ರಾಜ್ಯ ಸರ್ಕಾರ ಬರನಿರ್ವಹಣೆಯಲ್ಲಿ ವಿಫಲ: ಛಲವಾದಿ ನಾರಾಯಣಸ್ವಾಮಿ ಆರೋಪ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಜಲಮೂಲಗಳೇ ಬತ್ತಿ ಹೋಗಿವೆ, ಬೆಳೆ ಒಣಗಿವೆ

--------------

ಸಿಎಂ ವಿರುದ್ಧ ಗರಂ

ಸಿಎಂ ಕ್ಷೇತ್ರ ಕನಕಪುರದಲ್ಲಿ ಕೆರೆಗಳು ಬತ್ತಿ ಹೋಗಿದ್ದು, ಕಬ್ಬು, ಜೋಳ,ಅಡಿಕೆ ತೋಟ, ಹತ್ತಿ ಒಣಗಿಹೋಗಿವೆ


ಆದರೆ ರಿಯಲ್ ಎಸ್ಟೇಟ್, ಗಣಿಗಾರಿಕೆ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಅವರನ್ನು ಬ೦ಡೆ ಎಂದು ಕರೆಯುತ್ತಾರೆ

-----------

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಜ್ಯ ಸರ್ಕಾರ ಬರನಿರ್ವಹಣೆಯಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ರಾಜ್ಯ ಸರ್ಕಾರ ರಜೆ ಹಾಕಿ ಸೋನಿಯಾ ಗಾಂಧಿ ಮನೆ ಬಾಗಿಲು ಕಾಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.ನಗರದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಬರ ಅಧ್ಯಯನ ಮಾಡುವುದನ್ನು ಬಿಟ್ಟಿ ದೆಹಲಿಯಲ್ಲಿ ಸೋನಿಯಾಗಾಂಧಿ ಮನೆಗೆ ಎಡತಾಗುತ್ತಿದೆ. ನಮ್ಮ ಬರ ಅಧ್ಯಯನ ತಂಡ ಮೊದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರ ಭೇಟಿ ಕೊಟ್ಟು ಪರಿಶೀಲನೆ ಮಾಡಿದಾಗ ಎಲ್ಲ ಕೆರೆಗಳು ಬತ್ತಿದ್ದು ಕಂಡುಬಂದಿದೆ. ಬೋರ್‌ವೆಲ್ ಗಳಲ್ಲಿ ನೀರು ಬರುತ್ತಿಲ್ಲ. ಕಬ್ಬಿನಗದ್ದೆಗಳು, ಅಡಿಕೆ ತೋಟ, ರೇಷ್ಮೆ ಬೆಳೆ ಎಲ್ಲವೂ ಒಣಗಿಹೋಗಿವೆ. ಬಾಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗದಂತಾಗಿದೆ. ಆದರೆ ಅಲ್ಲಿ ರಿಯಲ್ ಎಸ್ಟೇಟ್ ದಂಧೆ, ಗಣಿಗಾರಿಕೆ ಚೆನ್ನಾಗಿ ನಡೆಯುತ್ತಿದೆ. ಅದಕ್ಕೆ ಅವರನ್ನು ಬಂಡೆ ಬಂಡೆ ಎಂದು ಕರಿತಾರೆ ಎಂದು ಛೇಡಿಸಿದರು.ವಿದ್ಯುತ್ ಉತ್ಪಾದನೆ ಸ್ಥಗಿತ:

ನಂತರ ಮಂಡ್ಯ ಜಿಲ್ಲೆ ಮಳವಳ್ಳಿಗೆ ಭೇಟಿ ನೀಡಿದಾಗ ಅಲ್ಲೂ ತೀವ್ರ ಬರ ಕಂಡು ಬಂತು. ನೀರಿಲ್ಲದೆ 145 ವರ್ಷಗಳಲ್ಲಿ ಪ್ರಥಮ ಬಾರಿಗೆ ಶಿಂಷಾ ವಿದ್ಯುತ್ ಉತ್ಪಾದನೆ ಘಟಕ ಸ್ಥಗಿತವಾಗಿದೆ. ಇಷ್ಟೆಲ್ಲ ಬರ ಆವರಿಸಿದ್ದರೂ ಕೂಡ ರಾಜ್ಯ ಸರ್ಕಾರ ದೆಹಲಿಯಲ್ಲಿದೆ. ರೈತರು ಸಂಕಷ್ಟ ಇಲ್ಲಿ ಯಾರಿಗೆ ಹೇಳಿಕೊಳ್ಳಬೇಕು?ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್, ನಾನು, ಶ್ರೀವತ್ಸ, ಜು.4 ರಂದು ಕೆಆರ್‌ಎಸ್‌ಗೆ ಭೇಟಿ ಕೊಟ್ಟಿದ್ದೆವು. ಅಧಿಕಾರಿಗಳು 10 ಟಿಎಂಸಿ ನೀರಿದೆ ಎಂದು ಹೇಳಿದರು. 6 ಟಿಸಿಎಂ ಎರಡು ತಿಂಗಳಿಗೆ ಮಾತ್ರ ಕುಡಿಯಲು ಇದೆ. ಈಗ ಒಂದು ತಿಂಗಳು ಆಗಿದೆ. ಅದಕ್ಕಾಗಿ ಎಲ್ಲ ನೀರನ್ನು ನಿಲ್ಲಿ ಸಲಾಗಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾದರು ಆಗ್ರಹಿಸಿದರು.ತಮಿಳುನಾಡಿಗೆ 3.5 ಟಿಸಿಎಂ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶ ನೀಡಿದೆ. ಕೆಆರ್‌ಎನ್‌ನಲ್ಲಿ ಉಳಿದಿರೋದೆ 3 ಟಿಎಂಸಿ ಎಲ್ಲಿಂದ ನೀರು ಹರಿಸಬೇಕು. ಇಡೀ ಮಂಡ್ಯ ಜಿಲ್ಲೆ ರೈತರು ಇದೇ ನೀರು ಆಶ್ರಯಿಸಿಕೊಂಡಿದ್ದಾರೆ ಎಂದರು. ರಾಜ್ಯ ಸರ್ಕಾರ ಈಗಾಗಲೇ ಬರ ಅಧ್ಯಯನ ನಡೆಸಿ ಬರ ಪೀಡಿತ ಜಿಲ್ಲೆ-ತಾಲೂಕು ಪಟ್ಟಿ ಘೋಷಣೆ ಮಾಡಬೇಕಿತ್ತು. ಸರ್ಕಾರ ಮಾಡಬೇಕಾದ ಕೆಲಸವನ್ನು ವಿರೋಧಪಕ್ಷ ಮಾಡಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ರೈತರಿಗೆ ಬರ ಪರಿಹಾರ ನೀಡಲು ಒತ್ತಾಯ ಮಾಡಲಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ಕೇಶವಪ್ರಸಾದ್, ರಘುಕೌಟಿಲ್ಯ, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಸಂಯೋಜಕ ಫಣೀಶ್, ಸ್ವಾಮಿ, ಲಿಂಗರಾಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಮನೋಜ್ ಪಟೇಲ್, ಜಿಪಂ ಮಾಜಿ ಸದಸ್ಯ ಬಾಲರಾಜು, ಜಯಸುಂದರ್, ಅರಕಲವಾಡಿ ನಾಗೇಂದ್ರ, ಸಾಹಿತಿ ಮಂಜುಕೋಡಿ ಉಗನೆ ಹಾಜರಿದ್ದರು.

-------------

29ಸಿಎಚ್ಎನ14

ಚಾಮರಾಜನಗರದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.