ಸಾರಾಂಶ
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಸಹೋದರತೆ, ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಗುಣಗಳನ್ನು ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಭಾರತ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ, ಸಹೋದರತೆ, ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಗುಣಗಳನ್ನು ಬೆಳೆಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಭಾರತ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.
ಶನಿವಾರ ನಡೆದ ಒಂದು ದಿನದ ಸೇವಾದಳದ ಶಿಕ್ಷಕರ ಮಿಲಾಬ್ ಶಿಬಿರದಲ್ಲಿ ಮಾತನಾಡಿದ ಅವರು, ಭಾರತ ಸೇವಾದಳ ಶಿಕ್ಷಕರಿಗೆ ರಾಷ್ಟ್ರಧ್ವಜ ಕಟ್ಟುವುದು, ರಾಷ್ಟ್ರಗೀತೆ ಹಾಡುವುದು, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ಬಗ್ಗೆ ರಾಷ್ಟ್ರ ಪ್ರೇಮ ಮುಂತಾದ ವಿಷಯಗಳ ಬಗ್ಗೆ ಶಿಕ್ಷಕರಿಗೆ ಈ ಒಂದು ದಿನದ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಿಕ್ಷಕರು ತಮ್ಮ ಶಾಲೆಗಳಲ್ಲಿ ಇದನ್ನು ಅಳವಡಿಸಿಕೊಂಡು ಸೇವಾದಳದ ಆಶಯದಂತೆ ಮಕ್ಕಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡಬೇಕೆಂದು ಕರೆ ನೀಡಿದರು.ತಾಲೂಕಿನ ಪ್ರತಿಯೊಂದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇವಾದಳದ ಘಟಕವನ್ನು ಪ್ರಾರಂಭಿಸಲು ಪ್ರಯತ್ನಿಸುವುದಾಗಿ ಹೇಳಿದ ಅವರು, ಎಲ್ಲಾ ವಿದ್ಯಾರ್ಥಿಗಳಿಗೂ ಸೇವಾದಳದ ಸಮವಸ್ತ್ರವನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗುದು ಎಂದು ತಿಳಿಸಿದರು.
ತಾಲೂಕಿನ ಸುಮಾರು 70 ಶಿಕ್ಷಕರಿಗೆ ತಾಲೂಕು ಸಂಘಟಿಕರಾದ ಸುರೇಶ್ ಹಾಗೂ ಜಿಲ್ಲಾ ಸಂಘಟಕರಾದ ರಾಜು ತರಬೇತಿ ನೀಡಿದರು. ಜಿಲ್ಲಾ ನಿರ್ದೇಶಕರಾದ ಮುನಿರಾಜು, ಗಂಗಾಧರ್, ತಾಲೂಕು ಪ್ರಭಾರಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಕೇಶವಮೂರ್ತಿ, ತಾಲೂಕು ನಿರ್ದೇಶಕರಾದ ವಿ.ಸಿ ಜ್ಯೋತಿ ಕುಮಾರ್, ಮಹೇಶ್, ಆನಂದ್, ಅಂಬರೀಶ್, ಮಮತಾ, ಸುಮಂಗಲ, ವೆಂಕಟೇಶ್, ಸಹನಾ ಮತ್ತಿತರರು ಹಾಜರಿದ್ದರು.27ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಭಾರತ ಸೇವಾದಳದಿಂದ ನಡೆದ ಒಂದು ದಿನದ ಮಿಲಾದ್ ಶಿಬಿರವನ್ನು ಜಿಲ್ಲಾಧ್ಯಕ್ಷ ಜಿ.ಲಕ್ಷ್ಮೀಪತಿ ಉದ್ಘಾಟಿಸಿದರು.