ಮೆದುಳಿನಲ್ಲಿ ಗೆಡ್ಡೆ ಕ್ಯಾನ್ಸರ್‌ಗೆ ಇದೆ ಅತ್ಯಾಧುನಿಕ ಚಿಕಿತ್ಸೆ..!

| Published : Jun 15 2024, 01:01 AM IST

ಮೆದುಳಿನಲ್ಲಿ ಗೆಡ್ಡೆ ಕ್ಯಾನ್ಸರ್‌ಗೆ ಇದೆ ಅತ್ಯಾಧುನಿಕ ಚಿಕಿತ್ಸೆ..!
Share this Article
  • FB
  • TW
  • Linkdin
  • Email

ಸಾರಾಂಶ

ಮಿದುಳಿನ ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆಗಳು ಇವೆ ಎಂಬುದರ ಮೇಲೆ ರೋಗ ಲಕ್ಷಣಗಳು ಇರುತ್ತವೆ. ಸಾಮಾನ್ಯವಾಗಿ ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ಜ್ಞಾಪಕ ಶಕ್ತಿ ನಷ್ಟ, ಅಸ್ಪಷ್ಟ ಮಾತು, ಕೈ ಮತ್ತು ಕಾಲುಗಳಲ್ಲಿ ದೌರ್ಬಲ್ಯ ಮತ್ತು ದೇಹದಲ್ಲಿ ಅಸಮತೋಲನ ಕಂಡು ಬರುತ್ತದೆ. ಅಲ್ಲದೇ, ಈಗ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಥೆರಪಿಯಂತಹ ನವೀನ ತಂತ್ರಜ್ಞಾನ ಬಳಸಿಕೊಂಡು ಮಿದುಳು ಗಡ್ಡೆಗೆ ಮತ್ತು ಮರುಕಳಿಸಬಹುದಾದ ಮಾರಣಾಂತಿಕ ಗಡ್ಡೆಗಳಿಗೆ ಚಿಕಿತ್ಸೆ ನೀಡಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಇನ್ನಿತರೆ ಕ್ಯಾನ್ಸರ್‌ ಗಳಿಗೂ ಮೆದುಳಿನಲ್ಲಿ ಗೆಡ್ಡೆ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗೂ ಸಾಕಷ್ಟು ವ್ಯತ್ಯಾಸವಿದ್ದು, ಮೆದಳಿನ ಗೆಡ್ಡೆ ಕ್ಯಾನ್ಸರ್‌ಗೆ ಅತ್ಯಾಧುನಿಕ ಚಿಕಿತ್ಸೆವಿದೆ ಎಂದು ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಮಾಧವಿ ತಿಳಿಸಿದರು.

ಈಗ ಮಿದುಗಳು ಗಡ್ಡೆ ಕ್ಯಾನ್ಸರ್‌ ಗೆ ಅತ್ಯಾಧುನಿಕ ಹಾಗೂ ಪರಿಣಾಮಕಾರಿ ಚಿಕಿತ್ಸೆ ಇದೆ. ಹೀಗಾಗಿ ಅಂತಹ ಲಕ್ಷಣ ಕಾಣಿಸಿಕೊಂಡವರು ಕೂಡಲೇ ಹಾಗೂ ನಿಯಮಿತವಾಗಿ ಚಿಕಿತ್ಸೆ ಪಡೆಯುವುದು ಒಳಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಮಿದುಳಿನ ಯಾವ ಭಾಗದಲ್ಲಿ ಕ್ಯಾನ್ಸರ್ ಗಡ್ಡೆಗಳು ಇವೆ ಎಂಬುದರ ಮೇಲೆ ರೋಗ ಲಕ್ಷಣಗಳು ಇರುತ್ತವೆ. ಸಾಮಾನ್ಯವಾಗಿ ತಲೆನೋವು, ವಾಂತಿ, ದೃಷ್ಟಿ ಮಂದವಾಗುವುದು, ಜ್ಞಾಪಕ ಶಕ್ತಿ ನಷ್ಟ, ಅಸ್ಪಷ್ಟ ಮಾತು, ಕೈ ಮತ್ತು ಕಾಲುಗಳಲ್ಲಿ ದೌರ್ಬಲ್ಯ ಮತ್ತು ದೇಹದಲ್ಲಿ ಅಸಮತೋಲನ ಕಂಡು ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ, ಈಗ ಸ್ಟಿರಿಯೋಟ್ಯಾಕ್ಟಿಕ್ ರೇಡಿಯೋ ಥೆರಪಿಯಂತಹ ನವೀನ ತಂತ್ರಜ್ಞಾನ ಬಳಸಿಕೊಂಡು ಮಿದುಳು ಗಡ್ಡೆಗೆ ಮತ್ತು ಮರುಕಳಿಸಬಹುದಾದ ಮಾರಣಾಂತಿಕ ಗಡ್ಡೆಗಳಿಗೆ ಚಿಕಿತ್ಸೆ ನೀಡಬಹುದು. ಇದು ರೋಗಿಗಳಲ್ಲಿ ಭರವಸೆ ಮೂಡಿಸುತ್ತದೆ. ಈ ಚಿಕಿತ್ಸಾ ವಿಧಾನ ನಿಖರವಾಗಿ ಗಡ್ಡೆಗೇ ಚಿಕಿತ್ಸೆ ತಲುಪಿಸುತ್ತದೆ ಎಂದು ಅವರು ವಿವರಿಸಿದರು.

ನಂತರ, ಸಾರ್ವಜನಿಕರಲ್ಲಿ ಮಿದುಳು ಗಡ್ಡೆ ಬಗ್ಗೆ ಅರಿವು ಮೂಡಿಸಲು ಹಾಗೂ ಲಭ್ಯವಿರುವ ಚಿಕಿತ್ಸೆ ಬಗ್ಗೆ ಗಮನ ಸೆಳೆದು ಭರವಸೆ ಮೂಡಿಸಲು ಪ್ರತಿ ವರ್ಷ ಜೂ. 8ರಂದು ವಿಶ್ವ ಮೆದುಳಿನ ಗಡ್ಡೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಬಳಿಕ, ಆರೋಗ್ಯಕರ ಜೀವನಶೈಲಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ನಿತ್ಯ 30 ರಿಂದ 40 ನಿಮಿಷ ಮಧ್ಯಮ ವ್ಯಾಯಾಮ ಮಾಡಬೇಕು, ಆರರಿಂದ ಎಂಟು ಗಂಟೆ ನಿದ್ರೆ, ಮೊಬೈಲ್ ನೋಡುವ ಸಮಯ ಕಡಿಮೆ ಮಾಡಿಕೊಳ್ಳುವ ಬಗ್ಗೆ ಗಮನ ಸೆಳೆಯಬೇಕು ಎಂದರು.

ಆಸ್ಪತ್ರೆ ಸಿಇಇ ಗೌತಮ್ ಧರ್ಮೇಲಾ, ವಿಕರಣ ತಜ್ಞ ಡಾ. ವಿನಯ್‌ ಕುಮಾರ್, ಮಾರುಕಟ್ಟೆ ವ್ಯವಸ್ಥಾಪಕ ಆನಂದ್ ಇದ್ದರು.