ಬಿಜೆಪಿಗೆ ಕಾರ್ಯಕರ್ತರ ಬಲವೇ ಶಕ್ತಿ

| Published : Mar 15 2024, 01:17 AM IST

ಸಾರಾಂಶ

ಬಾದಾಮಿ ಬಿಜೆಪಿ ಮಂಡಲದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷ, ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಬಿಜೆಪಿಯು ಕಾರ್ಯಕರ್ತರ ಶಕ್ತಿ ಕೇಂದ್ರವಾಗಿದೆ. ಇಲ್ಲಿ ಕಾರ್ಯಕರ್ತರ ನೇತೃತ್ವದಲ್ಲಿರುವ ಪದಾಧಿಕಾರಿಗಳ ಕಾರ್ಯ ಕ್ಷೇತ್ರ ಅತೀ ಮುಖ್ಯ. ಕಾರ್ಯಕರ್ತರ ಜೊತೆ ಮುಕ್ತ ಮನಸಿನಿಂದ ಬೆರೆತು ಪಕ್ಷ ಸಂಘಟಿಸುವ ಜವಾಬ್ದಾರಿ ಪದಾಧಿಕಾರಿಗಳ ಮೇಲಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಬಾದಾಮಿ ಬಿಜೆಪಿ ಮಂಡಲದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷ, ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ದೇಶದ ಪ್ರಧಾನಿಯಾದ ನಂತರ ವಿದೇಶಗಳಲ್ಲಿ ಭಾರತ ಜನಮನ್ನಣೆ ಗಳಿಸಿದೆ. ಇದಕ್ಕೆ ಪೂರಕವಾಗಿ ಕಳೆದ 10 ವರ್ಷಗಳಲ್ಲಿ ಮೋದಿ ಅವರು ಉತ್ತಮ ಆಡಳಿತ ನೀಡಿದ್ದಾರೆ. ಮಂಡಲದ ನೂತನ ಅಧ್ಯಕ್ಷ ನಾಗರಾಜ ಕಾಚಟ್ಟಿ ಅವರು ಯುವಕ ಹಾಗೂ ಪ್ರಭಾವಿ ನಾಯಕತ್ವ ಹೊಂದಿದವರು. ಈ ಹಿಂದಿನಿಂದಲೂ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿ ಪಕ್ಷ ಸಂಘಟಿಸಿದವರು. ಹೀಗಾಗಿ ಈ ಹೊಸ ಜವಾಬ್ದಾರಿ ಮೂಲಕ ಪಕ್ಷದಲ್ಲಿ ಹೊಸ ಚೈತನ್ಯ ತರಲಿ ಎಂದು ಆಶಿಸಿದರು.

ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಿ.ಪಿ.ಹಳ್ಳೂರ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಇವರ ಸೇವೆ ಸ್ಮರಿಸಿ ಪಕ್ಷ ಸಂಘಟನೆ ಮಾಡುವ ಮೂಲಕ ಮೋದಿಯವರ ಕೈ ಬಲಪಡಿಸಿ, ಮೊತ್ತೊಮ್ಮೆ ಮೋದಿ ಅವರನ್ನು ದೇಶದ ಪ್ರಧಾನಿ ಮಾಡಲು ನಾವು ಸಂಕಲ್ಪ ಮಾಡಬೇಕು ಎಂದು ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಕಾರ್ಯಕರ್ತರಿಗೆ ಅಧಿಕಾರವಿಲ್ಲದೇ ತೊಂದರೆ ಆಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳೋಣ. ಪ್ರತಿ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡೋಣ ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಾಗರಾಜ ಕಾಚಟ್ಟಿ ಮಾತನಾಡಿ, ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಪಕ್ಷ ನನಗೆ ಮಂಡಲದ ಅಧ್ಯಕ್ಷ ಸ್ಥಾನ ನೀಡಿದೆ. ನಮ್ಮ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾದ ಪದಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಪಕ್ಷಕ್ಕೆ ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಭರವಸೆ ನೀಡಿದರು.ಉಪಾಧ್ಯಕ್ಷ ಶಿವನಗೌಡ ಸುಂಕದ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಫ್.ಆರ್‌.ಪಾಟೀಲ, ಎನ್.ಎಸ್.ಬೊಮ್ಮನಗೌಡರ, ಆಸಂಗೆಪ್ಪ ನಕ್ಕರಗುಂದಿ, ಮುತ್ತು ಉಳ್ಳಾಗಡ್ಡಿ, ಭಾಗ್ಯಾ ಉದ್ನೂರ, ಜಯಶ್ರೀ ದಾಸಮನಿ, ಹೊನ್ನಯ್ಯ ಹಿರೇಮಠ, ಪ್ರಮೋದ ಕವಡಿಮಟ್ಟಿ, ಶೇಖರಗೌಡ ಪಾಟೀಲ, ಶೇಖರಯ್ಯ ಹಿರೇಮಠ, ಯಲ್ಲಪ್ಪ ಕಲಾದಗಿ, ಮಹಾಂತೇಶ ತಳವಾರ, ಭುವನೇಶ ಪೂಜಾರ, ವೀರಣ್ಣ ಹಳೆಗೌಡರ, ಸಂಜೀವ ಜಗದಾಳೆ, ರಾಘು ದಾಯಪೂಲೆ, ಮಾನನಗೌಡ ಜನಾಲಿ, ಕುಮಾರ ಐವಳ್ಳಿ, ಮಾಗುಂಡಪ್ಪ ನೋಟಗಾರ, ಮಹಾಂತೇಶ ಸುಳ್ಳದ, ರೆಹಮಾನ್‌ ಕೆರಕಲಮಟ್ಟಿ, ಬಾಷಾಸಾಬ್‌ ಉಮಚಗಿ ಇತರರು ಇದ್ದರು.