ಕೋಟ್ಯಂತರ ಜನರ ಬಾಳಿಗೆ ಬೆಳಕಾದವರು ಶ್ರೀಗಳು

| Published : Sep 21 2025, 02:00 AM IST

ಸಾರಾಂಶ

ಮಠ ಕಟ್ಟುವ ಮುನ್ನ ಶಾಲೆ ಕಟ್ಟಿದವರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಎಂದು ಶಿವಗಂಗೆಯ ಶ್ರೀ ಮೆಲಣಗವಿ ವೀರಸಿಂಹಾಸನ ಮಠದ ಡಾ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವುದು ವಿದ್ಯೆ ಮಾತ್ರ ಎಂದರು. ತಮ್ಮ ಕಷ್ಟ ಮತ್ತೊಬ್ಬರಿಗೆ ಬರಬಾರದು ಎಂದು ಚಿಂತಿಸುವವನೇ ಮಹಾತ್ಮ. ಇಂತಹ ಮನಸ್ಥಿತಿ ಹೊಂದಿದವರ ಸಂಖ್ಯೆ ಹೆಚ್ಚಿದಾಗ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಚಿನ್ನವನ್ನೆ ಮಾರಾಟ ಮಾಡಿದ ಮಹತ್ಮಾ ರಾಜೇಂದ್ರ ಶ್ರೀಗಳು ಇದರಿಂದಾಗಿಯೆ ಇವರನ್ನು ಜಗದ್ಗುರು ಎಂದು ಕರೆಯಲಾಗುತ್ತಿದೆ. ಶ್ರೀಗಳು ವ್ಯಕ್ತಿ ಜ್ಞಾನಿ ಸುಜ್ಞಾನಿಯಾಗ ಬೇಕು ಎಂಬ ಮಹತ್ತಾರ ಆಸೆ ಹೊಂದಿದ್ದ ಫಲವಾಗಿ ಮಠದಲ್ಲಿ ವ್ಯಸಾಂಗ ಮಾಡಿದ ಹಲವರು ದೇಶದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಠ ಕಟ್ಟುವ ಮುನ್ನ ಶಾಲೆ ಕಟ್ಟಿದವರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಎಂದು ಶಿವಗಂಗೆಯ ಶ್ರೀ ಮೆಲಣಗವಿ ವೀರಸಿಂಹಾಸನ ಮಠದ ಡಾ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಶನಿವಾರ ಪಟ್ಟಣದ ಗರುವೇಗೌಡ ಕಲ್ಯಾಣ ಮಂಟಪದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು, ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶತಮಾನದ ಹಿಂದೆಯೆ ಶಿಕ್ಷಣದ ಮಹತ್ವದ ಬಗ್ಗೆ ಅರಿತಿದ್ದ ಶ್ರೀಗಳು ಜಾತಿಮತ ಪಂಥದ ತಾರತಮ್ಯವಿಲ್ಲದೆ ವಿದ್ಯೆ ನೀಡುವ ಮೂಲಕ ಕೋಟ್ಯಂತರ ಜನರ ಬಾಳಿಗೆ ಬೆಳಕಾದವರು ಶ್ರೀಗಳು. ಅನಕ್ಷರತೆಯನ್ನು ಮೆಟ್ಟಿನಿಲ್ಲುವ ನಿಟ್ಟಿನಲ್ಲಿ ತಮ್ಮ ಬಧುಕನ್ನೆ ಸೆವೆಸಿದ ಶ್ರೀಗಳು ಅನವಶ್ಯಕವಾಗಿ ಎಂದು ಮಾತನಾಡಿದವರಲ್ಲ.

ಮಾತನಾಡುವ ಅನಿವಾರ್ಯತೆ ಸೃಷ್ಟಿಯಾದರೆ ಮಾತ್ರ ಮಾತನಾಡಬೇಕು. ಇದರಿಂದ ಗೌರವ ಹೆಚ್ಚಲಿದೆ. ಮೌನಕ್ಕೆ ಇರುವ ಬೆಲೆ ಮತ್ತೊಂದಕ್ಕೆ ಇಲ್ಲ. ಮಾಡುವ ಕೆಲಸದ ಬಗ್ಗೆ ಏಕಾಗ್ರತೆ ಹೊಂದಿದ್ದವರು ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ.ಮನಸ್ಸು ನಿಗ್ರಹಿಸುವ ಶಕ್ತಿ ಬೆಳೆಸಿಕೊಳ್ಳುವುದು ಅಗತ್ಯ ಎಂದರು. ನಮಗೆ ಗೌರವ ದಕ್ಕುವುದು ನಾವು ಮಾಡುವ ಸಾಧನೆಯಿಂದ ಹೊರತು ಹಾಕುವ ಬಟ್ಟೆಯಿಂದಲ್ಲ. ಅನ್ಯರಿಗೆ ಸಹಾಯ ಮಾಡುವುದರಿಂದ ಮಾತ್ರ ಶತಮಾನಗಳ ಕಾಲ ತಮ್ಮಹೆಸರು ಚಿರಸ್ಥಾಯಿಯಾಗಲಿದೆ. ಮೂರುವರ್ಷದ ವಿದ್ಯೆ ನೂರು ವರ್ಷದವರಗೆ ಬಾಳಿಕೆ ಬರಲಿದೆ ಆದ್ದರಿಂದ ಶಿಕ್ಷಣದ ಸಮಯದಲ್ಲಿ ಏಕಾಗ್ರತೆಯಿಂದ ವಿದ್ಯೆ ಕಲಿಯ ಬೇಕು ವಿದ್ಯಾವಂತರನ್ನು ಹಣವೆ ಹುಡುಕಿಕೊಂಡು ಬರಲಿದೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವುದು ವಿದ್ಯೆ ಮಾತ್ರ ಎಂದರು. ತಮ್ಮ ಕಷ್ಟ ಮತ್ತೊಬ್ಬರಿಗೆ ಬರಬಾರದು ಎಂದು ಚಿಂತಿಸುವವನೇ ಮಹಾತ್ಮ. ಇಂತಹ ಮನಸ್ಥಿತಿ ಹೊಂದಿದವರ ಸಂಖ್ಯೆ ಹೆಚ್ಚಿದಾಗ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಶಿಕ್ಷಣ ನೀಡುವ ಉದ್ದೇಶದಿಂದ ತಮ್ಮ ಚಿನ್ನವನ್ನೆ ಮಾರಾಟ ಮಾಡಿದ ಮಹತ್ಮಾ ರಾಜೇಂದ್ರ ಶ್ರೀಗಳು ಇದರಿಂದಾಗಿಯೆ ಇವರನ್ನು ಜಗದ್ಗುರು ಎಂದು ಕರೆಯಲಾಗುತ್ತಿದೆ. ಶ್ರೀಗಳು ವ್ಯಕ್ತಿ ಜ್ಞಾನಿ ಸುಜ್ಞಾನಿಯಾಗ ಬೇಕು ಎಂಬ ಮಹತ್ತಾರ ಆಸೆ ಹೊಂದಿದ್ದ ಫಲವಾಗಿ ಮಠದಲ್ಲಿ ವ್ಯಸಾಂಗ ಮಾಡಿದ ಹಲವರು ದೇಶದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಾತು ಸಾಧನೆಯಾಗಬಾರದು ಸಾಧನೆ ಮಾತಾಗ ಬೇಕು ಈ ವಿಚಾರದಲ್ಲಿ ಶಿವರಾತ್ರಿ ದೇಶಿಕೇಂದ್ರ ಅನುಕರಣಿಯ. ವಿದ್ಯಾಭ್ಯಾಸದ ಪರಿಕಲ್ಪನೆ ಇಲ್ಲದ ವೇಳೆ ಅಕ್ಷರ ಕಲಿಸುವ ದೀಕ್ಷೆತೊಟ್ಟ ಶ್ರೀಗಳು ಪ್ರಪಂಚ ಇರುವವರಗೂ ಆದರ್ಶನೀಯವಾಗಿ ಉಳಿಯಲಿದ್ದಾರೆ. ವೀರಶೈವ ಮಠಗಳು ಒಂದು ಸರ್ಕಾರ ಮಾಡಲಾಗದ ಕೆಲಸಗಳನ್ನು ಮಾಡುತ್ತಿವೆ. ವಿದ್ಯೆ ಎಲ್ಲ ಪದವಿಗಳಿಗಿಂತ ಮಿಗಿಲು. ವಿದ್ಯೆ ಒಂದಿದ್ದರೆ ಬಡತನ ಬರಲಾರದು ಎಂದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ತಾಲೂಕಿನಲ್ಲಿರುವುದು ನಮ್ಮ ಹೆಮ್ಮೆ ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಕಲೆಶ್ವರಸ್ವಾಮಿ ದೇವಸ್ಥಾನದಿಂದ ಸಭಾಭವನದವರೆಗೆ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಬಾಳ್ಳುಬಸವಣ್ಣ,ನಾರ್ವೇ ಶಿವಪ್ರಸಾದ್,ವಿದ್ಯಾಶಂಕರ್,ಯುವಘಟಕದ ಅಧ್ಯಕ್ಷ ಶಶಿಕುಮಾರ್,ಲೋಹಿತ್‌ಕೌಡಳ್ಳಿ,ಕೌಡಳ್ಳಿ ಜೆಎಸ್‌ಎಸ್ ಶಾಲೆಯ ಪ್ರಾಂಶುಪಾಲ್ ನಂಜುಡಪ್ಪ,ಆರ್ ಮಂಜುನಾಥ್ ಮುಂತಾದವರಿದ್ದರು.-----------------------------------------------------------------------