ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಮನುಷ್ಯ ಮನುಷ್ಯನಾಗಿ ಬದುಕಲು ಮಹರ್ಷಿ ವಾಲ್ಮೀಕಿಯವರ ಆಚಾರ-ವಿಚಾರಗಳು ಅನುಸರಣೆ ಅಗತ್ಯವಾಗಿದೆ. ಇಂದಿನ ಯುವ ಸಮುದಾಯ ವಾಲ್ಮೀಕಿ ತತ್ವಾದರ್ಶ ಅನುಸರಿಸುವುದರ ಮೂಲಕ ಸದೃಢ ಸಮಾಜ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ವಿಜಯಪುರ-ಬಾಗಲಕೋಟೆ ಕೆಎಂಎಫ್ ನಿರ್ದೇಶಕ ಲಕ್ಷ್ಮಣ ಮಾಲಗಿ ಹೇಳಿದರು.ಪಟ್ಟಣದಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ನಡೆದ ಪೂಜಾ ಸಮಾರಂಭದಲ್ಲಿ ಮಾತನಾಡಿ, ಮಹರ್ಷಿ ಅವರು ರಾಮಾಯಣ ರಚಿಸಿದಂತಹ ಮಹಾನ್ ವ್ಯಕ್ತಿಯಾಗಿದ್ದು, ಅವರು ರಚಿಸಿದ ಇನ್ನೂ ಅನೇಕ ಸಾಹಿತ್ಯಗಳ ಕುರಿತು ಅಧ್ಯಯನವಾಗಬೇಕಾಗಿದೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೇ ಮಹನೀಯರ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ, ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೇ ಶಿಕ್ಷಣವು ಅತೀ ಪ್ರಮುಖವಾದಂತಹ ಪಾತ್ರ ವಹಿಸುತ್ತದೆ. ಸರ್ಕಾರವು ಪರಿಶಿಷ್ಟರ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಲು ತಿಳಿಸಿದರು.ವಾಲ್ಮೀಕಿ ಸಮಾಜದ ಮುಖಂಡ ಗೋವಿಂದ ಕೌಲಗಿ ಮಾತನಾಡಿ, ವಿಶ್ವಕ್ಕೆ ಮೊಟ್ಟ ಮೊದಲು ಮಹಾಕಾವ್ಯ ನೀಡಿದಂತಹ ಸಮುದಾಯ ವಾಲ್ಮೀಕಿ ಸಮುದಾಯವಾಗಿದ್ದರೂ ಸಹ ನಮ್ಮ ಸಮುದಾಯ ಸಮಾಜದ ಮುಂಚೂಣಿಗೆ ಬರಲಾಗುತ್ತಿಲ್ಲ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು.ಈ ವೇಳೆ ಭೀಮಶಿ ನಾವಲಗಿ, ತಿಪ್ಪಣ್ಣ ಸತ್ತರಗಿ, ಮುದಕಪ್ಪ ನಾವಲಗಿ, ರಮೇಶ ಗಸ್ತಿ, ಭೀಮಶಿ ಗಸ್ತಿ, ಯಂಕಪ್ಪ ಗಸ್ತಿ, ಲಾಯಪ್ಪ ಕಲಾದಗಿ, ಲೋಕಣ್ಣ ಗಸ್ತಿ, ದುಂಡಪ್ಪ ಗಸ್ತಿ, ಕುಮಾರ ಈರಣ್ಣವರ, ರಾಮಣ್ಣಾ ಗಸ್ತಿ, ಈರಣ್ಣ ಗಸ್ತಿ, ಯಮನಪ್ಪ ಗಸ್ತಿ, ಹಣಮಂತ ನಾವಲಗಿ, ದುರಗಪ್ಪ ಸಾಬಣ್ಣವರ ವಾಲ್ಮೀಕಿ ಸಮುದಾಯದ ಹಿರಿಯರು ಹಾಗೂ ಯುವ ಮುಖಂಡರು ಇದ್ದರು.