ಗುರು- ಶಿಷ್ಯರ ಸಂಬಂಧ ಅನೋನ್ಯವಾದುದು: ಬಿ.ಜಿ. ತಾಯಮ್ಮನವರ

| Published : May 17 2025, 02:06 AM IST

ಗುರು- ಶಿಷ್ಯರ ಸಂಬಂಧ ಅನೋನ್ಯವಾದುದು: ಬಿ.ಜಿ. ತಾಯಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲೂ ಬದುಕಿನ ಮೆಟ್ಟಿಲುಗಳನ್ನು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸುವ ಗುರುಗಳ ಕಾರ್ಯವನ್ನು ಎಂದಿಗೂ ಮರೆಯಲು ಅಸಾಧ್ಯ.

ರಾಣಿಬೆನ್ನೂರು: ಗುರುಶಿಷ್ಯರ ಸಂಬಂಧ ಅನ್ಯೋನ್ಯವಾದುದು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ.ಜಿ. ತಾಯಮ್ಮನವರ ತಿಳಿಸಿದರು.ತಾಲೂಕಿನ ಮೆಡ್ಲೇರಿ ಗ್ರಾಮದ ಬೀರೇಶ್ವರ ಪ್ರೌಢಶಾಲೆಯ ಆವರಣದಲ್ಲಿ 2004- 05ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ನೆನಪಿನಂಗಳದ ಬೆಳ್ಳಿ ಹಬ್ಬ, ಗುರು ಶಿಷ್ಯರ ಸಮಾಗಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬದುಕಿನಲ್ಲಿ ಶಿಕ್ಷಕರು ತೋರಿದ ಮಾರ್ಗವನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ಸಾಧನೆ ಮಾಡಿ ಎಂದರು.ಹಳೆಯ ವಿದ್ಯಾರ್ಥಿ ಪಶುವೈದ್ಯಾಧಿಕಾರಿ ಡಾ. ನಾಗರಾಜ ಜಲ್ಲೇರ ಮಾತನಾಡಿ, ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲೂ ಬದುಕಿನ ಮೆಟ್ಟಿಲುಗಳನ್ನು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸುವ ಗುರುಗಳ ಕಾರ್ಯವನ್ನು ಎಂದಿಗೂ ಮರೆಯಲು ಅಸಾಧ್ಯ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಸ್. ಹಾದರಗೇರಿ ಉದ್ಘಾಟಿಸಿದರು. ಹಳೆಯ ವಿದ್ಯಾರ್ಥಿಗಳಾದ ನಿಂಗಪ್ಪ ಭೀಮಕ್ಕಳವರ, ಕರಿಯಪ್ಪ ಗೋರಮಾಳರ, ಹಾಲೇಶ ಮೂಲಂಗಿ, ಪುಷ್ಪಾ ಭಜಂತ್ರಿ, ರೂಪಾ ಪಾಟೀಲ, ಜಯಶೀಲಾ ಕುರಿಯವರ, ನಾಗಮ್ಮ ಕಣವಿ, ದಿಲೀಪ ಕುರುಬರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಬೀರೇಶ್ವರ ವಿದ್ಯಾದಾನ ಸಮಿತಿಯ ಸದಸ್ಯ ನಾಗಪ್ಪ ಯಲಿಗಾರ, ಎಸ್.ವಿ. ಮಾಳೋದೆ, ಎಲ್.ಎಲ್. ಬಡಪ್ಪಳವರ, ಲಕ್ಷ್ಮವ್ವ ತಿರುಕಪ್ಪ ಕುದರಿಹಾಳ, ಶಿಕ್ಷಕ ಎಚ್.ಎಸ್. ಬಿಂಗೇರ, ಶಾಂತವ್ವ ಕೂನಬೇವು, ರತ್ನಮ್ಮ ಬೆನ್ನೂರು, ಮುಖ್ಯ ಶಿಕ್ಷಕಿ ಎ.ಪಿ. ಚವ್ವಾಣ, ತಿಪ್ಪೇಸ್ವಾಮಿ, ಲೀಲಾವತಿ ಮಾಚೇನಹಳ್ಳಿ, ರಮೇಶ ಅರ್ಕಾಚಾರಿ, ಮುಕ್ತೇಶ ಕೂರಗುಂದಮಠ, ಮಮತಾ ಅಂಬಿಗೇರ, ಎಸ್.ವೈ. ಚಲವಾದಿ ಅವರನ್ನು ಸನ್ಮಾನಿಸಲಾಯಿತು. ವಾಹನ ಅಪಘಾತದಲ್ಲಿ ಅನಾರೋಗ್ಯದಿಂದ ಅಂಗವೈಕಲ್ಯ ಹೊಂದಿರುವ ಹಳೆ ವಿದ್ಯಾರ್ಥಿ ನಾಗರಾಜ ಚಲವಾದಿ ಚಿಕಿತ್ಸೆಗಾಗಿ ₹20 ಸಾವಿರ ಹಾಗೂ ಪುತ್ರನ ವಿದ್ಯಾಭ್ಯಾಸಕ್ಕಾಗಿ ₹50 ಸಾವಿರ ಎಫ್‌ಡಿ ಮಾಡಲಾಯಿತು.ಮನೋಜ ಅಂಬಿಗೇರ, ಬೀರೇಶ ಕೂನಬೇವು, ದುರುಗಪ್ಪ ಕುದರಿಹಾಳ, ಹನುಮಂತ, ರವಿ ಎಲಿಗಾರ, ರೇವಣಸಿದ್ದಪ್ಪ ಪೂಜಾರ, ಚಂದ್ರು ಹಾದಿಮನಿ, ನಾಗರತ್ನಾ ಕುದರಿಹಾಳ, ಚಂದ್ರಮ್ಮ ಕಾಟೇರ, ಶ್ವೇತಾ ಮಂಗ್ಲೆ, ಆಶ್ವಿನಿ, ಚೌಡವ್ವ ಕುನಬೇವು ಸೇರಿದಂತೆ 2004- 05ನೇ ಸಾಲಿನ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಉದ್ಯೋಗ ಖಾತ್ರಿ ಕೆಲಸದ ವೇಳೆ ಕುಸಿದು ಬಿದ್ದು ಮಹಿಳೆ ಸಾವು

ಹಾವೇರಿ: ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವೃದ್ಧ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರಟ್ಟೀಹಳ್ಳಿ ತಾಲೂಕಿನ ಸತ್ತಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ರೇಣುಕಮ್ಮ ನಿಂಗಪ್ಪ ಕುರುಬರ(63) ಮೃತ ವೃದ್ಧೆ. ಶಿರಗಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ವೃದ್ಧ ಮಹಿಳೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಟ್ಟೀಹಳ್ಳಿ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Ranibennru, B.G. Tayammanavar

The relationship between a teacher and a disciple is unique: B.G. Tayammanavar

ರಾಣಿಬೆನ್ನೂರು ಸುದ್ದಿ, ಬಿ.ಜಿ. ತಾಯಮ್ಮನವರ, ಗುರುವಂನದನೆ, ಮೆಡ್ಲೇರಿ ಗ್ರಾಮ, Ranibennur News, B.G. Mother''s House, Guruvannadane, Medleri Village

ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲೂ ಬದುಕಿನ ಮೆಟ್ಟಿಲುಗಳನ್ನು ಗಟ್ಟಿಗೊಳಿಸಲು ನಿರಂತರವಾಗಿ ಶ್ರಮಿಸುವ ಗುರುಗಳ ಕಾರ್ಯವನ್ನು ಎಂದಿಗೂ ಮರೆಯಲು ಅಸಾಧ್ಯ.