ಸಾರಾಂಶ
ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆ ಸ್ಥಳೀಯ ಹಾಗೂ ವಲಸೆ ಪಕ್ಷಿಗಳಿಗೆ ಆಶ್ರಯ ನೀಡಿದ್ದು, ನೀರು ಗೊರವ (ಬ್ಲಾಕ್ ವಿಂಗ್ಡ್ ಸ್ಟಿಲ್ಟ್) ಮೀನುಗಳ ಬೇಟೆಯಲ್ಲಿ ನಿರತವಾಗಿವೆ.
ಹಾವೇರಿ: ಇಲ್ಲಿಯ ಹೆಗ್ಗೇರಿಕೆರೆಯ ನೀರು ನಗರದ ಜನತೆಯ ದಾಹ ತೀರಿಸಲು ಬಳಕೆ ಮಾಡುತ್ತಿರುವ ಕಾರಣ ಕೆರೆ ಬರಿದಾಗುತ್ತಿದೆ. ಇತ್ತ ಬರಿದಾಗುತ್ತಿರುವ ಕೆರೆಯಲ್ಲಿ ಜಲಚರಗಳು, ಮೀನು, ಶಂಕುಹುಳಗಳು ಪಕ್ಷಿಗಳಿಗೆ ಬೇಟೆಯಾಡಲು ಸುಲಭವಾಗಿ ಸಿಗುತ್ತಿರುವ ಕಾರಣಕ್ಕೆ ಹಲವಾರು ಪಕ್ಷಿಗಳ ಹಿಂಡು ಕೆರೆಗೆ ದಾಂಗುಡಿ ಇಟ್ಟಿವೆ. ಹಾವೇರಿಯ ಐತಿಹಾಸಿಕ ಹೆಗ್ಗೇರಿ ಕೆರೆ ಸ್ಥಳೀಯ ಹಾಗೂ ವಲಸೆ ಪಕ್ಷಿಗಳಿಗೆ ಆಶ್ರಯ ನೀಡಿದ್ದು, ನೀರು ಗೊರವ (ಬ್ಲಾಕ್ ವಿಂಗ್ಡ್ ಸ್ಟಿಲ್ಟ್) ಮೀನುಗಳ ಬೇಟೆಯಲ್ಲಿ ನಿರತವಾಗಿವೆ.
ನೀರಿನ ದಡದ ಹಾರುತ್ತಾ ಓಡುತ್ತಾ ತನ್ನ ಸುಂದರವಾದ ಗುಲಾಬಿ ಕಾಲುಗಳನ್ನು ನೀಳವಾದ ಕಪ್ಪು ಕೊಕ್ಕು ಎರಡು ಒಂದಕ್ಕೊಂದು ಸವಾಲು ಎಸೆಯುವಂತೆ ಜೋಡಿಯಾಗಿ ಆಹಾರ ಹುಡುಕಾಟದ ಸ್ಪರ್ಧೆಗೆ ಇಳಿದಿರುತ್ತವೆ. ಹಾವೇರಿ ಜಿಲ್ಲೆಯ ಕೆರೆ, ಹೊಂಡಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನೀರು ಗೊರವ ಜೋಡಿಯಾಗಿರುತ್ತವೆ. ನೀರು ಗೊರವವೊಂದು ಹೆಗ್ಗೇರಿಕೆರೆಯಲ್ಲಿ ಸಿಗಡಿ ತರಹ ಕಾಣುವ ಮೀನನ್ನು ಬೇಟೆಯಾಡುತ್ತಿದ್ದ ದೃಶ್ಯವನ್ನು ಮಾಲತೇಶ ಅಂಗೂರ ಸೆರೆ ಹಿಡಿದಿದ್ದಾರೆ.