ಸಾರಾಂಶ
ಹೊದ್ದೂರು ಗ್ರಾಮದ ಪೆಂಗೋಳಿ ಎಂಬಲ್ಲಿ ಕಳೆದ ಏಳು ದಿನಗಳಿಂದ ಚಳಿ, ಮಳೆ, ಗಾಳಿ ಲೆಕ್ಕಿಸದೆ ಟೆಂಟ್‌ನಲ್ಲಿ ವಾಸವಿದ್ದು, ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಕುಟುಂಬ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳು ನಡೆಸುತ್ತಿರುವ ಹೋರಾಟ ಶುಕ್ರವಾರ ಏಳನೇ ದಿನಕ್ಕೆ ಕಾಲಿರಿಸಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
‘ನಮ್ಮ ಭೂಮಿ ನಮ್ಮ ಹಕ್ಕು..ಮಣ್ಣಿಗಾಗಿ ನಮ್ಮ ಹೋರಾಟ...’ ಇವು, ಹೊದ್ದೂರು ಗ್ರಾಮದ ಪೆಂಗೋಳಿಯಲ್ಲಿ ಮಾರ್ದನಿಸಿದ ಹೋರಾಟಗಾರರ ಘೋಷಣೆಗಳು.ಹೊದ್ದೂರು ಗ್ರಾಮದ ಪೆಂಗೋಳಿ ಎಂಬಲ್ಲಿ ಕಳೆದ ಏಳು ದಿನಗಳಿಂದ ಚಳಿ, ಮಳೆ, ಗಾಳಿ ಲೆಕ್ಕಿಸದೆ ಟೆಂಟ್‌ನಲ್ಲಿ ವಾಸವಿದ್ದು, ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಕುಟುಂಬ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳು ನಡೆಸುತ್ತಿರುವ ಹೋರಾಟ ಶುಕ್ರವಾರ ಏಳನೇ ದಿನಕ್ಕೆ ಕಾಲಿರಿಸಿತು.
ಹೊದ್ದೂರು ಗ್ರಾಮದಲ್ಲಿ 800ಕ್ಕೂ ಅಧಿಕ ನಿರಾಶ್ರಿತ ಬಡ ಕುಟುಂಬಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರಿ ಕಂದಾಯ ಭೂಮಿಯನ್ನು ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಆರೋಪವಿದೆ. ಇಲ್ಲಿ ಇದುವರೆಗೂ ಬಡವರಿಗೆ ನಿವೇಶನ ಸರ್ಕಾರ ನೀಡಲು ಮುಂದಾಗಿರುವುದಿಲ್ಲ. ಹೊದ್ದೂರು ಗ್ರಾಮದ ಸರ್ವೆ ನಂ. 53/10, 49/3 ಮತ್ತು 88/4 ರಲ್ಲಿ ನಿವೇಶನ ಕಲ್ಪಿಸಿ ಕೊಡುವಂತೆ ಹೋರಾಟದ ಮುಂದಾಳತ್ವ ವಹಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ, ಹೊದ್ದೂರು ಪಂಚಾಯಿತಿ ಸದಸ್ಯ ಕೆ.ಮೊಣ್ಣಪ್ಪ ಶುಕ್ರವಾರ ಒತ್ತಾಯಿಸಿದರು.ಹೊದ್ದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಕುಸುಮಾವತಿ, ಎಚ್‌ಎಸ್ ಭೋಜ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕಿರಣ್,
ಜಗದೀಶ್, ಮಹಮ್ಮದ್, ಮಾದೇಶ, ನಿವೇಶನ ಸಮಿತಿ ಪದಾಧಿಕಾರಿ ಸತೀಶ, ಲೋಕೇಶ, ಮೋಹನ್, ಸುಜಾತಾ, ಆನಂದ, ಮಂಜುಳಾ, ಜೀವನ್, ಸೌಮ್ಯ ಮತ್ತಿತರರು ಹಾಜರಿದ್ದರು.ಪ್ರತಿ ಆರೋಪ: ಪ್ರತಿಭಟನೆಗೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿ, ತೆಕ್ಕಡೆ ಕುಟುಂಬಸ್ಥರ ಪರವಾಗಿ ಮಾತನಾಡಿದ ತೆಕ್ಕಡೆ ಮಹೇಶ್, ಐವತ್ತು ವರ್ಷಕ್ಕೂ ಹಿಂದಿನಿಂದ ಈ ಆಸ್ತಿ ಅನುಭವಿಸುತ್ತಿದ್ದೇವೆ. ಕುಟುಂಬದ ಐದು ಆರು ಮಂದಿ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗನಮ್ಮದು ಎಂದು ನಿವೇಶನ ರಹಿತರು ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಸಮಸ್ಯೆ ಬಗ್ಗೆ ಹರಿಸುವ ನಿಟ್ಟಿನಲ್ಲಿ ಗುರುವಾರ ಕಂದಾಯ ಇಲಾಖೆ ವತಿಯಿಂದ ಸರ್ವೆ ಮಾಡಲಾಗಿದ್ದು ದಾಖಲೆ ದೊರಕಬೇಕಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಅವರ ತಂದೆ ಸೋಮಣ್ಣ, ಸಹೋದರ ಪೂರ್ಣೇಶ್ ಇದ್ದರು.