ಏಕಲ್, ಅಂಚಲ್ ಆಚಾರ್ಯರ ಪಾತ್ರ ಮಹತ್ವದ್ದು

| Published : May 28 2024, 01:01 AM IST

ಸಾರಾಂಶ

ಕಡೂರುಗ್ರಾಮೀಣ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಅವರ ಬುದ್ದಿಮತ್ತೆಯನ್ನು ಹೆಚ್ಚಿಸುವ ಜೊತೆ ರೈತರ ಜ್ಞಾನ ಹೆಚ್ಚಿಸುವಲ್ಲಿ ಏಕಲ್ ಮತ್ತು ಅಂಚಲ್ ಆಚಾರ್ಯರ ಪಾತ್ರ ಮಹತ್ವದ್ದು ಎಂದು ಏಕಲ್ ಅಭಿಯಾನದ ಕಡೂರು ತಾಲೂಕು ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಗ್ರಾಮೀಣ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಅವರ ಬುದ್ದಿಮತ್ತೆಯನ್ನು ಹೆಚ್ಚಿಸುವ ಜೊತೆ ರೈತರ ಜ್ಞಾನ ಹೆಚ್ಚಿಸುವಲ್ಲಿ ಏಕಲ್ ಮತ್ತು ಅಂಚಲ್ ಆಚಾರ್ಯರ ಪಾತ್ರ ಮಹತ್ವದ್ದು ಎಂದು ಏಕಲ್ ಅಭಿಯಾನದ ಕಡೂರು ತಾಲೂಕು ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಕಡೂರಿನಲ್ಲಿ ಸೋಮವಾರ ಏಕಲ್ ಅಂಚಲ್ ಆಚಾರ್ಯರಿಗೆ ಪಠ್ಯದ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಹಣ ನೀಡಿ ಮನೆ ಪಾಠಕ್ಕೆ ಹೋಗಲು ಆರ್ಥಿಕ ಚೈತನ್ಯ ಕಡಿಮೆ ಇರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಶಾಲಾ ಪಾಠದ ಮನನ ಮಾಡಿಸುವ ಜೊತೆ ಮನೆಯಲ್ಲೆ ಪಾಠ ಹೇಳಿ ಕೊಡುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಮೂಲಕ ತಲುಪಬೇಕಾಗಿರುವ ಗುರಿ ಮುಟ್ಟುವ ಸಾಧನೆ ಮಾಡಲು ಪ್ರೋತ್ಸಾಹ ನೀಡುವುದು, ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವುದು ಪ್ರಮುಖವಾಗಿದೆ ಎಂದರು.

ಅಲ್ಲದೆ ಹೆಣ್ಣು ಮಕ್ಕಳಿಗೆ ಆರೋಗ್ಯ ಹಾಗು ಶಿಕ್ಷಣ ನೀಡುವುದು ಏಕಲ್ ಅಭಿಯಾನದ ಉದ್ದೇಶ. ಈ ಕಾರ್ಯಕ್ಕಾಗಿ ತರಬೇತಿ ಪಡೆದ ಸ್ವಯಂಸೇವಕರನ್ನು ಆಚಾರ್ಯರು ಎಂದು ನೇಮಿಸಲಾಗಿದೆ. ಸ್ವಯಂ ಪ್ರೇರಣೆಯಿಂದ ನೂರಕ್ಕೂ ಹೆಚ್ಚು ಆಚಾರ್ಯರು ತಾಲೂಕಿನಾದ್ಯಂತ ಜ್ಞಾನ ಪ್ರಸಾರದಲ್ಲಿ ತೊಡಗಿದ್ದಾರೆ. ಅಚಾರ್ಯರ ನಿಸ್ವಾರ್ಥ ಕಾರ್ಯಕ್ಕೆ ಪೂರಕವಾಗಿ ಪರಿಕರಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಏಕಲ್ ಅಭಿಯಾನ ಪ್ರಮುಖ್ ಹಾಗೂ ಪ್ರಧಾನ ಆಚಾರ್ಯ ತಿಮ್ಮೇಗೌಡ, ಅಂಚಲ್ ಪ್ರಮುಖ್ ತರುಣ್ ಮತ್ತು ಆಚಾರ್ಯರು ಇದ್ದರು.

27ಕೆಕೆಡಿಯು1. ಕಡೂರಿನಲ್ಲಿ ಏಕಲ್ ಅಭಿಯಾನದ ತಾಲೂಕು ಘಟಕದ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಶಾಲಾ ಪಠ್ಯದ ಪರಿಕರಗಳನ್ನು ವಿತರಿಸಿದರು.