ವ್ಹೀಲಿಂಗ್‌ ಮಾಡುತ್ತಿರುವ ಯುವಕ-ಯುವತಿ ವಿಡಿಯೋ ವೈರಲ್

| Published : Nov 26 2023, 01:15 AM IST

ಸಾರಾಂಶ

ರಾಮನಗರ: ಯುವಕನೊಬ್ಬ ಯುವತಿಯನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ ಘಟನೆ ಬೆಂಗಳೂರು- ಮೈಸೂರು ರಸ್ತೆಯ ಬಿಡದಿ ವ್ಯಾಪ್ತಿಯಲ್ಲಿ ನಡೆದಿದೆ.

ರಾಮನಗರ: ಯುವಕನೊಬ್ಬ ಯುವತಿಯನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡಿದ ಘಟನೆ ಬೆಂಗಳೂರು- ಮೈಸೂರು ರಸ್ತೆಯ ಬಿಡದಿ ವ್ಯಾಪ್ತಿಯಲ್ಲಿ ನಡೆದಿದೆ. ರೀಲ್ಸ್ ಹುಚ್ಚಾಟಕ್ಕೆ ಬಿದ್ದು ಯುವತಿಯನ್ನು ಹಿಂಬದಿ ಕೂರಿಸಿ ಡೇಂಜರ್ ಡ್ರೈವ್ ಮಾಡಿದ್ದು, ಹೆದ್ದಾರಿ ಮೇಲೆ ವ್ಹೀಲಿಂಗ್ ಮಾಡಿರುವ ಯುವಕ ಯುವತಿಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕ-ಯುವತಿಯ ಮೇಲೆ ಕ್ರಮ ಜರುಗಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿನ್ನೆಲೆ ಬಿಡದಿ ಪೊಲೀಸರು ಸದ್ಯ ಆ ಬೈಕ್ ನಂಬರ್ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

25ಕೆಆರ್ ಎಂಎನ್ 12,13

ಬೆಂಗಳೂರು- ಮೈಸೂರು ರಸ್ತೆಯ ಬಿಡದಿ ಬಳಿ ಯುವಕನೊಬ್ಬ ಯುವತಿಯನ್ನು ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿರುವುದು.