ಬಿಜೆಪಿ ಮತಗಳವಿಗೆ ಪ್ರಖರ ಸಾಕ್ಷಿಗಳಿವೆ : ಉಮಾಶ್ರೀ

| N/A | Published : Oct 30 2025, 03:00 AM IST

Umashree Congress

ಸಾರಾಂಶ

ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದೇಶಾದ್ಯಂತ ಮತಗಳುವು ಪ್ರಕರಣಗಳು ಸಾಕ್ಷಿ ಸಮೇತ ಸಿಕ್ಕಿದ್ದು, ಇದೀಗ ಕರ್ನಾಟಕದಲ್ಲಿನ ಕೆಲ ಕಾಂಗ್ರೆಸ್ ಭದ್ರಕೋಟೆ ಪ್ರದೇಶಗಳಲ್ಲೂ ಮತಗಳವು ಮಾಡಿದ ಬಗ್ಗೆ ಸಾಕ್ಷಾಧಾರಗಳು ದೊರೆತಿದ್ದು, ಎಸ್‌ಐಟಿ ತನಿಖೆಯಿಂದ ಹೊರಬರಲಿದೆ

  ರಬಕವಿ-ಬನಹಟ್ಟಿ :  ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ದೇಶಾದ್ಯಂತ ಮತಗಳುವು ಪ್ರಕರಣಗಳು ಸಾಕ್ಷಿ ಸಮೇತ ಸಿಕ್ಕಿದ್ದು, ಇದೀಗ ಕರ್ನಾಟಕದಲ್ಲಿನ ಕೆಲ ಕಾಂಗ್ರೆಸ್ ಭದ್ರಕೋಟೆ ಪ್ರದೇಶಗಳಲ್ಲೂ ಮತಗಳವು ಮಾಡಿದ ಬಗ್ಗೆ ಸಾಕ್ಷಾಧಾರಗಳು ದೊರೆತಿದ್ದು, ಎಸ್‌ಐಟಿ ತನಿಖೆಯಿಂದ ಹೊರಬರಲಿದೆ ಎಂದು ಮಾಜಿ ಸಚಿವೆ, ವಿಧಾನ ಪರಿಷತ್ ಸದಸ್ಯೆ ಡಾ.ಉಮಾಶ್ರೀ ಹೇಳಿದರು.

ವಾರ್ಡ್‌ ನಂ.8ರಲ್ಲಿ ಮನೆ ಮನೆಗೆ ತೆರಳಿ ಮತಗಳವು ಅಭಿಯಾನ

ಬನಹಟ್ಟಿಯಲ್ಲಿ ಬುಧವಾರ ವಾರ್ಡ್‌ ನಂ.8ರಲ್ಲಿ ಮನೆ ಮನೆಗೆ ತೆರಳಿ ಮತಗಳವು ಅಭಿಯಾನ ನಡೆಸಿ ಜನತೆಯಲ್ಲಿ ಜಾಗೃತಿ ಮೂಡಿಸಿ ಬಳಿಕ ನಡೆಸ ಸಭೆನ್ನುದ್ದೇಶಿಸಿ ಮಾತನಾಡಿ, ಮತಗಳವು ಕೇಂದ್ರದ ಬಿಜೆಪಿ ಸರ್ಕಾರದ ಹೊಸ ಮೋಸದ ಜಾಲವಾಗಿದ್ದು, ಇದು ದೇಶದ ಸಾರ್ವಭೌಮತೆ ಮೇಲೆ ಮಾಡಿದ ನೇರ ಗದಾಪ್ರಹಾರವಾಗಿದೆ. ಬಜೆಪಿಯ ಮುಖವಾಡ ಕಳಚಲು ದೇಶವ್ಯಾಪಿ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿ ಜನತೆಯಲ್ಲಿ ಸಹಿ ಸಂಗ್ರಹಣೆ ಮಾಡುವ ಮೂಲಕ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ರಾಹುಲ್ ಬೆಂಬಲಿಸಲು ಕರೆ

ಧುರೀಣರಾದ ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ ಮಾತನಾಡಿ ಪ್ರಜಾತಂತ್ರ ಮತ್ತು ಸಂವಿಧಾನ ಉಳಿಸಲು ಪ್ರತಿಯೊಬ್ಬರು ರಾಹುಲ್ ಗಾಂಧಿಯವರನ್ನು ಬೆಂಬಲಿಸಬೇಕೆಂದರು. ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಮಡ್ಡಿಮನಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದಾನಪ್ಪ ಹುಲಜತ್ತಿ, ಕುತುಬುದೀನ್ ಮುಲ್ಲಾ, ಕಾಡು ಮೋಪಗಾರ, ಸವಿತಾ ಮಹಿಷವಾಡಗಿ, ಆಶಾ ಭೂತಿ, ಆಯೇಷಾ ಫಣಿಬಂಧ ಇತರರು ಇದ್ದರು.

Read more Articles on