ಸಾರಾಂಶ
ರಾತ್ರಿ ನಿರಂತರ ಸುರಿದ ಚಿತ್ತ ಮಳೆಗೆ ಗೋಡೆ ಕುಸಿದು ಮೂವರಿಗೆ ಗಾಯವಾದ ಘಟನೆ ಮಲೇಬೆನ್ನೂರು ಸಮೀಪದ ನಂದಿಗಾವಿ ಗ್ರಾಮದಲ್ಲಿ ನಡೆದಿದೆ.
ಮಲೇಬೆನ್ನೂರು: ರಾತ್ರಿ ನಿರಂತರ ಸುರಿದ ಚಿತ್ತ ಮಳೆಗೆ ಗೋಡೆ ಕುಸಿದು ಮೂವರಿಗೆ ಗಾಯವಾದ ಘಟನೆ ಸಮೀಪದ ನಂದಿಗಾವಿ ಗ್ರಾಮದಲ್ಲಿ ನಡೆದಿದೆ. ನಂದಿಗಾವಿ ಗ್ರಾಮದ ಎ.ಕೆ. ಕಾಲೋನಿ ನಿವಾಸಿ ಫಕ್ಕೀರಮ್ಮ, ಸಿದ್ದಮ್ಮ (೩೨) ಹಾಗೂ ಮೊಮ್ಮೊಗಳಾದ ಯಮುನಾ (೬) ಎಂಬವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಆನಂದ್, ಗ್ರಾಮಾಡಳಿತ ಅಧಿಕಾರಿ ವಿಜಯ್ ಮಹಂತೇಶ್ ಭೇಟಿ ನೀಡಿ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ವ್ಶೆದ್ಯರಿಂದ ಪ್ರಥಮ ಚಿಕಿತ್ಸೆ ಕಲ್ಪಿಸಲು ನೆರವಾಗಿದ್ದಾರೆ.
ಮಳೆ ಪ್ರಮಾಣ: ಹರಿಹರ-೭೮ ಮಿಮೀ, ಕೊಂಡಜ್ಜಿ-೭೫.೨, ಹೊಳೆಸಿರಿಗೆರೆ-೪೬.೨ ಮಲೇಬೆನ್ನೂರು-೪೮ ಒಟ್ಟು ೨೪೭ ಮಿ.ಮೀ. ಮಳೆಯಾಗಿದೆ ಎಂದು ಕಂದಾಯ ಅಧಿಕಾರಿಗಳು ತೀಳಿಸಿದ್ದಾರೆ.- - - -೧೭ಎಂಬಿಆರ್೨: ಗೋಡೆ ಬಿದ್ದ ಮಹಿಳೆಗೆ ಚಿಕಿತ್ಸೆ.