ಬೀದಿದೀಪಗಳ ಆರಂಭದಿಂದ ನಗರದ ವೈಭವ ಹೆಚ್ಚಳ

| Published : Feb 28 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ನಿಪ್ಪಾಣಿ ರಾತ್ರಿ ವೇಳೆ ಸಂಚಾರಕ್ಕೆ ಆಗುವ ತೊಂದರೆ ಗಮನದಲ್ಲಿಟ್ಟುಕೊಂಡು ಆಕರ್ಷಕ ಬೀದಿ ದೀಪ ಅಳವಡಿಸಲಾಗಿದೆ. ಕೆಲ ತಾಂತ್ರಿಕ ತೊಂದರೆಯಿಂದ ಬೀದಿ ದೀಪಗಳನ್ನು ಪ್ರಾರಂಭಿಸಲು ಸಮಯ ತೆಗೆದುಕೊಂಡರೂ, ಮುಂದಿನ ದಿನಗಳಲ್ಲಿ ಈ ಬೀದಿ ದೀಪಗಳು ನಗರದ ವೈಭವ ಹೆಚ್ಚಿಸುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ರಾತ್ರಿ ವೇಳೆ ಸಂಚಾರಕ್ಕೆ ಆಗುವ ತೊಂದರೆ ಗಮನದಲ್ಲಿಟ್ಟುಕೊಂಡು ಆಕರ್ಷಕ ಬೀದಿ ದೀಪ ಅಳವಡಿಸಲಾಗಿದೆ. ಕೆಲ ತಾಂತ್ರಿಕ ತೊಂದರೆಯಿಂದ ಬೀದಿ ದೀಪಗಳನ್ನು ಪ್ರಾರಂಭಿಸಲು ಸಮಯ ತೆಗೆದುಕೊಂಡರೂ, ಮುಂದಿನ ದಿನಗಳಲ್ಲಿ ಈ ಬೀದಿ ದೀಪಗಳು ನಗರದ ವೈಭವ ಹೆಚ್ಚಿಸುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿನ ಸೋಮನಾಥ ದೇವಸ್ಥಾನದಿಂದ ಹಾಲಸಿದ್ಧನಾಥ ದೇವಸ್ಥಾನದ ಕ್ರಾಸ್ ವರೆಗಿನ ಬೀದಿದೀಪಗಳಿಗೆ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ನಗರಾಧ್ಯಕ್ಷ ಸೋನಲ್ ಕೊಠಡಿಯಾ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ಬೀದಿದೀಪಗಳ ಆರಂಭವು ನಗರದ ವೈಭವ ಹೆಚ್ಚಿಸುವಲ್ಲಿ ಹಾಗೂ ಜನರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಪಾತ್ರ ವಹಿಸಿವೆ. ಇದು ಅಂತಾರಾಜ್ಯ ಮಾರ್ಗವಾಗಿದ್ದು, ಮಹಾರಾಷ್ಟ್ರದ ಇಚಲಕರಂಜಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿನ ಉಪನಗರಗಳ ಸಂಖ್ಯೆ ಮತ್ತು ಮಾರ್ಗದಲ್ಲಿ ಹೆಚ್ಚಿದ ದಟ್ಟಣೆಗೆ ಅನುಗುಣವಾಗಿ ಮಾರ್ಗ ವಿಸ್ತರಿಸಲಾಗಿದೆ ಎಂದರು.

ಕಳೆದೊಂದು ವರ್ಷದಿಂದ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಈ ಮಾರ್ಗದಲ್ಲಿ ಕತ್ತಲು ಕವಿದು ರಸ್ತೆಯಲ್ಲಿ ಸಂಚರಿಸಲು ನಾನಾ ರೀತಿ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ ತಕ್ಷಣವೇ ಶಾಸಕಿ ಶಶಿಕಲಾ ಜೊಲ್ಲೆ ರವರು ಬೀದಿ ದೀಪ ಆರಂಭಿಸುವಂತೆ ಸೂಚನೆ ನೀಡಿದ್ದರು. ಪರಿಣಾಮ ಮತ್ತೆ ಬೀದಿದೀಪಗಳು ಊರಿಯುವ ಮೂಲಕ ಸೌಂದರ್ಯ ಮತ್ತೆ ಹೆಚ್ಚಿಸಿದೆ.

ಈ ಸಂದರ್ಭದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಉಪಾದ್ಯಕ್ಷ ಸಂತೋಷ ಸಾಂಗಾವಕರ, ನಗರ ಸೇವಕರಾದ ರಾಜು ಗುಂಡೇಷಾ, ವಿಲಾಸ ಗಾಡಿವಡ್ಡರ, ಪ್ರಭಾವತಿ ಸೂರ್ಯವಂಶಿ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ವಿಜಯ ಟವಳೇ, ಪ್ರಣವ ಮಾನ್ವಿ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ ಕೇಸ್ತೀ, ಹೆಸ್ಕಾಂ ಎಂಜಿನಿಯರ್ ಅಕ್ಷಯ ಚೌಗುಲಾ, ಎಸ್. ಕೆ. ಖಜ್ಜನವರ್, ಮಹಾದೇವ ಬರಗಾಲೆ, ಸುಜಾತಾ ಹೊಗಳೆ, ಸವಿತಾ ಪಾಟೀಲ, ಗೀತಾ ದಳವಿ ಮುಂತಾದವರು ಉಪಸ್ಥಿತರಿದ್ದರು.