಅದಾಲತ್ ಗಳ ಮೂಲಕ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ರಾಜಿ ಸಂದಾನಕ್ಕೆ ಬರಬಹುದಾದ ಪ್ರಕರಣಗಳನ್ನು

ಲೋಕ್ ಅದಾಲತ್ ವಿವಾದಗಳ ಇತ್ಯರ್ಥಕ್ಕೆ ಸುಲಭವಾದ ಹಾಗೂ ವೇಗವಾದ ವಿಧಾನವಾಗಿದೆ. ಕೌಟುಂಬಿಕ ವಿವಾದ, ವ್ಯಾಜ್ಯಗಳು, ಬ್ಯಾಂಕ್ ವಸೂಲಾತಿ ಪ್ರಕಣ,ಗ್ರಾಹಕರ ಕುಂದುಕೊರತೆ,ಪಿಂಚಣಿ ಪ್ರಕರಣಗಳು, ರಾಜಿಗೆ ಬರಬಹುದಾದ ಕ್ರಿಮಿನಲ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ಕಾರ್ಮಿಕ ವಿವಾದ ಇನ್ನಿತ್ಯಾ ರಾಜಿ ಸಂದಾನಕ್ಕೆ ಬರಬಹುದಾದ ಪ್ರಕರಣಗಳನ್ನು ಅದಾಲತ್ ನಲ್ಲಿ ಇತ್ಯರ್ಥಪಡಿಸಬಹುದಾಗಿದೆ.

ಬ್ಯಾಂಕ್, ಕಂದಾಯ, ಪಂಚಾಯತ್. ಸಂಘಸಂಸ್ಥೆಗಳು ತಮ್ಮಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.ಇದಕ್ಕೆ ಎಲ್ಲರ ಸಹಕಾರ ಅಗತ್ಯ.ಪೋಲೀಸರು ಲೋಕ್ ಅದಾಲತ್ ಗಾಗಿ ಪ್ರಕರಣಗಳನ್ನು ದಾಖಲಿಸಬಾರದು.ಜನರಲ್ಲಿರುವ ಇಂತಹ ಭಾವನೆ ಹೋಗಲಾಡಿಸಬೇಕು.ಹೆಲ್ಮೆಟ್ ಧರಿಸದ,ಸೀಟ್ ಬೆಲ್ಟ್ ಹಾಕದ ಸವಾರರು ಸೇರಿದಂತೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸವಾರರು ತಮ್ಮ ಜೀವದ ರಕ್ಷಣೆಗಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.

ಶೃಂಗೇರಿ ನ್ಯಾಯಾಲಯದಲ್ಲಿ 391 ಪ್ರಕರಣಗಳಿದ್ದು ಅದರಲ್ಲಿ 72 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಜು.12 ರಂದು ನಡೆಯಲಿರುವ ರಾಷ್ಟ್ರೀ ಯ ಲೋಕ್ ಅದಾಲತ್ ನಲ್ಲಿ ಇತ್ಯರ್ಥಕ್ಕೆ ಗುರುತಿಸಲಾಗಿದ್ದು, ಅದರಲ್ಲಿ 31 ಪ್ರಕರಣಗಳು ಇತ್ಯರ್ಥಕ್ಕೆ ಆಯ್ಕೆ ಮಾಡಲಾಗಿದೆ. ಇನ್ನುಳಿದ ಪ್ರಕರಣಗಳನ್ನು ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು

ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಮಹೇಶ್, ಸರ್ಕಾರಿ ವಕೀಲೆ ಹರಿಣಾಕ್ಷಿ, ತಾಪಂ ಇಒ ಸುದೀಪ್, ಕಂದಾಯ ಇಲಾಖೆ ಶಿರಸ್ತೆದಾರ್ ಪ್ರವೀಣ್, ಪಪಂ ಮುಖ್ಯಾಧಿಕಾರಿ,ಬ್ಯಾಂಕ್, ವಿವಿಧ ಕಚೇರಿಗಳ ಅಧಿಕಾರಿಗಳು ಇದ್ದರು.

19 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾ.ಆರ್.ಎಸ್.ಜೀತು ಮಾತನಾಡಿದರು.