ಕ್ರಾಂತಿ ನಡೆಯಲ್ಲ, ಎಲ್ಲ ಹೈಕಮಾಂಡ್‌ ತೀರ್ಮಾನಿಸತ್ತೆ

| N/A | Published : Jun 28 2025, 01:33 AM IST / Updated: Jun 28 2025, 01:32 PM IST

MB Patil on honeytrap

ಸಾರಾಂಶ

 ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯೊಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

  ವಿಜಯಪುರ :  ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯೊಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. 

 ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಕ್ರಾಂತಿ ಇಲ್ಲ. ಪಕ್ಷದಲ್ಲಿ ಸಿಎಂ, ಡಿಸಿಎಂ, ಅಧ್ಯಕ್ಷರು ಇದ್ದಾರೆ. ಕಾಲಕಾಲಕ್ಕೆ ಏನೇನು ಆಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ಯಾವುದೇ ಕ್ರಾಂತಿ ಇಲ್ಲ. 

ರಾಜಣ್ಣ ಹಿರಿಯರು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜನತಾದಳ, ಬಿಜೆಪಿಯಿಂದ ಶಾಸಕರು ಕಾಂಗ್ರೆಸ್‌ಗೆ ಸೇರ್ತಾರೆ ಎನ್ನುವ ಅರ್ಥದಲ್ಲಿ ಹೇಳಿರಬಹುದು ಎಂದರು.ದೇವರಾಣೆ ಡಿ.ಕೆ.ಶಿವಕುಮಾರ ಸಿಎಂ ಆಗೋದು ಪಕ್ಕಾ ಎಂದಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಗೆ ಉತ್ತರಿಸಿ ಅವರು, ಈ ಬಗ್ಗೆ ಹೈ ಕಮಾಂಡ್‌ ಸಮಯ ಸಂದರ್ಭ ನೋಡಿ ನಿರ್ಧಾರ ತೆಗೆದುಕೊಳ್ಳಲಿದೆ. ಅದು ಎಂ.ಬಿ.ಪಾಟೀಲ ಕೈನಲ್ಲೂ ಇಲ್ಲ, ಇಕ್ಬಾಲ್‌ ಹುಸೇನ್‌ ಕೈನಲ್ಲು ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

ವಸತಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿದ ಅವರು, ಗ್ರಾ‌ಪಂ ಸದಸ್ಯರು ಹಣ ಪಡೆದಿದ್ದಲ್ಲಿ ಅಂತಹ ಮನೆಗಳನ್ನು ರದ್ದು ಮಾಡಬೇಕು. ಗ್ರಾಪಂ ಸದಸ್ಯರು ಹಣ ಪಡೆದರೆ ಉಳಿದವರಿಗೆ ಸಂಬಂಧವಿಲ್ಲ, ಅಂತಹ ಮಂಜೂರಾತಿಯನ್ನ ರದ್ದು ಪಡಿಸಬೇಕು ಎಂದು ಹೇಳಿದರು.ವಸತಿ ಇಲಾಖೆಯಲ್ಲಿ ಮನೆಗಳ ಮಾರಾಟ ವಿಚಾರದ ಕುರಿತು ಮಾತನಾಡಿ, ಗ್ರಾಪಂ ಸದಸ್ಯರು ಹಣ ಪಡೆದಿವುದನ್ನು ವಸತಿ ಇಲಾಖೆಗೆ ಲಿಂಕ್ ಮಾಕೋಕೆ ಆಗಲ್ಲ. ಗ್ರಾಪಂ ಹಣ ಪಡೆದು ಮನೆ ಮಂಜೂರು ಮಾಡಿದಲ್ಲಿ, ಸಿಇಒ, ಡಿಸಿ ಕ್ರಮ ಜರುಗಿಸುತ್ತಾರೆ. ಸರ್ಕಾರದಿಂದ ಕ್ಯಾನ್ಸಲ್ ಸಹ ಮಾಡ್ತೇವೆ. ಅಲ್ಲದೇ, ಈ ಬಗ್ಗೆ ಸಚಿವ ಜಮೀರ್ ಈಗಾಗಲೇ ಸ್ಪಷ್ಟ ಪಡೆಸಿದ್ದಾರೆ. ನನಗೆ ಇಂಥದ್ದೆಲ್ಲ ಅವಶ್ಯಕತೆ ಇಲ್ಲ ಎಂದಿದ್ದಾರೆ. 

ಮನೆಗಳಲ್ಲಿ ಹಣ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿಲ್ಲ ಎಂದಿದ್ದಾರೆ. ಮನೆ ಮಂಜೂರಿಗೆ ಹಣ ಪಡೆದರೆ ಅದು ಪಾಪದ ಹಣ ಎಂದುದನ್ನು ಅವರು ಹೇಳಿದ್ದಾರೆ ಎಂದರು.

 ನಮ್ಮಲ್ಲಿ ಸದ್ಯಕ್ಕಂತೂ ಸಿಎಂ ಖುರ್ಚಿ ಆಗಲಿ ಖಾಲಿ ಇಲ್ಲ. ಸಿಎಂ ಬದಲಾವಣೆ, ಸಂಪುಟ ರಚನೆ, ಅಧ್ಯಕ್ಷರ ಬದಲಾವಣೆ ಅವುಗಳ ಬಗ್ಗೆ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ಇಕ್ಬಾಲ್ ಕೈನಲ್ಲೂ ಇಲ್ಲ, ಎಂ.ಬಿ.ಪಾಟೀಲ ಕೈನಲ್ಲೂ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಇಲ್ಲ, ನನ್ನನ್ನು ಅಧ್ಯಕ್ಷನಾಗುವಂತೆ ಯಾರು ಈವರೆಗೆ ಕೇಳಿಯೂ ಇಲ್ಲ. ಮುಂದೆ ಅವರು ಕೊಟ್ಟಾಗ ನೋಡೋಣ.ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

Read more Articles on