ಮಾನವ ಸಂಪತ್ತು ಸದ್ಭಳಕೆಯಲ್ಲಿ ಶಿಕ್ಷಕರ ಪಾತ್ರ ಹಿರಿದು

| Published : Jul 30 2024, 01:36 AM IST

ಮಾನವ ಸಂಪತ್ತು ಸದ್ಭಳಕೆಯಲ್ಲಿ ಶಿಕ್ಷಕರ ಪಾತ್ರ ಹಿರಿದು
Share this Article
  • FB
  • TW
  • Linkdin
  • Email

ಸಾರಾಂಶ

The role of teachers in the good management of human resources

-ಡಯಟ್ ನಲ್ಲಿ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರದಲ್ಲಿ ಡಿಡಿಪಿಐ ಎಂ.ಆರ್.ಮಂಜುನಾಥ್

----

ಕನ್ನಡಪ್ರಭ ವಾರ್ತೆ, ಚಿತರ್ದುರ್ಗ

ಮಾನವ ಸಂಪತ್ತು ಸದ್ಭಳಕೆ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಹೇಳಿದರು.

ನಗರದ ಡಯಟ್‍ನಲ್ಲಿ ಎಸ್ಎಸ್ ಕೆ (ಸಮಗ್ರ ಶಿಕ್ಷಣ ಕರ್ನಾಟಕ) ಮತ್ತು ಡಿಎಸ್ಇಆರ್ ಟಿಯಿಂದ 2022-23ನೇ ಸಾಲಿಗೆ ನೂತನವಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ(ಜಿಪಿಟಿ)ರಿಗೆ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಜವಾಬ್ದಾರಿ ಮುಖ್ಯ ಎಂದರು.

ಮಾನವ ಸಂಪತ್ತು ದೇಶದನಿಜವಾದ ಸಂಪತ್ತು. ಮಾನವ ಸಂಪತ್ತು ದೇಶದ ಅಭಿವೃದ್ಧಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗಲು ಶಿಕ್ಷಕರು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುತ್ತಾರೆ. ಶಿಕ್ಷಕರಿಗೆ ಶಿಸ್ತು, ಸಮಯ ಪಾಲನೆ, ಚಾರಿತ್ರ್ಯ ಮುಖ್ಯ. ಪ್ರತಿವ್ಯಕ್ತಿಗೆ ಶಿಕ್ಷಣ ದಾರಿದೀಪವಾಗಿದೆ. ನಿಷ್ಠೆಯಿಂದ ಕೆಲಸ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತರಬೇತಿಯಲ್ಲಿ ಕಲಿತು, ಚರ್ಚಿಸಿದ ಅಂಶಗಳನ್ನು ತರಗತಿ ಕೋಣೆಯಲ್ಲಿ ಅನುಷ್ಠಾನ ಮಾಡಬೇಕು. ಉತ್ತಮ ಕೆಲಸದಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆ. ಉತ್ತಮ ಸಮಾಜ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ನೋಡಲ್ ಅಧಿಕಾರಿ ಎಸ್.ಸಿ ಪ್ರಸಾದ್ ಮಾತನಾಡಿ, ಶಿಕ್ಷಕರಿಗೆ ವೃತ್ತಿಯಲ್ಲಿ ಪ್ರಾವೀಣ್ಯತೆ ಪಡೆಯಲು ತರಬೇತಿಗಳು ಪೂರಕವಾಗಿದ್ದು, ಹೊಸದಾಗಿ ನೇಮಕವಾಗಿರುವ ಜಿಲ್ಲೆಯ 263 ಶಿಕ್ಷಕರಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ಶಿಕ್ಷಕರ ಶಿಕ್ಷಣ, ಆರಂಭಿಕ ಬಾಲ್ಯ ಮತ್ತು ಶಿಕ್ಷಣ, ರಚನಾವಾದಿ ತರಗತಿ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ವಿಷಯ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಡಿಎಸ್ಇಆರ್ ಟಿ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ್, ಸಿಟಿಇ ಪ್ರವಾಚಕ ಹನುಮಂತರಾಯ, ಡಿವೈಪಿಸಿ ವೆಂಕಟೇಶಪ್ಪ, ತರಬೇತಿ ಶಿಬಿರದ ನಿರ್ದೇಶಕ ಯು. ಸಿದ್ದೇಶಿ, ಸಹಾಯಕ ನಿರ್ದೇಶಕ ಎಸ್.ಬಸವರಾಜು, ಹಿರಿಯ ಉಪನ್ಯಾಸಕ ಎಸ್.ಜ್ಞಾನೇಶ್ವರ, ಉಪನ್ಯಾಸಕ ಕೆ.ಜಿ.ಪ್ರಶಾಂತ್, ಶಿವಲೀಲಾ, ಸಂಪನ್ಮೂಲ ವ್ಯಕ್ತಿಗಳಾದ ತಿಪ್ಪೇರುದ್ರಪ್ಪ, ಶಿವಣ್ಣ, ಖಲಂದರ್, ತಿಮ್ಮರಾಜು ತಾಂತ್ರಿಕ ಸಹಾಯಕ ಲೋಕೇಶ್, ಲಿಂಗರಾಜು ಮತ್ತು ಶಿಕ್ಷಕರು ಇದ್ದರು.

---------------

ಪೋಟೋ ಕ್ಯಾಪ್ಸನ್

ಚಿತ್ರದುರ್ಗ ಜಿಲ್ಲೆಯಲ್ಲಿ ನೂತನವಾಗಿ ನೇಮಕವಾಗಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಡಯಟ್‍ನಲ್ಲಿ ಆಯೋಜಿಸಿದ್ದ ಬುನಾದಿ ತರಬೇತಿ ಕಾರ್ಯಾಗಾರವನ್ನು ಡಿಡಿಪಿಐ ಮಂಜುನಾಥ್ ಉದ್ಘಾಟಿಸಿದರು.

---------

ಪೋಟೋ: 29ಸಿಟಿಡಿ1