ಸೌರಶಕ್ತಿ ಸಾಧನಗಳ ಬಳಕೆಯಿಂದ ಪರಿಸರ ಹಾನಿ ಕಡಿಮೆ ಮಾಡಲು ಸಾಧ್ಯ

| Published : Sep 24 2025, 01:01 AM IST

ಸೌರಶಕ್ತಿ ಸಾಧನಗಳ ಬಳಕೆಯಿಂದ ಪರಿಸರ ಹಾನಿ ಕಡಿಮೆ ಮಾಡಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನತೆ ಸೃಜನಶೀಲತೆ ಮತ್ತು ಹೊಸ ಆವಿಷ್ಕಾರಗಳಿಂದ ಹಸಿರು ಭವಿಷ್ಯಕ್ಕೆ ದಾರಿ ತೋರುತ್ತಿದ್ದಾರೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಕ ಡಾ. ಮಹೇಶ ನಾಯಕ ಹೇಳಿದರು.

ರಾಣಿಬೆನ್ನೂರು: ಯುವಜನತೆ ಸೃಜನಶೀಲತೆ ಮತ್ತು ಹೊಸ ಆವಿಷ್ಕಾರಗಳಿಂದ ಹಸಿರು ಭವಿಷ್ಯಕ್ಕೆ ದಾರಿ ತೋರುತ್ತಿದ್ದಾರೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗ ಸಹ ಪ್ರಾಧ್ಯಾಪಕ ಡಾ. ಮಹೇಶ ನಾಯಕ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಪರಿಸರ ನಾಶವನ್ನು ತಡೆಯಲು ಯುವ ಜನತೆಯಿಂದ ನವೀನ ಪರಿಹಾರಗಳು ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸೌರ ಶಕ್ತಿಯಿಂದ ಕೆಲಸ ಮಾಡುವ ಸಾಧನಗಳ ಬಳಕೆಯಿಂದ ಪರಿಸರ ಹಾನಿಯನ್ನು ಕಡಿಮೆ ಮಾಡಲು ಸಾಧ್ಯ. ತ್ಯಾಜ್ಯ ನಿರ್ವಹಣೆ ಮತ್ತು ವಸ್ತುಗಳ ಮರುಬಳಕೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿದರೆ ಪರಿಸರ ನಾಶವನ್ನು ತಡೆಗಟ್ಟಬಹುದು ಎಂದರು. ಪ್ರಾ. ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನಾಗರಾಜ ಗವಿಯಪ್ಪನವರ, ಪ್ರೊ.ಎಮ್.ಎನ್. ಸೂರಣಗಿ, ಪ್ರೊ. ಚನ್ನಬಸಪ್ಪ ಮಾಳಿ, ಕುಸುಮಾ ಕೊರವರ, ದೀಪಿಕಾ ಗುತ್ತಲ, ನಿಶಾ ಕಣಮನಿ, ಸ್ಫೂರ್ತಿ ಮಂಡಕ್ಕಿ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.