ಕೃಷ್ಣಾ ನದಿ ನೀರು ರಾಜ್ಯದ ಲಕ್ಷಾಂತರ ರೈತರ ಬದುಕಿಗೆ ಜೀವನಾಡಿಯಾಗಿದೆ. ಈ ನದಿ ತಿರುವಿಗೆ ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ.
ಕನ್ನಡಪ್ರಭ ವಾರ್ತೆ ನರಗುಂದ
ಕೃಷ್ಣಾ ನದಿ ನೀರು ರಾಜ್ಯದ ಲಕ್ಷಾಂತರ ರೈತರ ಬದುಕಿಗೆ ಜೀವನಾಡಿಯಾಗಿದೆ. ಈ ನದಿ ತಿರುವಿಗೆ ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ತಿರುವಿನ ಬಗ್ಗೆ ಗಮನವಹಿಸಬೇಕೆಂದು ರೈತ ಸೇನಾ ಕರ್ನಾಟಕ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆಗ್ರಹಿಸಿದರು.4023ನೇ ದಿನದ ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸಾವಿರಾರು ಟಿಎಂಸಿ ನೀರು ಕೃಷ್ಣಾ ನದಿಯಿಂದ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ರಾಜ್ಯದವರಗೆ ಹರಿಯುವ ನೀರಿನಲ್ಲಿ ಮಹಾರಾಷ್ಟ್ರ ಸರ್ಕಾರ ಈ ನದಿಯಲ್ಲಿ ಹರಿಯುವ 40ಟಿಎಂಸಿ ನೀರನ್ನು ಪ್ರಹಾವ ತಪ್ಪಿಸುವ ಉದ್ದೇಶ ನೆಪ ಹೇಳಿ ಭೀಮಾ ನದಿಯ ಉಜನಿ ಜಲಾಶಯಕ್ಕೆ ಹರಿಸುವುದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಸ್ತಾಪ ಮಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತನ್ನ ನೀರಿನ ಹಕ್ಕಿನ ಪ್ರಕಾರ ಈ ಯೋಜನಗೆ ವಿರೋಧ ಮಾಡಬೇಕು. ಒಂದು ವೇಳೆ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶದ ರಾಜ್ಯದವರು ಸದ್ಯ ನಾವು ಸುಮ್ಮನಾದರೆ ಮುಂಬರುವ ದಿನಗಳಲ್ಲಿ ಈ ಮೂರು ರಾಜ್ಯದವರು ನೀರಿನ ಅಭಾವ ಅನುಭವಿಸಬೇಕಾಗುತ್ತದೆ. ಮೂರು ರಾಜ್ಯದ ಮುಖ್ಯಮಂತ್ರಿಗಳಿಗೆ ಇನ್ನು ಕಾಲ ಮಿಂಚಿಲ್ಲ, ಬೇಗ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಕೈ ಬಿಡಬೇಕೆಂದು ಮನವಿ ಮಾಡಬೇಕು. ಒಂದು ವೇಳೆ ಆ ಸರ್ಕಾರ ಈ ಯೋಜನೆ ಕೈ ಬಿಡದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಶ್ರದ್ದಾನಂದ ಸ್ವಾಮಿಗಳು, ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ರಾಘವೇಂದ್ರ ಗುಜಮಾಡಿ, ಹನಮಂತ ಸರನಾಯ್ಕರ, ಸುಭಾಸ ಗಿರಿಯಣ್ಣವರ, ಫಕೀರಪ್ಪ ಅಣ್ಣಗೇರಿ, ಚನ್ನಬಸಪ್ಪ ಆಯಿಟ್ಟಿ, ಯಲ್ಲಪ್ಪ ಚಲವಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ವಿಜಯಕುಮಾರ ಹೂಗಾರ ಇದ್ದರು.