ಜಕಣಾಚಾರಿಯವರು ಚಿತ್ರಿಸಿದ ಶಿಲ್ಪಿಗಳು ಹೇಗೆ ಕಣ್ಣ ಮುಂದೆ ಬರುತ್ತವೆಯೋ ಅದೇ ರೀತಿ ಅವರ ಹಿನ್ನೆಲೆಯೂ ಸಹ ಕಣ್ಣ ಮುಂದೆ ಬರುವಂತೆ ಇರಬೇಕು, ಯಾವುದೇ ವಿದೇಶಿಯರು ಬಂದರೆ ಪ್ರತಿಯೊಂದು ವ್ಯಕ್ತಿಯ ಬಾಯಿಯಲ್ಲೂ ಬರುವಂತಹ ಮಾತು ಶಿಲೆಯನ್ನು ಕೆತ್ತಿದವರು ಯಾರು ಎಂದು ಏಕೆಂದರೆ ಅಷ್ಟು ಸೊಗಸಾಗಿ ಶಿಲೆಯನ್ನು ಕೆತ್ತನೆ ಮಾಡಿರುವುದರಿಂದಾಗಿದೆ. ಈ ನೆಲದ ಕಂಪನ್ನು ಜಗತ್ತಿನ ಮೂಲೆ ಮೂಲೆಗು ಕಂಪಿಸಿದೆ. ಈ ನಮ್ಮ ಹಿರಿಮೆ ಗಿರಿಮೆ ಮುಂದೆಯೂ ಹಾಗೆಯೇ ಉಳಿಯಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಎಲ್ ಮಲ್ಲೇಶ್ ಗೌಡ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಶಿಲೆಯನ್ನು ಸುಂದರ ಮೂರ್ತಿಯಾಗಿಸಿರುವುದು ವಿಶ್ವ ಕರ್ಮರು. ಜಗತ್ತಿನ ಮೂಲ ಸೌಂದರ್ಯವನ್ನು ಬ್ರಹ್ಮ ಕೊಟ್ಟರೆ ಆ ಸೌಂದರ್ಯಕ್ಕೆ ಜೀವ ಕೊಡುವುದು ಶಿಲ್ಪಿಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಎಲ್ ಮಲ್ಲೇಶ್ ಗೌಡ ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಜಡವನ್ನು ಜೀವಿಸುವಂತೆ ಮಾಡುವುದು ಶಿಲ್ಪ ಕಲೆಯಾಗಿದೆ. ಒಂದು ಕಲ್ಲು ವ್ಯಕ್ತತೆ ಅಭಿವ್ಯಕ್ತತೆಯನ್ನು ತಂದು ಕೊಡುತ್ತದೆ ಎಂದರು.
ಜಕಣಾಚಾರಿಯವರು ಚಿತ್ರಿಸಿದ ಶಿಲ್ಪಿಗಳು ಹೇಗೆ ಕಣ್ಣ ಮುಂದೆ ಬರುತ್ತವೆಯೋ ಅದೇ ರೀತಿ ಅವರ ಹಿನ್ನೆಲೆಯೂ ಸಹ ಕಣ್ಣ ಮುಂದೆ ಬರುವಂತೆ ಇರಬೇಕು, ಯಾವುದೇ ವಿದೇಶಿಯರು ಬಂದರೆ ಪ್ರತಿಯೊಂದು ವ್ಯಕ್ತಿಯ ಬಾಯಿಯಲ್ಲೂ ಬರುವಂತಹ ಮಾತು ಶಿಲೆಯನ್ನು ಕೆತ್ತಿದವರು ಯಾರು ಎಂದು ಏಕೆಂದರೆ ಅಷ್ಟು ಸೊಗಸಾಗಿ ಶಿಲೆಯನ್ನು ಕೆತ್ತನೆ ಮಾಡಿರುವುದರಿಂದಾಗಿದೆ. ಈ ನೆಲದ ಕಂಪನ್ನು ಜಗತ್ತಿನ ಮೂಲೆ ಮೂಲೆಗು ಕಂಪಿಸಿದೆ. ಈ ನಮ್ಮ ಹಿರಿಮೆ ಗಿರಿಮೆ ಮುಂದೆಯೂ ಹಾಗೆಯೇ ಉಳಿಯಬೇಕು ಎಂದು ತಿಳಿಸಿದರು.ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿ, ಜಕಣಾಚಾರಿ ಅವರ ಒಂದು ಕಲ್ಪನೆ, ಮಾದರಿಯನ್ನು ಇಟ್ಟುಕೊಂಡು ಅವರು ಚಿತ್ರವನ್ನು ರಚಿಸಿದ್ದಾರೆ. ಜಗತ್ಪ್ರಸಿದ್ಧಿ ವಿದ್ವಾಂಸರು, ಭಾವನಾತ್ಮಕವಾಗಿ ಕೆತ್ತುವ ಶಿಲ್ಪಿ ಎಂದಿಗೂ ತನ್ನ ಹೆಸರನ್ನು ಹಾಕಿಕೊಳ್ಳುವುದಿಲ್ಲ ಎಂದು ತಿಳಿಸಿದರು.ಬೇಲೂರು ಹಳೇಬೀಡು ದೊಡ್ಡಗದವಳ್ಳಿ ಎಲ್ಲವೂ ಶಿಲ್ಪ ಕಲೆಗಳ ತವರೂ ಎಂದೇ ಪ್ರಸಿದ್ದಿ ಪಡೆದಿದೆ. ಸಾಧನೆ ಮಾಡುವವರು ಜಿಲ್ಲೆಯಲ್ಲಿ ಇದ್ದಾರೆ. ಸಂಘಟನೆ ಎಂಬುದು ತುಂಬಾ ಮುಖ್ಯ ನಮ್ಮ ಶಿಲ್ಪ ಕಲೆಗಳು ಎಲ್ಲಿಂದ ಎಲ್ಲಿಯವರೆಗೂ ಹೋದರೂ ಅವು ಅಜರಾಮರ. ಕನ್ಯಾಕುಮಾರಿಯಿಂದ ಕಾವೇರಿಯವರಿಗೆ ರಚಿಸಿರುವ ಕಲೆಗಳು ನಮ್ಮ ಶಿಲ್ಪ ಕಲೆಗಳೇ ಆಗಿವೆ. ಬೌದ್ಧರಿಗೆ ಬೇಕಾದ ವಿಹಾರಗಳನ್ನು ರಚಿಸಿದ್ದಾರೆ. ಕ್ರೈಸ್ತರಿಗೆ ಬೇಕಾದ ಚರ್ಚನ್ನು ಕಟ್ಟಿದವರು ವಿಶ್ವಕರ್ಮ ಶಿಲ್ಪಿಗಳೆ ಆಗಿದ್ದಾರೆ ಎಂದರು.ಉತ್ತರ ಭಾರತದಿಂದ ಆಗ್ರದವರೆಗೆ ಪ್ರತಿಯೊಂದು ಪ್ರಸಿದ್ಧ ಸ್ಥಳಗಳಲ್ಲಿಯೂ ವಿಶ್ವಕರ್ಮಿಗಳ ಹೆಸರು ಇದೆ. ಒಬ್ಬನೇ ದೇವ ಅದು ವಿಶ್ವಕರ್ಮದೇವ ಎಂದು ವಿಶ್ವಕರ್ಮದಿಂದಲೇ ಹೇಳಲಾಗಿದೆ. ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರ್ಯ ಸ್ಮಾರಕ ನಿರ್ಮಾಣ ಮಾಡಿ ಎಂದು ಜಕಣಾಚಾರಿ ಅವರ ಬಾಲ್ಯ ಮತ್ತು ಅವರ ಕೆತ್ತನೆಯನ್ನು ಕುರಿತು ತಿಳಿಸಿದರು.ಆಕಾಶವಾಣಿಯ ನಿವೃತ್ತ ಕಾರ್ಯಕ್ರಮಾಧಿಕಾರಿ ವಿಜಯ ಅಂಗಡಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಜಕಣಾಚಾರಿ ಅವರು ಮುಂದಿನ ಪೀಳಿಗೆಯೂ ನೆನಪಿನಲ್ಲಿ ಇಟ್ಟುಕೊಳ್ಳುವಂತ ಕೊಡುಗೆ ನೀಡಿದ್ದಾರೆ. ಅವರ ನೆನಪು ಎಂದೆಂದಿಗೂ ಅಜರಾಮರ ವಾಗಿದೆ ಎಂದು ತಿಳಿಸಿದರು.ಜಕಣಾಚಾರಿ ಅವರ ಎಲ್ಲಾ ಆಧಾರಗಳು ನಮಗೆ ೧೨ನೇ ಶತಮಾನದ ದಾಖಲೆಗಳಲ್ಲಿ ಸಿಗುತ್ತವೆ. ವಿಶ್ವಕರ್ಮದ ಬಂಧುಗಳು ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳಿ ಮುಂದೆ ಅಧ್ಯಯನಕ್ಕೆ ಬೇಕಾಗುತ್ತದೆ ಎಂದರಲ್ಲದೆ, ಜಕಣಾಚಾರಿಯವರ ವೃತ್ತಿಯ ಬಗ್ಗೆ ತಿಳಿಯಬೇಕೆಂದರೆ ತುಮಕೂರು ಜಿಲ್ಲೆಯಲ್ಲಿನ ಜಕ್ಕನಹಳ್ಳಿ ಎಂಬ ಊರಿಗೆ ಭೇಟಿ ನೀಡಿ, ಅಲ್ಲಿ ಅವರ ಕೆಲಸ ಯಾವ ರೀತಿಯಲ್ಲಿದೆ ಎಂಬುದು ತಿಳಿಯುತ್ತದೆ ಎಂದರು. ಎಲ್ಲರೂ ಜಕಣಾಚಾರಿಯವರ ಹಿನ್ನೆಲೆಯನ್ನು ತಿಳಿದುಕೊಳ್ಳಿ ಹಾಗೂ ಮುಂದಿನ ಪೀಳಿಗೆಗೂ ಕೂಡ ಅವರ ಕುರಿತು ತಿಳಿ ಹೇಳಿ, ಅವರ ನೆನಪು ಸದಾ ಕಾಲ ಇರುವಂತೆ ಮಾಡಿ ಎಂದು ಜಕಣಾಚಾರಿ ಅವರ ಜೀವನದ ಕುರಿತಾಗಿ ಸವಿವರವಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್, ಸಮುದಾಯದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.