ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಿಸಿಯೂಟ ಯೋಜನೆಯ ಯಶಸ್ವಿಗೆ ಅಧಿಕಾರಿಗಳ ಪಾತ್ರಕ್ಕಿಂತ ಶಿಕ್ಷಕರ ಪಾತ್ರ ದೊಡ್ಡದು ಎಂದು ಹೊನ್ನಾಳಿಯಿಂದ ವರ್ಗಾವಣೆಗೊಂಡ ಅಕ್ಷರ ದಾಸೋಹ ಸಹಾಯಕ ನಿದೇರ್ಶಕ ರುದ್ರಪ್ಪ ಹೇಳಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಿವೃತ್ತ ಶಿಕ್ಷಕರು ಹಾಗೂ ವರ್ಗಾವಣೆಗೊಂಡ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಅವಳಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಹಾರ ಪುರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವಲ್ಲಿ ಶಿಕ್ಷಕರ ಪಾತ್ರದೊಡ್ಡದು. ಬೇರೆ-ಬೇರೆ ತಾಲೂಕುಗಳ ಬಿಸಿಯೂಟ ಯೋಜನೆಯಲ್ಲಿ ವ್ಯತ್ಯಾಸ ಆಗಿರುವುದನ್ನು ಪತ್ರಿಕೆ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಆದರೆ ಅವಳಿ ತಾಲೂಕಿನಲ್ಲಿ ಕಳೆದ ಆರು ವರ್ಷದಿಂದ ಯಾವುದೇ ತೊಂದರೆಯಾಗದಂತೆ ಬಿಸಿಯೂಟ ಯೋಜನೆ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತರಾದ ಶಿಕ್ಷಕರಾದ ಬಸವರಾಜಪ್ಪ, ಪರಶುರಾಮ, ಹಾಲೇಶಪ್ಪ, ಸುನಂದಮ್ಮ, ಶಿಕ್ಷಣ ಇಲಾಖೆ ಅಧಿಕ್ಷಕ ವಿನಾಯಕ ರಾವ್ ಮತ್ತು ವರ್ಗಾವಣೆಗೊಂಡ ಶಿಕ್ಷಣ ಇಲಾಖೆಯ ಇಸಿಓ ಬಸವರಾಜ ಅವರಿಗೆ ಸಂಘದ ವತಿಯಿಂದ ವಿಶೇಷವಾಗಿ ಅಭಿನಂದಿಸಲಾಯಿತು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಜಿ.ಗೀತಾ ಮಾತನಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದವರಿಗೆ ಸಂಘದ ವತಿಯಿಂದ ಪ್ರತಿ ತಿಂಗಳ ಕೊನೆ ದಿನದಂದು ವಿಶೇಷವಾಗಿ ಸನ್ಮಾಸಲಾಗುವುದು ಎಂದರು.ಈ ವೇಳೆ ಸಂಘದ ಗೌರವಾಧ್ಯಕ್ಷ ರಿಯಾಜ್ ಆಹ್ಮದ್, ಖಜಾಂಚಿ ಬಿ.ಎಸ್.ರುದ್ರೇಶ್, ಕಾರ್ಯದರ್ಶಿ ಪ್ರಕಾಶನಾಯ್ಕ, ಸಹಕಾರ್ಯದರ್ಶಿ ಚಂದ್ರಶೇಖರಪ್ಪ, ಉಪಾಧ್ಯಕ್ಷೆ ಕೆ.ಬಿ.ನೀಲಮ್ಮ, ಸಂಘದ ಪದಾಧಿಕಾರಿಗಳಾದ ಬಿ.ಎನ್.ಮಂಜುನಾಥ್, ಜಬ್ಬರ್‌ಖಾನ್, ರಾಜಕುಮಾರ, ಕೆ.ಜಿ. ಸುರೇಶ್, ಪ್ರೌಢ ಶಾಲಾ ಮುಖ್ಯಶಿಕ್ಷಕರ ಉಮಾಶಂಕರ್ ಹಾಗೂ ಇತರರಿದ್ದರು.