ವಿಕಸಿತ ಭಾರತದಲ್ಲಿ ಸಹಕಾರಿಗಳ ಪಾತ್ರ ಡೊದ್ದದು

| Published : Nov 20 2024, 12:32 AM IST

ವಿಕಸಿತ ಭಾರತದಲ್ಲಿ ಸಹಕಾರಿಗಳ ಪಾತ್ರ ಡೊದ್ದದು
Share this Article
  • FB
  • TW
  • Linkdin
  • Email

ಸಾರಾಂಶ

ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವವಾಗಿದೆ. ಈ ಸಹಕಾರಿ ಧ್ಯೇಯವನ್ನು ಸಾಕಾರಗೊಳಿಸಲು ಕಾಯಾ, ವಾಚಾ, ಮನಸಾದಿಂದ ಸಹಕಾರಿಗಳು ಪ್ರಯತ್ನಿಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮಹತ್ವವಾಗಿದೆ. ಈ ಸಹಕಾರಿ ಧ್ಯೇಯವನ್ನು ಸಾಕಾರಗೊಳಿಸಲು ಕಾಯಾ, ವಾಚಾ, ಮನಸಾದಿಂದ ಸಹಕಾರಿಗಳು ಪ್ರಯತ್ನಿಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಕೃಷಿ ಸಹಕಾರ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಾಭಿವೃದ್ಧಿಗೆ ಅತ್ಯಂತ ಅಗತ್ಯವೆನಿಸಿರುವ ಸಹಕಾರ ಶಿಕ್ಷಣ, ತರಬೇತಿ, ಪ್ರಚಾರ ವ್ಯವಸ್ಥೆಯನ್ನು ಸಹಕಾರ ಮಹಾಮಂಡಳ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರವನ್ನು ಬಲಯುತವಾಗಿ ಬೆಳೆಸಲು ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿ, ಸಹಕಾರಿಗಳಿಗೆ ಬಹಳಷ್ಟು ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಹೇಳಿದರು.ಸಹಕಾರಿ ರಂಗದಲ್ಲಿ ಮಹಿಳೆಯರು, ಯುವಕರು ಸೇರ್ಪಡೆಗೊಂಡರೆ ಮಾತ್ರ ಸಹಕಾರಿ ಕ್ಷೇತ್ರ ಇನ್ನಷ್ಟು ವೇಗ ಪಡೆದುಕೊಂಡು ನಿಗದಿತ ಗುರಿ ತಲುಪಲಿದೆ ಎಂದ ಅವರು, ಹಲವಾರು ಯೋಜನೆಗಳು ಸಹಕಾರಿ ಕ್ಷೇತ್ರದಲ್ಲಿದ್ದು, ಸಮರ್ಪಕವಾಗಿ ಬಳಸಿಕೊಂಡು ಮುನ್ನೆಡೆದರೆ ಬದುಕಿನಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಸಹಕಾರ ಚಳುವಳಿಯನ್ನು ಕಾನೂನುನಾತ್ಮಕವಾಗಿ ಜಾರಿಗೆ ತಂದವರು ಶಿದ್ದನಗೌಡ ಪಾಟೀಲರು, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಸಹಕಾರ ಪಿತಾಮಹ ಎನಿಸಿಕೊಂಡಿದ್ದಾರೆ. ಅವರು ಸ್ಥಾಪಿಸಿದ ಸಹಕಾರ ಸಂಘವು ಇಡೀ ದೇಶದ ಸಹಕಾರ ಚಳುವಳಿಯ ದಿಕ್ಕು ಬದಲಿಸಿದೆ ಎಂದು ಹೇಳಿದರು.ಸಹಕಾರಿ ಕ್ಷೇತ್ರವನ್ನು ತಳಮಟ್ಟದಿಂದ ಸರ್ವತೋಮುಖ ಬೆಳವಣಿಗೆಯತ್ತ ಕೊಂಡೊಯ್ಯಲು ಜಿಲ್ಲೆಯಲ್ಲಿ ಎಸ್.ಎಲ್. ಧರ್ಮೇಗೌಡರ ಪಾತ್ರ ಬಹಳಷ್ಟಿದೆ. ಕೃಷಿ ಬದುಕನ್ನು ನಂಬಿರುವ ರೈತಾಪಿ ವರ್ಗಕ್ಕೆ ಸಹಕಾರಿಯಾಗುವ ಉದ್ದೇಶದಿಂದ ಸಾಲ ಸೌಲಭ್ಯವನ್ನು ಸಹಕಾರಿ ಕ್ಷೇತ್ರ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು.ಸಹಕಾರಿ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಉಪಾಧ್ಯಕ್ಷ ಉಳವಪ್ಪ ತಿಪ್ಪಣ್ಣ ದಾಸನೂರು ಅವರು, ಸಹಕಾರಿ ಚಳುವಳಿ ಮತ್ತು ವ್ಯವಸ್ಥೆ ಕುರಿತು ಜನಜಾಗೃತಿ ಉಂಟು ಮಾಡುವುದೇ ಸಪ್ತಾಹದ ಉದ್ದೇಶ ಎಂದು ತಿಳಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಸಹಕಾರಿಗಳಿಗೆ ಅನುಕೂಲವಾಗುವ ಅನೇಕ ಸವಲತ್ತನ್ನು ಒದಗಿಸಿ ಹೆಮ್ಮರವಾಗಿ ಬೆಳೆಸಲು ಸಹಕರಿಸುತ್ತಿದೆ. ವಿಶೇಷವಾಗಿ ರಾಜ್ಯ ಸರ್ಕಾರ ಸಹಕಾರಿಗಳಿಗೆ ಶೇ.3ರ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಒದಗಿಸಿ ಆರ್ಥಿಕ ಅಭಿವೃದ್ಧಿಗೆ ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಸಹಕಾರ ಸಂಘಗಳ ಅಪರ ನಿಬಂಧಕ ಎಚ್. ಬಾಲಶೇಖರ್ ಮಾತನಾಡಿ, ಸಹಕಾರಿಗಳು ಆರ್ಥಿಕ ಪ್ರಗತಿ ಹೊಂದುವ ನಿಟ್ಟಿನಲ್ಲಿ ಶೈಕ್ಷಣಿಕ ಸಾಲಿನಲ್ಲಿ ₹35 ಲಕ್ಷ ರೈತರಿಗೆ ಸುಮಾರು 25 ಸಾವಿರ ಕೋಟಿ ಸಾಲವನ್ನು ವಿತರಿಸಿದೆ. ಅಲ್ಲದೇ 41 ಲಕ್ಷ ಮಂದಿಗೆ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳನ್ನು ನೊಂದಾಯಿಸಿ ಅನೇಕರು ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಬಿ.ಸಿ. ಗೀತಾ, ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಎಚ್.ಬಿ. ಶಿವಣ್ಣ, ಎಸ್.ಎನ್. ರಾಮಸ್ವಾಮಿ, ಎಸ್.ಜಿ. ರಾಮಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ರಂಗನಾಥ್, ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಉಪಸ್ಥಿತರಿದ್ದರು.