ಸಾರಾಂಶ
ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ನಾಟಕಗಳನ್ನು ಮೊಬೈಲ್‌ಗಳಲ್ಲಿ ಪರಿಸ್ಥಿತಿಯಾಗಿದೆ. ಇದರ ನಡುವೆಯೂ ಗ್ರಾಮೀಣ ಭಾಗಗಳಲ್ಲಿ ರಂಗಭೂಮಿ ಕಲೆ ಜೀವಂತವಾಗಿರುವುದು ಪ್ರಶಂಸನೀಯ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.
ಹೊಸಕೋಟೆ: ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ನಾಟಕಗಳನ್ನು ಮೊಬೈಲ್‌ಗಳಲ್ಲಿ ಪರಿಸ್ಥಿತಿಯಾಗಿದೆ. ಇದರ ನಡುವೆಯೂ ಗ್ರಾಮೀಣ ಭಾಗಗಳಲ್ಲಿ ರಂಗಭೂಮಿ ಕಲೆ ಜೀವಂತವಾಗಿರುವುದು ಪ್ರಶಂಸನೀಯ ಎಂದು ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ತಿಳಿಸಿದರು.
ತಾಲೂಕಿನ ನಂದಗುಡಿಯ ಇಟ್ಟಸಂದ್ರ ಗ್ರಾಪಂ ವ್ಯಾಪ್ತಿಯ ಈ.ಹೊಸಹಳ್ಳಿಯಲ್ಲಿ ನಡೆದ ಐಬಸಾಪುರ ಶ್ರೀ ಮಾರುತಿ ಡ್ರಾಮ ಸೀನರಿ ಆಯೋಜಿಸಿದ್ದ ದಾನ ವೀರ ಶೂರ ಕರ್ಣ ಎಂಬ ಕನ್ನಡ ಪೌರಾಣಿಕ ನಾಟಕ ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕತೆಯ ಮಾಯಾಲೋಕದಲ್ಲಿ ಸಿಲುಕಿರುವ ಪ್ರತಿಯೊಬ್ಬರು ಗ್ರಾಮೀಣ ಭಾಗಗಳಲ್ಲಿ ಬಣ್ಣ ಹಚ್ಚಿಕೊಂಡು ತೆರೆ ಮೇಲೆ ಮಾಡುವ ಪೌರಾಣಿಕ ನಾಟಕ ನೋಡುವುದೇ ವಿರಳ. ಆದರೂ ನಾಟಕ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿರುವುದು ಪ್ರಶಂಶನೀಯ. ಪೌರಾಣಿಕ ನಾಟಕಗಳಲ್ಲಿ ಪಾರಂಪರಿಕ ಆಚರಣೆ, ದೈವಭಕ್ತಿ, ಬದುಕಿನ ಸಾರವೇ ಅಡಗಿರುವ ಹಿನ್ನೆಲೆ ಬಣ್ಣಹಚ್ಚಿ ಪಾತ್ರ ಮಾಡುವ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ಮಾಜಿ ಹಿರಿಯ ನಿರ್ದೇಶಕ ಗೋಪಾಲಗೌಡ ಮಾತನಾಡಿ, ಗ್ರಾಮಗಳಲ್ಲಿ ಸಂಜೆ ವೇಳೆ ಒಂದೆಡೆ ಸೇರಿ ಹರಿಕಥೆ, ಭಜನೆ, ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಹಿಂದೂ ಸಂಸ್ಕೃತಿ ಬಗ್ಗೆ ಕುಟುಂಬಸ್ಥರಿಗೆ ಹಾಗೂ ಗ್ರಾಮಸ್ಥರಿಗೆ ಅರಿವು ಮೂಡಿಸಿ ಜನರಿಗೆ ಮನವರಿಕೆ ಮಾಡಿಸುತ್ತಿದ್ದರು. ಜೊತೆಗೆ ದೇವರ ಚರಿತ್ರೆ ಅದರ ಬಗ್ಗೆ ಉಪಕಥೆಗಳನ್ನು ಮನರಂಜನಾ ರೀತಿಯಲ್ಲಿ ಮನವರಿಕೆ ಮಾಡಿಕೊಡುತ್ತಿದ್ದರು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿವಿ ಸತೀಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಯುವ ಮುಖಂಡ ನಾರಾಯಣಗೌಡ, ಟಿಎಪಿಸಿಎಂಎಸ್‌ನ ಉಪಾಧ್ಯಕ್ಷ ರವೀಂದ್ರ, ತಾಪಂನ ಮಾಜಿ ಅಧ್ಯಕ್ಷ ಕೆಂಚೆಗೌಡ, ಮಾಜಿ ಸದಸ್ಯ ವೆಂಕಟೇಶ್, ಯಾದವ ಮುಖಂಡ ಆನಂದಪ್ಪ, ಗ್ರಾಪಂ ಸದಸ್ಯರಾದ ಜಯರಾಮ್, ರಮೇಶ್, ಮುರುಳಿಮೋಹನ್, ನಾರಾಯಣಮ್ಮ, ಮುಖಂಡರಾದ ಐ.ಸಿ. ಮುನಿಶಾಮಗೌಡ, ದೊಡ್ಡನಾರಾಯಣಪ್ಪ, ವಾಸುದೇವಮೂರ್ತಿ, ಲಕ್ಷ್ಮೀನಾರಾಯಣ್, ಮಂಜುನಾಥ್, ನವೀನ್ ಇತರರಿದ್ದರು.