ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಅವರ ನೆನಪು ಸದಾಕಲವೂ ಜೀವಂತವಾಗಿದೆ. ಮುಂದೆಯೂ ಇರುತದೆ. ಕನ್ನಡದ ಮಹಾನ್ ಕವಿ, ಕಾದಂಬರಿಕಾರ, ನಾಟಕಕಾರ.
ಕನ್ನಡಪ್ರಭ ವಾರ್ತೆ ಬೇಲೂರು
ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪಾಲಿಸಿದರೆ ಸಮಾಜದಲ್ಲಿ ನಡೆಯುತ್ತಿರುವ ಜಾತಿ ವೈಷಮ್ಯಕ್ಕೆ ಪರಿಹಾರ ದೊರಕಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬಿ.ಬಿ ಶಿವರಾಜು ಹೇಳಿದರು.ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲೂಕು ಜಾನಪದ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕುವೆಂಪು ಒಂದು ನೆನಪು’ ಮತ್ತು ಜಾನಪದ ಗೀತಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರ ಸಾಹಿತ್ಯ ಮತ್ತು ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಅವರ ನೆನಪು ಸದಾಕಲವೂ ಜೀವಂತವಾಗಿದೆ. ಮುಂದೆಯೂ ಇರುತದೆ. ಕನ್ನಡದ ಮಹಾನ್ ಕವಿ, ಕಾದಂಬರಿಕಾರ, ನಾಟಕಕಾರ, ಚಿಂತಕರಾಗಿದ್ದು, ಯುಗದ ಕವಿ ಮತ್ತು ವಿಶ್ವಮಾನವ ಸಂದೇಶ ನೀಡಿದವರಾಗಿದ್ದಾರೆ. ಇವರು ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು, ತಮ್ಮ ಕಾವ್ಯ, ನಾಟಕ ಮತ್ತು ಕಾದಂಬರಿಗಳಿಂದ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕುವೆಂಪು ಅವರ ಸಾಹಿತ್ಯ, ಮೌಲ್ಯ ಮತ್ತು ಮಾನವೀಯತೆ ಮೌಲ್ಯತೆ ಎತ್ತಿ ಹಿಡಿದಿದ್ದು ಬಹು ಸಂಸ್ಕೃತಿಯನ್ನು ಮೆಚ್ಚಿಕೊಂಡಿದ್ದರು.ಇಂದಿನ ಯುವ ಪೀಳಿಗೆಗೆ ಕುವೆಂಪು ಅವರ ಪರಿಚಯ ಸೇರಿದಂತೆ ಎಲ್ಲಾ ಕವಿಗಳ ಪರಿಚಯವನ್ನ ಅರಿವು ಮೂಡಿಸುವಂತ ಅಗತ್ಯವಿದೆ ಎಂದರು.
ಹಾಸನ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, “ಕುವೆಂಪು ಎಂಬ ಮಹಾಕವಿ ಕನ್ನಡ ಮಣ್ಣಿನ ನಾಡಪದಗಳನ್ನು, ಜನಪದ ರಾಗಗಳನ್ನು, ಹಳ್ಳಿಗಳ ಹೃದಯದ ಧ್ವನಿಗಳನ್ನು ತಮ್ಮ ಸಾಹಿತ್ಯದಲ್ಲಿ ಜೀವಂತಗೊಳಿಸಿದವರು. ಕುವೆಂಪುವನ್ನು ಅರ್ಥಮಾಡಿಕೊಳ್ಳಬೇಕು ಎಂದರೆ ಮೊದಲು ನಮ್ಮ ಜಾನಪದವನ್ನು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಕುವೆಂಪು ಅವರ ಬರಹಗಳು ಗ್ರಾಮಜೀವನದ ಉಸಿರು, ಜಾನಪದ ಪರಂಪರೆಯ ರಸ, ಮಣ್ಣಿನ ವಾಸನೆಯಿಂದ ತುಂಬಿದ್ದವು ಎಂದರು.ಜಾನಪದವು ಕಾಪಾಡಬೇಕಾದ ನಮ್ಮ ಮೌಲ್ಯಸಂಪತ್ತು. ಆದರೆ ಇಂದು ಅದನ್ನು ಸವಾಲುಗಳು ಸುತ್ತುವರೆದಿವೆ. ಜಾನಪದ ಪರಿಷತ್ತುಗಳ ಕೆಲಸ ಕೇವಲ ಕಾರ್ಯಕ್ರಮ ನಡೆಸುವುದಲ್ಲ; ಜಾನಪದ ಕಲಾವಿದರನ್ನು ಉತ್ತೇಜಿಸುವುದು, ಅವರ ಕಲೆ–ಜ್ಞಾನವನ್ನು ಮುಂದಿನ ತಲೆಮಾರಿಗೆ ತಲುಪಿಸುವುದು, ಮತ್ತು ಕಳೆದುಹೋಗುತ್ತಿರುವ ಸಂಪ್ರದಾಯಗಳನ್ನು ಬದುಕಿಸುವುದು ಮುಖ್ಯ ಎಂದು ತಿಳಿಸಿದರು.
ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ನಾಮಫಲಕವನ್ನು ಕೊಡುಗೆಯಾಗಿ ನೀಡಿದ ಬಿ.ಬಿ ಶಿವರಾಜ್ ಅವರನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ಜಾನಪದ ಪರಿಷತ್ ಅಧ್ಯಕ್ಷ ವೈ. ಎಸ್. ಸಿದ್ದೇಗೌಡ , ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಮೊಗಪ್ಪಗೌಡ, ಜಯಪ್ರಕಾಶ್, ಇಂದಿರಮ್ಮ, ಧನಂಜಯ್, ಶೇಷಪ್ಪ, ವೆಂಕಟೇಶ್ ಸೇರಿದಂತೆ ನಿವೃತ್ತ ನೌಕರರು ಹಾಜರಿದ್ದರು.