ಸಾರಾಂಶ
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದಲ್ಲಿ ಗ್ರಾಪಂ ಕಚೇರಿ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚನ್ನಪಟ್ಟಣ ತಾಲೂಕು ಬೇವೂರು ಮಠಾಧ್ಯಕ್ಷ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮೃತ್ಯುಂಜಯ ಶ್ರೀಗಳು, ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಮುಂದಾಗಿ ಸಾಮಾಜಿಕ ಕಾರ್ಯದಲ್ಲಿ ವಿಶೇಷ ಕಾಳಜಿ ವಹಿಸಿರುವುದು ಸಂತಸ ತಂದಿದೆ. ನೂತನ ಕಟ್ಟಡ ಸುಸಜ್ಜಿತವಾಗಿ ಗುಣಮಟ್ಟದಲ್ಲಿ ನಿರ್ಮಾಣ ಮಾಡಿ ಮತ್ತಷ್ಟು ಅನುದಾನ ಸರ್ಕಾರದ ಹಲವಾರು ಯೋಜನೆಗಳು ಸಾರ್ವಜನಿಕರಿಗೆ ಸಿಗುವಂತೆ ಮಾಡಿ ಎಂದರು.ಗ್ರಾಪಂಗಳು ಗ್ರಾಮಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿಯತ್ತ ದಾಪುಗಾಲು ಇಡಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಇಂದು ನೇರವಾಗಿ ಗ್ರಾಮ ಪಂಚಾಯಿತಿಗಳ ಮೂಲಕ ಸೌಲಭ್ಯ ತಲುಪಿಸುತ್ತಿವೆ. ಇದು ಜನರಿಗೆ ವರದಾನವಾಗಿದೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಶಕ್ತಿ ಸೌಧಗಳಾಗಿವೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುನೀತಾ ನಾಗರಾಜಸಿಂಗ್‌ಬಾಬು ಮಾತನಾಡಿ, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಜಿಲ್ಲಾಧಿಕಾರಿಗಳು, ಜಿಪಂ, ತಾಪಂ, ಗ್ರಾಪಂ, ತಹಸೀಲ್ದಾರರು ಮತ್ತು ಮತ್ತಿತರ ಇಲಾಖಾ ಅಧಿಕಾರಿಗಳು ಗ್ರಾಪಂ ಸದಸ್ಯರ ಉತ್ತಮ ಸಹಕಾರದಿಂದ ಕಟ್ಟಡ ನಿರ್ಮಾಣಕ್ಕೆ ಉತ್ತಮ ಸ್ಥಳ ದೊರೆತಿದ್ದರಿಂದ ಗ್ರಾಪಂ ನೂತನ ಕಟ್ಟಡದ ಕನಸು ನನಸಾಗುವತ್ತ ಹೆಜ್ಜೆ ಇಡಲಾಗಿದೆ ಎಂದರು.ಸರ್ವ ಸದಸ್ಯರು ಹಿರಿಯರು, ಸ್ವಾಮೀಜಿಗಳು, ಮುಖಂಡರ ನೇತೃತ್ವದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಶೀಘ್ರದಲ್ಲೇ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಸಹಕಾರ ಮತ್ತು ಇಲಾಖೆಗಳ ಸಹಯೋಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಆಗಲಿದೆ. ವಿವಿಧ ಸೌಲಭ್ಯ ಗ್ರಾಪಂ ಕಟ್ಟಡದಲ್ಲಿ ಇರುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ರಾಜು, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಎಚ್. ರಾಜು, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ತಾಪಂ ಇಒ ಪೂರ್ಣಿಮಾ , ಜಿಪಂ ಇಂಜಿನಿಯರ್ ಸತ್ಯಪ್ರಕಾಶ್, ರಾಜಸ್ವ ನಿರೀಕ್ಷಕ ರಾಜಶೇಖರ್ ಮುಂತಾದವರು ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಗ್ರಾಪಂ ಪಿಡಿಒ ಬಿ.ಕೆ. ಗೋಮತಿ, ಉಪಾಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ಮಹದೇಶಸ್ವಾಮಿ, ಭಾಸ್ಕರ್, ಲೀಲಾವತಿ. ಶ್ರೀನಿವಾಸ್, ರಂಗಸ್ವಾಮಿ, ಮಲ್ಲೇಶ್, ಪುಟ್ಟಸ್ವಾಮಿ, ಮಹದೇವಮ್ಮ, ಕೆ.ಪಿ. ವಿಶಾಲ ಸಿದ್ದೇಗೌಡ, ಜಯಲಕ್ಷ್ಮೀ, ಜ್ಯೋತಿ ಬಾಲಕೃಷ್ಣ, ವೆಂಕಟಪ್ಪ, ಸುನೀತಾ ವೆಂಕಟೇಶ್, ಲಕ್ಷ್ಮಮ್ಮ ಗೋವಿಂದರಾಜು, ಯಡೂರಯ್ಯ, ಶೋಭಾ ಗಿರಿಯಪ್ಪ, ಸಿದ್ದರಾಜು ಕಾರ್ಯದರ್ಶಿ ಪದ್ಮಯ್ಯ, ಎಸ್ಡಿಎ ಸುಜಾತ, ಬಿಲ್ ಕಲೆಕ್ಟರ್ ರೇವುಮಲ್ಲೇಶ್, ಗ್ರಂಥಪಾಲಕ ನಾಗರಾಜ್ ಸಿಂಗ್ ಬಾಬು ಹಾಜರಿದ್ದರು.
9ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದಲ್ಲಿ ಗ್ರಾಪಂ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.