ಸಮಾಜ ಕಟ್ಟುವ ಹೊಣೆ ಯುವ ಪೀಳಿಗೆ ಮೇಲಿದೆ: ಡಾ.ದತ್ತೇಶ್ ಕುಮಾರ್‌

| Published : Oct 21 2024, 12:31 AM IST

ಸಾರಾಂಶ

ಇಲ್ಲಿನ ನಿಸರ್ಗ ಬಿ.ಎಡ್ ಕಾಲೇಜಿನ ವತಿಯಿಂದ ತಿಮ್ಮರಾಜಿಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂರು ದಿನಗಳ ಸಮುದಾಯ ಜೀವನ ತರಬೇತಿ ಶಿಬಿರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇಲ್ಲಿನ ನಿಸರ್ಗ ಬಿ.ಎಡ್ ಕಾಲೇಜಿನ ವತಿಯಿಂದ ತಿಮ್ಮರಾಜಿಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೂರು ದಿನಗಳ ಸಮುದಾಯ ಜೀವನ ತರಬೇತಿ ಶಿಬಿರ ಆಯೋಜಿಸಲಾಗಿತ್ತು .

ಈ ಶಿಬಿರದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ನೆರವೇರಿಸಿ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಶಿಬಿರಗಳ ಮೂಲಕ ನಿಮ್ಮ ಜೀವನದಲ್ಲಿ ಸಾರ್ಥಕತೆ ರೂಢಿಸಿಕೊಳ್ಳಿ ಎಂದರು. ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್ ದತ್ತೇಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರವನ್ನು ನಿರ್ಮಿಸುವ ಪರಮ ಶ್ರೇಷ್ಠ ಶಕ್ತಿಯು ಶಿಕ್ಷಕ ವೃತ್ತಿಯಾಗಿದ್ದು ಮತ್ತು ಅದು ಉತ್ತಮ ಸಮಾಜವನ್ನು ಕಟ್ಟುವ ಜವಾಬ್ದಾರಿಯನ್ನು ಹೊಂದಿದೆ. ಹಾಗೂ ಸರಳ ಮತ್ತು ನಿರಂತರ ಶ್ರಮದ ಪ್ರತಿಫಲವೇ ಬದುಕಿನ ಸಾಧನೆಯಾಗಿದ್ದು ಅದರಿಂದ ಬಲಿಷ್ಠವಾದ ಸಾಮಾಜಿಕ ನೆಲೆಗಟ್ಟನ್ನು ನಿರ್ಮಿಸಿಕೊಳ್ಳಬಹುದು, ವಿದ್ಯಾರ್ಥಿ ಜವನ ಅಮೂಲ್ಯವಾದುದು, ಅದನ್ನ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಮುಖ್ಯ ಅತಿಥಿಗಳಾಗಿ ವಸತಿ ಶಾಲೆಯ ಪ್ರಾಂಶುಪಾಲ ಗಿರೀಶ್ ಮಾತನಾಡಿ, ಕಷ್ಟವಿಲ್ಲದ ಯಶಸ್ಸಿಲ್ಲ, ಪ್ರಯತ್ನವಿಲ್ಲದೆ ಸಾಧನೆಯಿಲ್ಲ. ಜೀವನದಲ್ಲಿ ಯಾವುದೇ ಕೊರತೆ ಇದ್ದರೂ ಧನಾತ್ಮಕವಾಗಿ ಆಲೋಚಿಸಿ ಇರುವ ಸಂಪನ್ಮೂಲಗಳಲ್ಲಿ ತೃಪ್ತಿಕರವಾದಂತ ಜೀವನವನ್ನು ನಡೆಸುವುದೇ ಸರಳತೆಯ ತತ್ವವೆಂದರು. ಪ್ರಾಂಶುಪಾಲರಾದ ಡಾ.ಎಂ. ಚೆನ್ನಶೆಟ್ಟಿ ವಿದ್ಯಾರ್ಥಿಗಳು ಜೀವನದ ಕೌಶಲ್ಯಗಳ ಬಗ್ಗೆ ಅರಿಯಬೇಕು, ಇಂತಹ ಶಿಬಿರಗಳು ಮೂಲಕ ಸೇವಾ ಮುಖಿಗಳಾಗಬೇಕು ಎಂದರು.

ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಕೃಷ್ಣೇಗೌಡ, ಸಂಯೋಜಕ ಡಾ. ಜಗದೀಶ್, ಶಿಬಿರಾಧಿಕಾರಿಗಳಾದ ಶಿವಮ್ಮ, ಕೆಂಪರಾಜು , ಆರ್. ಜಯಕುಮಾರ್ ಸತೀಶ್, ರಾಜಪ್ಪ ಇದ್ದರು.